Thursday, April 25, 2013

ಭೂಕಂಪಕ್ಕೆ ನಡುಗಿದ ಉತ್ತರ ಭಾರತ



ಹೊಸದಿಲ್ಲಿ, : ರಾಷ್ಟ್ರದ ರಾಜಧಾನಿ ಹೊಸದಿಲ್ಲಿ  ಹಾಗೂ ಆಸುಪಾಸಿನ ಉಪನಗರಗಳು ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಬುಧವಾರ ಮಧ್ಯಾಹ್ನ ಭೂಕಂಪದ ಅನುಭವವಾಗಿದೆ. ಕಳೆದ ೯ ದಿನಗಳಲ್ಲಿ  ಉತ್ತರ ಭಾರತದಲ್ಲಿ ಭೂಮಿ ನಡುಗಿರುವುದು ಇದು ಎರಡನೆ ಸಲವಾಗಿದೆ.ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದ ಕೇಂದ್ರಬಿಂದು ದಕ್ಷಿಣ ಅಫ್ಘಾನಿಸ್ತಾನದಲ್ಲಿ ಕೇಂದ್ರೀಕೃತವಾಗಿದೆ. ನೆಲದ ಮೇಲ್ಮೈಗಿಂತ 6.6 ಕಿ.ಮೀ. ಕೆಳಮಟ್ಟದಲ್ಲಿ ಭೂಕಂಪನವಾಗಿದೆಯೆಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಹೊಸದಿಲ್ಲಿಯ ಆಸುಪಾಸಿನ ನಗರಗಳಾದ ಗುರ್ಗಾಂವ್ ಹಾಗೂ ನೊಯ್ಡಾ ಗಳಲ್ಲೂ ಭೂಮಿ ಕಂಪಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಆದರೆ ಭೂಕಂಪದಿಂದಾಗಿ ಈವರೆಗೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಎಪ್ರಿಲ್ 16ರಂದು ಪಾಕಿಸ್ತಾನ-ಇರಾನ್ ಗಡಿಯಲ್ಲಿ ರಿಕ್ಟರ್‌ಮಾಪಕದಲ್ಲಿ 7.8 ತೀವ್ರತೆಯ ಭೂಕಂಪದ ಅನುಭವವಾಗಿತ್ತು.

No comments:

Post a Comment