Wednesday, April 10, 2013

ಒಂದರೆ ಕ್ಷಣದೊಳಗೆ ಎಲ್ಲವೂ ಮುಗಿದಿತ್ತು...


 ಒಂದರೆ ಕ್ಷಣದೊಳಗೆ ಎಲ್ಲವೂ ಮುಗಿದಿತ್ತು...
 ಏಪ್ರಿಲ್ -10-2013

ಮಂಗಳೂರು,: ‘‘ನನ್ನ ಅಂಗಡಿ ಯೆದುರು ಬಂದಿದ್ದ ಲೈನ್ ಸೇಲ್ ಮಾರಾಟ ಪ್ರತಿನಿಧಿಗಳಿಂದ ಬೇಕರಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದೆ. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಕಣಿವೆಗೆ ಬಿದ್ದ ಸದ್ದ್ದು ಕೇಳಿಸಿತು. ಅದರೊಂದಿಗೆಯೇ ಬೃಹತ್ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಕಣ್ಣು ತೆರೆಯು ವುದರೊಳಗೆ ಟ್ಯಾಂಕರ್ ಸೇರಿದಂತೆ ಸುತ್ತಮುತ್ತಲಿನ ಸೊತ್ತುಗಳು ಸುಟ್ಟು ಭಸ್ಮವಾದವು...’’ ಹೀಗೆ ಘಟನೆಯನ್ನು ಪತ್ರಿಕಯೊಂದಿಗೆ ವಿವರಿಸುತ್ತಾರೆ ಅವಘಡವನ್ನು ಮಾರು ದೂರದಲ್ಲಿ ಕಂಡು ಓಡಿ ಜೀವ ಉಳಿಸಿಕೊಂಡ ಉಮರ್ ಸಾಲಿಮಾರ್.
ಘಟನಾ ಸ್ಥಳದಲ್ಲಿದ್ದ ಉಮರ್‌ರ ಅಂಗಡಿ ಸಂಪೂರ್ಣ ಬೆಂಕಿಗಾಹುತಿ ಯಾಗಿದೆ. ಅವರು ಓಡಿ ಬಚವಾಗಿ ದ್ದಾರೆ. ‘‘ಟ್ಯಾಂಕರ್ ಸ್ಫೋಟಿಸಿದ ಕ್ಷಣ ಮಾತ್ರದಲ್ಲಿ ತೆಂಗಿನಮರಗಳು ಬೆಂಕಿ ಯಿಂದ ಉರಿಯಲಾರಂಭಿಸಿದವು. ದಟ್ಟವಾದ ಹೊಗೆಯ ನಡುವೆ ಏನೂ ಕಾಣುತ್ತಿರಲಿಲ್ಲ. ಕೆಲವು ಹೊತ್ತಿನಲ್ಲಿ ಸುತ್ತಮುತ್ತಲಿನ ಮನೆಗಳಿಗೆ, ಮರಗಳಿಗೆ ಬೆಂಕಿ ವ್ಯಾಪಿಸಿತು. ತನ್ನ ಅಂಗಡಿಯಲ್ಲಿದ್ದ ಸೊತ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ. ಅಂಗಡಿಗೆ ಸಾಮಗ್ರಿ ತಂದು ಹಾಕುತ್ತಿದ್ದ ಲೈನ್‌ಸೇಲ್‌ನವರ ವಾಹನದಲ್ಲಿದ್ದ ಆಹಾರ ಸಾಮಗ್ರಿಗಳು ಕೂಡಾ ರಸ್ತೆಯಲ್ಲಿ ಸುಟ್ಟು ಭಸ್ಮವಾದವು’’ ಎಂದು ಅನಾಹುತವನ್ನು ಕಣ್ಣಾರೆ ಕಂಡ ಉಮರ್ ವಿವರಿಸುತ್ತಾರೆ.
ಅಪದ್ಬಾಂಧವ ಗಡಿಯಾರ್‌ನ ಪುತ್ತುಮೋನು: ಪೆರ್ನೆಯ ಅಗಿ ದುರಂತದ ಮಾಹಿತಿ ಸಿಕ್ಕಿದ ಸ್ವಲ್ಪ ಹೊತ್ತಿನಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಗಡಿಯಾರ್‌ನ ಪುತ್ತುಮೋನು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಪುತ್ತುಮೋನು ಹೆದ್ದಾರಿಯಲ್ಲಿ ಘಟಿಸುವ ಯಾವುದೇ ಅಪಘಾತದ ಸಂದರ್ಭ ದಲ್ಲಾಗಲೀ ಅಲ್ಲಿಗೆ ಹಾಜರಾಗಿ ತನ್ನಿಂದಾಗುವ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ರಸ್ತೆ ಬದಿಗೆ ಬಿದ್ದ ವಾಹನಗಳನ್ನು ರಾಟೆಯಂತಹ ಸಾಮಗ್ರಿಗಳ ನೆರವಿ ನಿಂದ ಮೇಲೆತ್ತುವುದರಲ್ಲಿ ಪುತ್ತುಮೋನು ನಿಸ್ಸೀಮರು. ಇಂದು ಘಟನೆ ನಡೆದ ಸಂದರ್ಭದಲ್ಲಿ ಬುಲೆಟ್ ಟ್ಯಾಂಕರ್‌ನ ಎದುರಿನ ಭಾಗವನ್ನು ಮೇಲೆತ್ತುವುದರ ಜೊತೆಗೆ ಸುಮಾರು ಗಂಟೆಗಳ ಕಾಲ ಸ್ಥಳದಲ್ಲಿ ಬೆಂಕಿ ನಂದಿಸಲುಅವರು ಸಹಾಯ ಮಾಡಿದ್ದಾರೆ.
ಅಪಾಯಕಾರಿ ತಿರುವು: ಪೆರ್ನೆಯ ಬಳಿ ಹೆದ್ದಾರಿಯ ಅಪಘಾತವಾದ ಸ್ಥಳ ದಲ್ಲಿ ಅಪಾಯಕಾರಿ ತಿರುವಿದೆ. ಇದಕ್ಕಿಂತ 20 ಅಡಿಗಳ ದೂರದಲ್ಲಿ ಇನ್ನೊಂದು ತಿರುವಿದ್ದು, ಅಲ್ಲೇನಾದರೂ ಈ ಘಟನೆ ಸಂಭವಿಸಿದ್ದರೆ ದುರಂತ ಇನ್ನಷ್ಟು ಭೀಕರವಾಗಿರುತ್ತಿತ್ತು. ಏಕೆಂದರೆ ಅಲ್ಲಿ ರಸ್ತೆಯ ಪಕ್ಕದಲ್ಲೇ ಒಂದು ವಿದ್ಯಾ ಸಂಸ್ಥೆ ಯಿದೆ. ಆದ್ದರಿಂದ ಈ ಅಪಾಯಕಾರಿ ತಿರುವುಗಳ ಬಗ್ಗೆ ಹೆದ್ದಾರಿ ಇಲಾಖೆ ಗಮನಹರಿಸಬೇಕಾಗಿದೆ. ಇಲ್ಲಿ ಅಪಘಾತ ಸಾಮಾನ್ಯ ಘಟನೆ ಎಂಬಂತಾಗಿ ಹೋಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಮಡಿದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಣೆ
 ಪುತ್ತೂರು ತಾಲೂಕು ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪ ಪೆರ್ನೆ ಎಂಬಲ್ಲಿ ಇಂದು ಬೆಳಗ್ಗೆ ನಡೆದ ಅನಿಲ ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ತಲಾ 1 ಲಕ್ಷ ರೂ.ಗಳ ಪರಿಹಾರ ವನ್ನು ದ.ಕ. ಜಿಲ್ಲಾಧಿಕಾರಿ ಹಷ್ತ ಗುಪ್ತ ಘೋಷಿಸಿದ್ದಾರೆ.
 ಶೇಕಡ 50 ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡವರಿಗೂ ತಲಾ ಒಂದು ಲಕ್ಷ ರೂ.ಗಳ ಪರಿಹಾರ ಹಾಗೂ ಶೇ.50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಾಗೂ ಸಂಬಂಧ ಪಟ್ಟ ಅನಿಲ ಸರಬರಾಜು ಕಂಪೆನಿ ಯಿಂದಲೂ ಸಿಗಬೇಕಾದ ಎಲ್ಲಾ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಕೃಪೆ:ವಾ.ಭಾರತಿ

No comments:

Post a Comment