Tuesday, April 2, 2013

ಕಂದಾಯ ಇಲಾಖೆಯ ಸರ್ಟಿ ಫಿಕೇಟ್ ಇನ್ನು ಮುಂದೆ ಆನ್ ಲೈನ್ ನಲ್ಲಿ ಲಭ್ಯ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ;ಜಾತಿ, ಆದಾಯ ಮೊದಲಾದ ರೀತಿಯ ಕಂದಾಯ ಇಲಾಖೆಗೆ ಸಂಭಂಧಪಟ್ಟ ೨೩ ಸರ್ಟಿ ಫಿಕೇಟ್ ಗಳು ಅರ್ಜಿದಾರನೀಗೆ ಇನ್ನು ಮುಂದೆ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ.
ಇನ್ನು ಮುಂದೆ ಗ್ರಾಮ ಕಛೇರಿ ಅದೇ ರೀತಿ ವಿಲೇಜ್ ಆಫೀಸ್ ಮೊದಲಾದ ಸ್ಥಳಗಳ ಮೆಟ್ಟಲೇರುವ ಸ್ಥಿತಿ ದೂರವಾಗಲಿದೆ.ಗ್ರಾಮಗಳ ಪ್ರತಿಯೊಂದು ಜಂಕ್ಷನ್ ನಲ್ಲೂ ಇರುವ ಅಕ್ಷಯ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಿ ಡಿಜಿಟಲ್ ಸರ್ಟಿ ಫಿಕೇಟನ್ನು ಪಡೆಯಬಹುದಾಗಿದೆ.ಇಂತಹ ಸೌಕರ್ಯಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇ - ಡಿಸ್ಟ್ರಿಕ್ಟ್ ಯೋಜನೆ ಜಾರಿಗೊಳಿಸಲಾಗಿದೆ.ಈ ಯೋಜನೆಯಂತೆ ಇನ್ನು ಮುಂದೆ ಕಂದಾಯ ಇಲಾಖೆಯ ಎಲ್ಲಾ ಸರ್ಟಿ ಫಿಕೇಟ್ ಇನ್ನು ಮುಂದೆ ಆನ್ ಲೈನ್ ನಲ್ಲಿ ಕೈ ಸೇರಲಿವೆ. ಇದರಂತೆ ರಾಜ್ಯದ ಯಾವುದೇ ಗ್ರಾಮ ಕಛೇರಿಗಳಿಂದ ಪಡೆಯಬೇಕಾದ ಸರ್ಟಿ ಫಿಕೇಟ್ ಗಳು ಅರ್ಜಿದಾರರು ಯಾವುದೇ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಅದನ್ನು ಆನ್ ಲೈನ್ ಮೂಲಕ ಅಲ್ಲಿಂದಲೇ ಪಡಕೊಳ್ಳಬಹುದಾಗಿದೆ.ಆನ್ ಲೈನ್ ಹಣ ಪಾವತಿಸುವ ಕ್ರಮ ಜ್ಯಾರಿಗೊಳ್ಳುವ ವೇಳೆ ಅರ್ಜಿದಾರರು ತಮ್ಮ ಮನೆಯಲ್ಲೇ ಕುಳಿತು ಎಲ್ಲಾ ಸವಲತ್ತು ಪಡಕೊಳ್ಳಬಹುದಾಗಿದೆ.ಅರ್ಜಿದಾರರು ಅಕ್ಷಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ವೇಳೆ ತಮ್ಮ ಮೊಬೈಲ್ ನಂಬ್ರವನ್ನು ನೀಡಬೇಕಾಗಿದೆ.ಸರ್ಟ್ ಫಿಕೇಟ್ ಸ್ವೀಕರಿಸಿದ ಮಾಹಿತಿಗಳನ್ನು ಅರ್ಜಿದಾರನಿಗೆ ಎಸ್ ಎಂ.ಎಸ್ ಮೂಲಕ ರವಾನಿಸಲಾಗುತ್ತದೆ.ರವಾನಿಸಲ್ಪಟ್ಟ ಮಾಹಿತಿಯಂತೆ ಅರ್ಜಿದಾರ ಯಾವಾಗ ಬೇಕಾದರೂ ಸರ್ಟಿಫಿಕೇಟನ್ನು ಪಡಕೊಳ್ಳಬಹುದಾಗಿದೆ.

No comments:

Post a Comment