Wednesday, April 3, 2013

ಬಟ್ಟೆ ಅಂಗಡಿ ಹಾಗು ಅಂಚೆ ಕಛೇರಿ ಬೆಂಕಿಗಾಹುತಿ:ಲಕ್ಷಾಂತರ ರೂ ನಷ್ಟ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅಂಚೆ ಕಛೇರಿ ಹಾಗು ಬೃಹತ್ ಬಟ್ಟೆ ಅಂಗಡಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ನಷ್ಟವಾದ ಘಟನೆ ಇಲ್ಲಿಗೆ ಸಮೀಪದ ಪೈವಳಿಕೆಯಿಂದ ವರದಿಯಾಗಿದೆ.
ಪೈವಳಿಕೆಯ ನಗರದಲ್ಲಿರುವ ಅಬ್ದುಲ್ಲಾ ಕುಂಞಿ ಯವರ ಮಾಲಕತ್ವದಲ್ಲಿರುವ ಕಟ್ಟಡದಲ್ಲಿ   ರಹ್ಮಾನಿಯ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತಿದ್ದ ಬೃಹತ್ ಬಟ್ಟೆ ಅಂಗಡಿ ಹಾಗು ಸಮೀಪವಿದ್ದ ಅಂಚೆ ಕಛೇರಿ ಮಂಗಳವಾರ ಮುಂಜಾನೆ ಬೆಂಕಿಗಾಹುತಿಯಾಯಿತು.
ಮುಂಜಾನೆ ಸುಮಾರು ಗಂಟೆ ಹೊತ್ತಿಗೆ ಕಟ್ಟಡ ಉರಿಯುವುದನ್ನು ಕಂಡ ಪಾದಾಚಾರಿಯೊಬ್ಬ ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅಗ್ನಿಶಾಮಕ ದಳದವರು ತಲುಪಿ ಸುಮಾರು ತಾಸುಗಳ ಕಾಲ ಸೆಣಸಾಡಿ ಬೆಂಕಿ ನಂದಿತಾದರೂ ಸುಮಾರು ಹೊತ್ತಿನಿಂದ ಹೊತ್ತಿದ ಬೆಂಕಿಯಿಂದ ಬಟ್ಟೆ ಅಂಗಡಿ ಹಾಗು ಟೈಲರಿಂಗ್ ಸಾಮಾಗ್ರಿಗಳು ಸಂಪೂರ್ಣವಾಗಿ ಉರಿದು ಹೋಗಿವೆ.ಬೆಂಕಿ ಇದರ ಸಮೀಪವಿದ್ದ ಅಂಚೆ ಕಛೇರಿಗೂ ತಗಲಿ ಸಂಪೂರ್ಣ ನಾಶಗೊಂಡಿದೆ.ಶಾಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿರಬೆಕೆಂದು ಶಂಕೆ ವ್ಯಕ್ತವಾಗಿದೆ.ಬಟ್ಟೆ ಅಂಗಡಿಯ ಸಾಮಾಗ್ರಿಗಳು ಉರಿದು ಭಸ್ಮವಾಗಿದ್ದು ಸುಮಾರು ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.ಅಂಚೆ ಕಛೇರಿಯೊಳಗಿನ ಕಂಪ್ಯೂಟರ್ ದಾಖಲೆ ಪತ್ರಗಳು ಉರಿದು ಹೋಗಿದ್ದು ಲಕ್ಷಾಂತರ ರೂ ನಷ್ಟ ಅಂದಾಜಿಸಲಾಗಿದೆ.

No comments:

Post a Comment