Sunday, April 14, 2013

ಒಂದಕ್ಕಿಂತ ಅಧಿಕ ಕುಟುಂಬ ಒಂದೇ ಮನೆಯಲ್ಲಿ ವಾಸಿಸುತಿದ್ದಲ್ಲಿ ಪ್ರತ್ಯೇಕ ಅಡುಗೆ ಅನಿಲ ಸಂಪರ್ಕ:ಹೈಕೋರ್ಟ್




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಒಂದೇ ಮನೆಯಲ್ಲಿ ಒಂದು ಅಡುಗೆ ಕೋಣೆಯಿದ್ದು ಜತೆಯಾಗಿ ಇತರ ಕುಟುಂಬಗಳು ವಾಸಿಸುತಿದ್ದಲ್ಲಿ ಅವುಗಳಿಗೆ ಬೇರೆ ಬೇರೆಯಾಗಿ ಅಡುಗೆ ಅನಿಲ ಸಂಪರ್ಕ ನೀಡಬಹುದಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಒಂದು ಮನೆಗೆ ಒಂದೇ ಅಡುಗೆ ಅನಿಲ ಸಂಪರ್ಕವೆಂಬ ಎಲ್.ಪಿ.ಜಿ ನಿಬ್ಬಂಧನೆ ಪ್ರಕಾರ ಕೇರಳದ ಕೊಚ್ಚಿ ನಿವಾಸಿ ಬಿ.ಶ್ರೀಕುಮಾರ್ ಎಂಬವರ ಮನೆಯಲ್ಲಿ ಒಂದಕ್ಕಿಂತ ಅಧಿಕ ಹೊಂದಿದ್ದ ಅನಿಲ ಸಂಪರ್ಕವನ್ನು ಎಲ್.ಪಿ.ಜಿ.ಅಧಿಕೃತರು ರದ್ದುಪಡಿಸಿದ್ದರು.ಅವರ ಕ್ರಮವನ್ನು ಪ್ರಶ್ನಿಸಿ ಶ್ರೀಕುಮಾರ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಅದನ್ನು ಸ್ವೀಕರಿಸಿ ಪರಿಶೀಲಿಸಿದ ನ್ಯಾಯಮೂರ್ತಿ ಸಿ.ಕೆ.ಅಬ್ದುಲ್ ರಹೀಂ ಏಕ ಸದಸ್ಯ ಪೀಠ ಕೊನೆಗೆ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ದೂರುಗಾರ ಶ್ರೀಕುಮಾರ್ ರವರ ಮನೆಯಲ್ಲಿ ತಾಯಿ,ಪತ್ನಿ,ಪುತ್ರಿ ಹಾಗು ಪುತ್ರಿಯ ಪತಿ ವಾಸಿಸುತಿದ್ದರು.ವಿವಾಹಿತರಾದ ಮಕ್ಕಳನ್ನು ಬೇರೊಂದು ಕುಟುಂಬವೆಂದು ಪರಿಗಣಿಸಬಹುದು.ಅದರಂತೆ ಕುಟುಂಬಗಳ ಆಧಾರದಲ್ಲಿ ಅಂತಹ ಮನೆಗೆ ಪ್ರತ್ಯೇಕ ಪ್ರತ್ಯೇಕ ಅಡುಗೆ ಅನಿಲ ಸಂಪರ್ಕ ಕೊಡಿಸಬಹುದು.ಒಂದಕ್ಕಿಂತ ಅಧಿಕ ಕುಟುಂಬಗಳು ವಾಸಿಸುವ ಮನೆಗಳಿಗೆ ಒಂದಕ್ಕಿಂತ ಅಧಿಕ ಸಂಪರ್ಕ ಲಭಿಸಲು ಅರ್ಹತೆಯ ಬಗ್ಗೆ ಏನೂ ಹೇಳುವಂತಿಲ್ಲ. ಹಿನ್ನೆಲೆಯಲ್ಲಿ ಒಂದು ಮನೆಯಲ್ಲಿ ಒಂದಕ್ಕಿಂತ ಅಧಿಕ ಕುಟುಂಬಗಳು ವಾಸಿಸುತಿದ್ದಲ್ಲಿ ಅಡುಗೆ ಅನಿಲ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ಅಂತಹ ಮನೆಯವರು ತಮ್ಮ ಮನೆಯಲ್ಲಿರುವ ಕುಟುಂಬಗಳ ಬಗ್ಗೆ ಅಫಿದಾವತ್ ಸಲ್ಲಿಸಬೇಕೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ಹೆಚ್ಚುವರಿ ಸಂಪರ್ಕ ವಿಚ್ಚೇಧಿಸಿದ ಎಲ್.ಪಿ.ಜಿ ಅಧಿಕೃತರ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.


No comments:

Post a Comment