Wednesday, April 3, 2013

ಕುಂಜತ್ತೂರಿನ ಹಲವೆಡೆ ಕಳವಿಗೆ ಯತ್ನನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರು,ಮಾಡ ಪರಿಸರದಲ್ಲಿ ಕಳೆದ ರಾತ್ರಿ ಕೆಲವು ಅಂಗಡಿಗಳನ್ನು ಕೇಂದ್ರೀಕರಿಸಿ ಕಳವಿಗೆ ಯತ್ನ ನಡೆಸಲಾಗಿದೆ.
ಕುಂಜತ್ತೂರು ಜಂಕ್ಷನ್ ನಲ್ಲಿರುವ ತರಕಾರಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಡ್ರಾವರ್ ನಲ್ಲಿದ್ದ ೭೦೦ ರೂವನ್ನು ಕಳವು ಗೈದು ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿರುತ್ತಾರೆ. ಅದೇ ರೀತಿ ಅದರ ಸಮೀಪದ ಕಟ್ಟಡದಲ್ಲಿರುವ ಸೈಕಲ್ ಅಬ್ಬಾಸ್ ಎಂಬವರ ಅಂಗಡಿಯ ಬೀಗವನ್ನು ಮುರಿಯಲು ಪ್ರಯತ್ನಿಸಿ ವಿಪಲರಾಗಿ ಹೋಗಿರುತ್ತಾರೆ. ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೈವಗಳ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಶಾನ್ವಿ ಸ್ವೀಟ್ಸ್ ಅಂಗಡಿಯ ಶಟರನ್ನು ಮುರಿಯಲು ಪ್ರಯತ್ನಿಸಿ ಅರ್ಧದಲ್ಲಿ ಬಿಟ್ಟು ಹೋಗಿರುವುದಾಗಿ ದೂರಲಾಗಿದೆ. ಎಲ್ಲಾ ಕಳ್ಳತನದ ಪ್ರಯತ್ನವೂ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಅಂಗಡಿಗಳನ್ನು ಕೇಂದ್ರೀಕರಿಸಿ ನಡೆಸಲಾಗಿದೆ. ಮೂರು ಸ್ಥಳದಲ್ಲೂ ಕಳ್ಳತನಕ್ಕೆ ಪ್ರಯತ್ನ ನಡೆಸಿದವರೂ ಒಂದೇ ತಂಡವೆಂದು ಶಂಶಯಿಸಲಾಗಿದೆ. ಮಂಜೇಶ್ವರ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ

No comments:

Post a Comment