Thursday, April 25, 2013

ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಸೌಕರ್ಯ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ವಿದ್ಯುತ್ ಸಂಪರ್ಕದ ಗ್ರಾಹಕರು ಇನ್ನು ಮುಂದೆ ಆನ್ ಲೈನ್ ನಲ್ಲಿ ಬಿಲ್ ಪಾವತಿಸುವ ಸೌಕರ್ಯವನ್ನು ಕೇರಳ ವಿದ್ಯುನ್ಮಂಡಳಿ ತಮ್ಮ ಗ್ರಾಹಕರಿಗೆ ಒದಗಿಸಿ ಕೊಟ್ಟಿದೆ.
ಇಂಟರ್ ನೆಟ್ ,ನೆಟ್ ಬ್ಯಾಂಕಿಂಗ್ ಹಾಗು ಡೆಬಿಟ್,ಕ್ರೆಡಿಟ್ ಕಾರ್ಡ್ ಮೂಲಕವೂ ಇನ್ನು ಗ್ರಾಹಕರಿಗೆ ತಮ್ಮ ಮನೆಯಲ್ಲೇ ಇದ್ದುಕೊಂಡು ಇನ್ನು ಮುಂದೆ ಬಿಲ್ ಪಾವತಿಸ ಬಹುದಾಗಿದೆ.ರಾಜ್ಯ ವಿದ್ಯುನ್ಮಂಡಳಿಯ ಅಧಿಕೃತ ವೆಬ್ ಸೈಟ್ ಆಗಿರುವ  www.kseb.in ಪೇ ಬಿಲ್ಸ್ ಆನ್ ಲೈನ್ ಎಂಬ ಲಿಂಕ್ ಮೂಲಕ ಎಲ್ಲಾ ವಿದ್ಯುತ್ ಕಚೇರಿಯ ವ್ಯಾಪ್ತಿಯವರೇಗೂ ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.ಕೆನರಾ ಬ್ಯಾಂಕ್,ಎಸ್.ಬಿ.,ಫೆಡರಲ್,ಎಸ್.ಬಿ.ಟಿ.ಸೇರಿದಂತೆ ನೆಟ್ ಬ್ಯಾಂಕಿಂಗ್ ಹೊಂದಿರುವ ೩೬ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವವರು ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಿಕೆಯ ಪ್ರಯೋಜನ ಪಡಕೊಳ್ಳಬಹುದೆಂದು ವಿದ್ಯುನಂಡಳಿ ಅಧಿಕೃತವಾಗಿ ತಿಳಿಸಿದೆ.
ವಿದ್ಯುತ್ ಸೆಕ್ಷನ್ ಕಛೇರಿಯನ್ನು ಆರಿಸಿ ಗ್ರಾಹಕರ ಕನ್ಸ್ಯೂಮರ್ ಸಂಖ್ಯೆಯನ್ನು ಹಾಗು ಪಾವತಿಸಬೇಕಾದ ಬಿಲ್ ನಂಬ್ರವನ್ನು -ಮೈಲ್ ಮೂಲಕ ಅಥವಾ ಮೊಬೈಲ್ ಪೋನ್ ಮೂಲಕ ಕಳುಹಿಸಿ ಕೊಟ್ಟಲ್ಲಿ ಬಿಲ್ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ.ಬಿಲ್ ಪಾವತಿಸುವ ಕುರಿತಾದ ಮಾಹಿತಿಗಳನ್ನು ಎಸ್.ಎಂ.ಎಸ್ ಅಥವಾ -ಮೈಲ್ ಮೂಲಕ ಗ್ರಾಹಕರಿಗೆ ತಿಖ್ಳಿಯಪಡಿಸಲಾಗುತ್ತದೆ.ಹಣ ಪಾವತಿಸಿದ ಮಾಹಿತಿಗಳನ್ನು ಮರುದಿವಸ ಸಂಭಂಧಪಟ್ಟ ವಿದ್ಯುತ್ ಸೆಕ್ಷನ್ ಗಳಿಗೆ ತಿಳಿಸಲಾಗುತ್ತದೆ.

No comments:

Post a Comment