Wednesday, April 10, 2013

ನೆನೆಗುದಿಗೆ ಬಿದ್ದಿರುವ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಯೋಜನೆ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕೇರಳದಲ್ಲಿ ಎಲ್.ಡಿ.ಎಫ್ ಸರಕಾರ ಅಧಿಕಾರದಲ್ಲಿರುವಾಗ ಕರ್ನಾಟಕ  ರಾಜ್ಯ ಸರಕಾರ ಹಾಗು ಕೇಂದ್ರ ಸರಕಾರದ ಸಹಕಾರದಲ್ಲಿ ಮಂಜೇಶ್ವರ ಮಾಜಿ ಶಾಸಕರಾಗಿದ್ದ ಶ್ರೀ ಸಿ.ಎಚ್.ಕುಂಞಂಬು ಹಾಗು ಅಂದಿನ ಕೇಂದ್ರ ಕಾನೂನು ಸಚಿವರಾಗಿದ್ದ ಶ್ರೀ ವೀರಪ್ಪ ಮೊಯ್ಲಿಯವರ ಪ್ರೋತ್ಸಾಹದಿಂದ 2 ವರ್ಷ ಮೊದಲು ಮಂಜೇಶ್ವರ ಗೋವಿಂದ ಪೈಯವರ ನಿವಾಸದಲ್ಲಿ ಗಿಳಿವಿಂಡು ಎಂಬ ಯೋಜನೆಗೆ ರೂಪು ನೀಡಲಾಗಿತ್ತು.ಮಾತ್ರವಲ್ಲದೆ ಅಂದು ಕೇಂದ್ರ ಸಚಿವರಾದ ಶ್ರೀ ವೀರಪ್ಪ ಮೊಯ್ಲಿಯವರು ಗಿಳಿವಿಂಡು ಯೋಜನೆಯನ್ನು ಬಹಳ ವಿಜೃಂಭನೆಯಿಂದ ಉದ್ಘಾಟಿಸಿದ್ದರು.ಮಾತ್ರವಲ್ಲದೆ ಆವಾಗ ಶಾಸಕರ ಹಾಗು ಸಂಸದರ ನಿಧಿಯಿಂದ ಮಂಜೂರಾದ ಹಣದಿಂದ 2 ಸಣ್ಣ ಕಟ್ಟಡಗಳನ್ನು ಕೂಡಾ ಕಟ್ಟಲಾಗಿತ್ತು.ಆದರೆ ಇದೀಗ ಗಿಳಿವಿಂಡು ಯೋಜನೆ ಉದ್ಘಾಟನೆಗೊಂಡು 2 ವರ್ಷಗಳೇ ಕಳೆದಿದೆ ಆದರೆ ಅದರ ನಂತ್ರ ಯುಡಿಎಫ್ ಸರಕಾರ ಬಂದ ನಂತ್ರವೂ ಯಾರೂ ಗಿಳಿವಿಂಡು ಯೋಜನೆಯ ಬಗ್ಗೆ ಗಮನಹರಿಸದೆ ಶಾಸಕರ ಹಾಗು ಸಂಸದರ ನಿಧಿಯಿಂದ ಮಂಜೂರಾದ ಹಣದಿಂದ ಕಟ್ಟಲಾದ ಕಟ್ಟಡದ ಸುತ್ತ ಹುಲ್ಲು ಬೆಳೆದು ಕಾಡಿನಿಂದ ಆವೃತವಾಗಿ  ಗಿಳಿವಿಂಡು ಯೋಜನೆ ನೆನೆಗುದಿಗೆ ಬಿದ್ದಿರುವುದಾಗಿ ನಾಗರಿಕರಿಂದ ಆರೋಪ ಕೇಳಿ ಬರುತ್ತಿದೆ.
ಗಿಳಿವಿಂಡು ಯೋಜನೆಗೆ ರೂಪು ನೀಡುವ ಮೊದಲೇ ಇಲ್ಲೊಂದು ವಾಚನಾಲಯವಿತ್ತು ಅದು ಕೂಡಾ ಇದೀಗ ಅನಾಥವಾಗಿ ಬಿದ್ದಿದೆ.ಇದೀಗ ಕರ್ನಾಟಕ ಸರಕಾರ ಕೂಡಾ ವಾಚನಾಲಯಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಲು ತಯಾರಿದೆ.ಇದಕ್ಕೆ ಮಂಜೇಶ್ವರದ ಶಾಸಕರು ಹಾಗು ಸರಕಾರ ಮುತುವರ್ಜಿವಹಿಸಬೇಕಾಗಿದೆಂಬುದು ನಾಗರಿಕರ ಒತ್ತಾಯ.ಕಳೆದ ಕೆಲವು ತಿಂಗಳುಗಳಿಂದ ಗಿಳಿವಿಂಡು ಯೋಜನೆಗೆ ಕಟ್ಟಲಾದ ಕಟ್ಟಡದ ಪರಿಸರವು ಗಾಂಜಾ ಹಾಗು ಮದ್ಯವ್ಯಸನಿಗಳ ಅಡ್ಡೆಯಾಗುತ್ತಿದೆಂಬ ಆರೋಪ ಕೂಡಾ ಕೇಳಿ ಬಂದಿದೆ.
ಮಂಜೇಶ್ವರದ ಜನತೆಗೆ ತಾಲೂಕನ್ನು ಘೋಷಿಸಿದ ಯುಡಿಎಫ್ ಸರಕಾರವು ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಯೋಜನೆಯನ್ನು ಪುರ್ತೀಕರಿಸಿತೇ? ಇದು ಮಂಜೇಶ್ವರದ ಜನತೆಯ ಪ್ರಶ್ನೆ.

No comments:

Post a Comment