Monday, April 29, 2013

ಅಪರಿಚಿತ ಮೃತದೇಹ ಪತ್ತೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರು ಸಮೀಪದ ಕಣ್ವತೀರ್ಥ ಕಡಲ ಕಿನಾರೆಯಲ್ಲಿ  ಸೋಮವಾರ ಬೆಳಿಗ್ಗೆ ಅಪರಿಚಿತ ಮೃತದೇಹವೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ.
ಸಮುದ್ರದಿಂದ ಅಲ್ಪ ದೂರದಲ್ಲಿ ಮೃತದೇಹ ತೇಲುತಿದ್ದು ಕುಂಜತೂರಿನ ಯುವಕರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮೇಲಕ್ಕೆತಿ ಮಂಗಲ್ಪಾಡಿ ಶವಗಾರಕ್ಕೆ ತಲುಪಿಸಿದ್ದಾರೆ.ಮೃತದೇಹ ಗಂಡಸಿನದ್ದಾಗಿದ್ದು ಸುಮಾರು ೪೫ ರಿಂದ ೫೦ ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದೆ.ಯಾರಾದರೂ ವಾರೀಸುದಾರರು ಇದ್ದರೆ ಉಪ್ಪಳ ಮಂಗಲ್ಪಾಡಿ ಆಸ್ಪತ್ರೆಗೆ ಬಂದು ಮೃತದೇಹದ ಗುರುತು ಪತ್ತೆ ಹಚ್ಚಬಹುದೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ

No comments:

Post a Comment