Thursday, April 11, 2013

ಕೊನೆಗೂ ಮುಕ್ತಿ ಕಂಡ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ಹೊಂಡ:ಮಂಜೇಶ್ವರ್ ಟೈಮ್ಸ್ ವರದಿ ಫಲಶ್ರುತಿ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಇತ್ತೀಚೆಗೆ ಮೂವರು ಅಮಾಯಕರನ್ನು ಬಲಿ ತೆಗೆದುಕೊಂಡ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಇದೀಗ ಮುಕ್ತಿ ಸಿಕ್ಕಿದಂತಾಗಿದೆ ಕಳೆದ ಕೆಲವು ತಿಂಗಳುಗಳ ಮೊದಲು ಈ ಹೊಂಡವು ಸೃಷ್ಟಿಯಾಗಿದ್ದು ಇದು ಹಲವು ಅಫಘಾತಕ್ಕೆ ಕಾರಣವಾಗುತಿತ್ತು.ಇತ್ತೀಚೆಗೆ ಟ್ಯಾಂಕರ್ ಲಾರಿಯೊಂದು ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.ಕಣ್ಣಿದ್ದೂ ಕುರುಡರಂತೆ ವರ್ತಿಸುತಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುವ ರೀತಿಯಲ್ಲಿ ಅಂತರ್ಜಾಲ ತಾಣದಲ್ಲಿ ಮಂಜೇಶ್ವರ್ ಟೈಮ್ಸ್  ಸಮಗ್ರವಾದ ವರದಿಯನ್ನು ಇತ್ತೀಚೆಗೆ ಪ್ರಕಟಿಸಿ ಅದನ್ನು ಅಧಿಕಾರಿಗಳಿಗೆ ಇ ಮೇಲ್ ಮಾಡಿತ್ತು. ಇದೀಗ ವರದಿಗೆ ಸ್ಪಂಧಿಸಿದ ಅಧಿಕಾರಿಗಳು ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾದ ಹೊಂಡವನ್ನು ಸರಿಪಡಿಸಿದ್ದಾರೆ.
ರಾಷ್ಟ್ರ‍ೀಯ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚುವ ಕೆಲಸವನ್ನು ಗುತ್ತಿಗೆದಾರರು  ಮಂಜೇಶ್ವರ ಸಮೀಪದ ಪೊಸೋಟಿನಲ್ಲಿ ಕೆಲಸವನ್ನು ಅಂತ್ಯಗೊಳಿಸಿ ಕೈತೊಳೆದಿದ್ದರು. ಇದೀಗ ಪತ್ರಿಕೆಯ ವರದಿಯು ಅಧಿಕಾರಿಗಳನ್ನು ಎದ್ದೆಬ್ಬಿಸಿ ಗುತ್ತಿಗೆದಾರರು ಕುಂಜತ್ತೂರಿನ ಹೊಂಡವನ್ನು ಸರಿಪಡಿಸುವ ಕೆಲಸ ಮಾಡಲು ಪ್ರೇರೇಪಿಸಿರುವುದಾಗಿ ನಾಗರಿಕರಿಂದಲೂ ಕೇಳಿ ಬಂದಿದೆ ಮಾತ್ರವಲ್ಲದೆ ಮಂಜೇಶ್ವರ್ ಟೈಮ್ಸ್ ಗೆ ಅಭಿನಂದನೆ ಕೂಡಾ ವ್ಯಕ್ತವಾಗಿದೆ

No comments:

Post a Comment