Tuesday, April 9, 2013

ಮಂಜೇಶ್ವರ:ಜನರನ್ನು ವಿಶ್ಮಯಗೊಳಿಸಿದ ನೀರಿನ ಚಿಲುಮೆ ಮಂಜೇಶ್ವರ್ ಟೈಮ್ಸ್ ಎಕ್ಸ್ ಕ್ಲೂಸಿವ್






ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನೀರಿಲ್ಲದೆ ಜನರು ತತ್ತರಿಸುತ್ತಿರುವಾಗ ಬತ್ತಿಹೋದ 29 ಅಡಿಯ ಬಾವಿಯಲ್ಲಿ ಪವಾಡದ ರೀತಿಯಲ್ಲಿ ನೀರಿನ ಜರಿ(ವಸರು) ಹರಿದು ಬಂದು 10 ಅಡಿ ನೀರು ತುಂಬಿ ಇದನ್ನು ನೋಡಲು ಜನಪ್ರವಾಹವೇ ಹರಿದು ಬರುತಿದ್ದ ದೃಶ್ಯ ಇಲ್ಲಿಗೆ ಸಮೀಪದ ಬಟ್ಟಿಪದವು ಎಂಬ ಸ್ಥಳದಲ್ಲಿ ನಡೆಯಿತು
ಬಟ್ಟಿಪದವು ನಿವಾಸಿ ಮಹಮೂದ್ ಎಂಬವರ ಹಿತ್ಲಿನಲ್ಲಿರುವ 29 ಅಡಿ ಆಳವಿರುವ ಬಾವಿಯಲ್ಲಾಗಿದೆ ಇವತ್ತು ಪವಾಡದ ರೀತಿಯಲ್ಲಿ ನೀರು ಹರಿದು ಬಂದದ್ದು.ಇದನ್ನು ನೋಡಲು ಜನರು ಕಾರಿನಲ್ಲೂ ಬೈಕಿನಲ್ಲು ಘಟನಾ ಸ್ಥಳಕ್ಕೆ ತಲುಪುತಿದ್ದರು.
ಮಹಮೂದ್ ರವರ ಬಾವಿಯನ್ನು ಸುಮಾರು 7 ವರ್ಷಕ್ಕೆ ಮೊದಲು ತೋಡಿಕೊಂಡಿದ್ದರು ಆವಾಗ 29 ಅಡಿ ಆಳದಲ್ಲಿ ನೀರು ಸಿಕ್ಕಿತ್ತು.ತದ ನಂತ್ರ ವರ್ಷದ ಎಲ್ಲಾ ಮೇ  ತಿಂಗಳಿನ ಮದ್ಯದಲ್ಲಿ ಬಾವಿಯಲ್ಲಿ ನೀರು ಬತ್ತಿಹೋಗುತಿತ್ತು. ವರ್ಷವೂ ಅದೇ ರೀತಿ ಸುಮಾರು 15 ದಿವಸ ಮೋದಲೇ ಬಾವಿಯ ನೀರು ಬತ್ತಿ ಹೋಗಿತ್ತು. ಕಳೆದ  ರವಿವಾರ ರಾತ್ರಿ ಬಾವಿಯೊಳಗೆ ಏನೋ ನೀರು ಬೀಳುವ ರೀತಿಯಲ್ಲಿ ಶಭ್ದಕೇಳಿ ಬಂದಾಗ ಮಹಮೂದ್ ರವರು ಬಾವಿಯ ಕದೆ ತೆರಲಿ ನೋಡಿದಾಗ ಬಾವಿಯ ೧೫ ಅಡಿಯಿಂದ ಪೈಪ್ ಅಲವಡಿಸಿದ ರೀತಿಯಲ್ಲಿ ಬಾವಿಗೆ ನೀರು ಬೀಳುವುದು ಕಂಡು ಬಂದಿದೆ.ನಂತ್ರ ಬೆಳಗಾಗುವಾಗ ಬಾವಿಯಲ್ಲಿ 10 ಅಡಿ ನೀರು ತುಂಬಿ ಹೋಗಿದ್ದು ಪುನಃ ಅದೇ ರಭಸದಲ್ಲಿ ಜರಿ(ವಸರು) ಬರುತಿತ್ತು.ವಿಷಯ ಹರಡುತಿದ್ದಂತೆ ಬಟ್ಟಿಪದವಿನಲ್ಲಿ ಜನಸಾಗರವೇ ಸೇರಿದೆ.ಸೇರಿದ ಜನರು ಹಲವು ರೀತಿಯ ವದಂತಿಗಳನ್ನು ಪ್ರಚರಿಸಿದರೆ ಬಾವಿಯ ಮಾಲಕ ನಂಬಲಸಾದ್ಯವಾದ ಕೆಲವು ಕಟ್ಟು ಕತೆಗಳನ್ನು ಪ್ರಯೋಗಿಸಿ ಜನರನ್ನು ಮರಳು ಮಾಡುವುದು ಕಂಡು ಬಂತು.ಬತ್ತಿ ಹೋದ ಬಾವಿಯಲ್ಲಿ ಬರಗಾಲದಲ್ಲಿ ಯಾವೊಂದು ಮಳೆಯೂ ಸುರಿಯದೆ ನೀರು ಹೇಗೆ ಬಂತೆಂಬುದು ಸ್ಥಳೀಯರ ಹಾಗು ನೋಡಲು ಬಂದ ಸೇರಿದವರ ಕುತೂಹಲದ ಪ್ರಶ್ನೆ.
ಪರಿಸರದಲ್ಲಿ ಎಲ್ಲಾದರೂ ಕೊಳವೆ ಬಾವಿ ತೋಡಿದ್ದರೆ ಅದರಿಂದಾಗಿ ಹತ್ತಿರವಿರುವ ಕೆಲವು ಬಾವಿಗಳ ನೀರು ಬತ್ತಿ ಹೋಗುವ ಸಾಧ್ಯತೆ ಕೂಡಾ ಇದೆ ಅದೇ ರೀತಿ ಕೆಲವು ಸಂದರ್ಭಗಳಲ್ಲಿ ಬತ್ತಿ ಹೋದ ಕೆಲವೊಂದು ಬಾವಿಗಳಲ್ಲಿ ನೀರಿನ ಜರಿ(ವಸರು) ಬರುವ ಸಾಧ್ಯತೆ ಇರುವುದಾಗಿ ತಿಳಿಸಿದ ಹಿರಿಯ ನಾಗರಿಕರೊಬ್ಬರು ಇತ್ತೀಚೆಗೆ ಕೆಲವು ದಿನಗಳ ಹಿಂದೆ ಬಾವಿಯ ಕೇವಲ ಒಂದು ಕಿ.ಮೀ.ಅಂತರದಲ್ಲಿ 2 ಕೊಳವೆ ಬಾವಿ ಅಗಿಯಲಾಗಿದ್ದು ಅಲ್ಲಿ ಎರಡೂ ಕಡೆ ನೀರು ಸಿಕ್ಕಿರಲಿಲ್ಲ.ಇದರಿಂದಾಗಿ ಬಾವಿಯಲ್ಲಿ ನೀರಿನ ಜರಿ(ವಸರು) ಬಂದಿರಬಹುದೆಂದು ಶಂಶಯವನ್ನು ವ್ಯಕ್ತಪಡಿಸಿದ್ದಾರೆ.ಅಂತೂ ಬಟ್ಟಿಪದವಿನ ನೀರಿನ ಚಿಲುಮೆಯು ಎಲ್ಲರನೂ ವಿಶ್ಮಯಗೊಳಿಸಿತು

No comments:

Post a Comment