Friday, April 26, 2013

ಉಪ್ಪಳ: ಮನೆಯಿಂದ ನಗ ನಗದು ಕಳವುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ವ್ಯಾಪರಸ್ಥನ ಮನೆಗೆ ನುಗ್ಗಿದ ಕಳ್ಳರು ನಗ ಹಾಗು ನಗದನ್ನು ದೋಚಿ ಪರಾರಿಯಾದ ಘಟನೆ ಉಪ್ಪಳಕ್ಕೆ ಸಮೀಪದ ಅಟ್ಟಗೋಳಿಯಿಂದ ವರದಿಯಾಗಿದೆ.
ಅಟ್ಟಗೋಳಿ ನಿವಾಸಿ ಹಂಝ ಖಾದರ್ ಎಂಬವರ ಮನೆಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು 7 ಪವನ್ ಚಿನ್ನಾಭರಣ ಹಾಗು ನಗದು ಒಂದುವರೆ ಸಾವಿರ ರೂಪಾಯಿಯನ್ನು ದೋಚಿ ಪರಾರಿಯಾಗಿರುತ್ತಾರೆ.ಮನೆಯ ಹಿಂದಿನ ಬಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮಲಗುವ ಕೋಣೆಯೊಳಗೆ ನುಗ್ಗಿ ಕಪಾಟನ್ನು ಮುರಿದು ಕಪಾಟಿನಲ್ಲಿದ್ದ ಚಿನ್ನ ಹಾಗು ನಗದನ್ನು ಕಳವುಗೈದು ಪರಾರಿಯಾಗಿದ್ದಾರೆ.ಬೆಳಿಗ್ಗೆ ಖಾದರ್ ಹಂಝ ಎಚ್ಚರವಾದಗಲೇ ಕಳ್ಳತನವಾದದ್ದು ಅರಿವಿಗೆ ಬಂದಿದೆ.ಕಪಾಟನ್ನು ಮುರಿದ ಸ್ಥಳದಲ್ಲಿ ಅಡುಗೆ ಕೋಣೆಯಲ್ಲಿದ್ದ ಚೂರಿ ಯನ್ನು ಉರಿಸಿ ಇಟ್ಟಹಾಗೆ ಕಂಡು ಬಂದಿದೆ.ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.


No comments:

Post a Comment