Saturday, April 27, 2013

ಶಾರದಾ ಚಿಟ್‌ಫಂಡ್ ಹಗರಣ: ಚಿದಂಬರಂ ಪತ್ನಿಯ ತನಿಖೆಗೆ ವಿಪಕ್ಷಗಳ ಆಗ್ರಹ



ಕೋಲ್ಕತಾ/ಹೊಸದಿಲ್ಲಿ : ಕೋಟ್ಯಂತರ ರೂಗಳ ಶಾರದಾ ಚಿಟ್‌ಫಂಡ್ ಹಗರಣದ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗ ಬೇಕೆಂದು ಹೋರಾಟ ನಡೆಸುತ್ತಿರುವ ಬಿಜೆಪಿ ಹಾಗೂ ಎಡಪಕ್ಷಗಳು, ಪ್ರಕರಣದಲ್ಲಿ ಭಾಗಿಯಾಗಿ ದ್ದಾರೆಂದು ಆರೋಪಿಸಲ್ಪಡುತ್ತಿರುವ ಚಿದಂಬರಂ ಪತ್ನಿ ನಲಿನಿಯನ್ನು ಕೂಡ ವಿಚಾರಣೆಗೊಳ ಪಡಿಸಬೇಕೆಂದು ಆಗ್ರಹಿಸಿದೆ. ಈ  ವಿಚಾರದಲ್ಲಿ ಹಣಕಾಸು ಸಚಿವರು ಹೇಳಿಕೆ ಯೊಂದನ್ನು ಹೊರಡಿಸಬೇಕೆಂದು ಅದು ಒತ್ತಾ ಯಿಸಿದೆ. ಪ್ರಕರಣದ ಪ್ರಮುಖ ಆರೋಪಿ ಸುದಿಪ್ತಾ ಸೇನ್ ಸಿಬಿಐಗೆ ನೀಡಿದ  ಆರೋಪಿಗಳ ಪಟ್ಟಿಯಲ್ಲಿ ನಲಿನಿ ಹೆಸರೂ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿತ್ತು. ಚಿಟ್‌ಫಂಡ್ ಹಗರಣದ ಸಂಪೂರ್ಣ ವಿಷಯ ಗಳನ್ನು ತನಿಖೆಗೆ ಒಳಪಡಿಸಬೇಕು.  ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಕಾಂಗ್ರೆಸ್ ಸಚಿವರನ್ನು ವಿವಾಹವಾಗಿರುವ ವಕೀಲೆಯನ್ನೂ ತನಿಖೆಗೆ ಒಳಪಡಿಸಿ, ಇದರ ಹಿಂದಿರುವ ನಿಗೂಢತೆಯನ್ನು ಬಯಲಿಗೆಲೆಯಬೇಕು ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್  ನಳಿನಿಯ ಹೆಸರೆತ್ತದೆಯೇ ಪರೋಕ್ಷವಾಗಿ ಅವರನ್ನು ಕುಟುಕಿದರು.
ಕೇಂದ್ರ ಹಣಕಾಸು ಸಚಿವರು ಈ ಕೂಡಲೇ ದೇಶಕ್ಕೆ ಇದರ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದರು. “ ನಿಷ್ಪಕ್ಷಪಾತವಾದ ತನಿಖೆ ನಡೆಸಿದ ಬಳಿಕವಷ್ಟೇ ಆರೋಪಿಗಳು ಯಾರೆಂದು ಬಯಲಾಗುತ್ತದೆ. ತನ್ನ ಪತ್ನಿಯ ಹೆಸರೂ ಪ್ರಕರಣದಲ್ಲಿ ಕಾಣಿಸಿಕೊಂಡಿರು ವುದರಿಂದ  ಹಣಕಾಸು ಸಚಿವರು ಈ ಕುರಿತು ಹೇಳಿಕೆ ಯನ್ನು ನೀಡಲೇಬೇಕು” ಎಂದು ಎಡಪಕ್ಷಗಳ ನಾಯಕ ರಾಜಾ ಒತ್ತಾಯಿಸಿದರು.
ನಳಿನಿಗೆ ನಿಕಟವಾಗಿರುವ ಟಿವಿ ಚಾನೆಲ್‌ವೊಂದು ಆಕೆ ಶಾರದಾ ಗ್ರೂಪ್‌ನ ಹಣವನ್ನು ಉತ್ತರ ಭಾರತದ ಟಿವಿ ಚಾನೆಲ್‌ವೊಂದರಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಆರೋಪವನ್ನು ಅಲ್ಲಗಳೆದಿದೆ.  ಶಾರದಾ ಗ್ರೂಪ್‌ನಿಂದ ಫಂಡ್ ಪಡೆಯುವುದನ್ನು  ಅನುಮತಿಸುವ ಬದಲಾಗಿ ಆಕೆ ವಿರೋಧಿಸಿದ್ದರು ಎಂದು ಅದು ಸ್ಪಷ್ಟೀಕರಣ ನೀಡಿದೆ. ಹಗರಣದ  ತನಿಖೆಗೆ ಕೇಂದ್ರ, ಗಂಭೀರ ವಂಚನಾ ತನಿಖಾ ಕಚೇರಿ  ಹಾಗೂ ವಿಶೇಷ ಕಾರ್ಯಪಡೆ ಯನ್ನು ಸ್ಥಾಪಿಸಿದ್ದು ಆರೋಪಿಗಳನ್ನು ಚಿಂತೆಗೀಡು ಮಾಡಿದೆ.
ಏತನ್ಮಧ್ಯೆ ಗುವಾಹತಿಯಲ್ಲಿರುವ ಜಾರಿ ನಿರ್ದೇ ಶನಾಲಯವು ಆರೋಪಿಗಳ ವಿರುದ್ಧ ಹಣ ಪಡೆಯುವ ತಡೆ ಕಾಯ್ದೆ ಅನ್ವಯ ಪ್ರಕರಣವನ್ನೂ ದಾಖಲಿಸಿದೆ. ಚಿಟ್ ಫಂಡ್ ಕಂಪೆನಿಗೆ ಬೀಗ ಜಡಿದಿರುವುದನ್ನು ವಿರೋಧಿಸಿ ಪಶ್ಚಿಮಬಂಗಾಳ ಹಾಗೂ ಅಸ್ಸಾಂನಲ್ಲಿ ನಡೆಯುತ್ತಲಿರುವ ಪ್ರತಿಭಟನೆಯು ತಾರಕಕ್ಕೇರಿದೆ.ಪ್ರಕರಣದ ಪ್ರಮುಖ ಆರೋಪಿ ಸುದಿಪ್ತಾ ಸೇನ್ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಕೋಲ್ಕತಾ ನ್ಯಾಯಾಲಯವು ೧೪ ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

No comments:

Post a Comment