Sunday, April 28, 2013

ಸರಬ್‌ಜಿತ್ ಕೋಮಾವಸ್ಥೆಗೆ: ಕುಟುಂಬಿಕರಿಗೆ ಪಾಕ್ ವಿಸಾಲಾಹೋರ್:ಇಲ್ಲಿನ ಜೈಲೊಂದರಲ್ಲಿ ಸಹಕೈದಿಗಳಿಂದ  ಮಾರಣಾಂತಿಕ ಹಲ್ಲೆಗೊಳಗಾಗಿ,ಗಂಭೀರ ಗಾಯಗೊಂಡಿರುವ ಭಾರತೀಯ ಕೈದಿ ಸರಬ್‌ಜಿತ್ ಸಿಂಗ್, ಕೋಮಾವಸ್ಥೆಗೆ ಜಾರಿದ್ದು, ಆತನನ್ನು ಕೃತಕ ಉಸಿರಾಟದ ವ್ಯವಸ್ಥೆಗೆ ಒಳಪಡಿಸಲಾಗಿದೆಯೆಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಶನಿವಾರ ತಿಳಿಸಿದ್ದಾರೆ.ಸರಬ್‌ಜಿತ್ ಸಿಂಗ್‌ನ ದೇಹಸ್ಥಿತಿ ಸ್ಥಿರಗೊಳ್ಳುವವರೆಗೂ ಆತನಿಗೆ ಶಸ್ತ್ರಕ್ರಿಯೆ ನಡೆಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.ಏತನ್ಮಧ್ಯೆ ಲಾಹೋರ್‌ನ ಜಿನ್ನಾ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ರುವ ಸರಬ್‌ಜಿತ್‌ನನ್ನು ಭೇಟಿಯಾಗಲು ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಪಾಕಿಸ್ತಾನದ ಹೈಕಮೀಶನ್ ಶನಿವಾರ ಸಾ  ನೀಡಿದೆ.ಸರಬ್‌ಜಿತ್ ಸಿಂಗ್‌ನ ಪತ್ನಿ ಸುಖ್‌ಪ್ರೀತ್ ಕೌರ್, ಪುತ್ರಿಯರಾದ ಪೂನಂ ಹಾಗೂ ಸ್ವಪನ್‌ದೀಪ್ ಕೌರ್ ಹಾಗೂ ಸಹೋದರಿ ದಲ್‌ಬೀರ್ ಕೌರ್‌ಗೆ ಪಾಕ್ ಹೈಕಮೀಶನ್ ಸಾ ನೀಡಿದೆ. ಆದರೆ ತಾವು ಪಾಕ್‌ಗೆ ತೆರಳಲಿದ್ದೇವೆ ಎಂಬ ಎಂಬ ಬಗ್ಗೆ ಸರಬ್‌ಜಿತ್ ಕುಟುಂಬವು ಯಾವುದೇ ಮಾಹಿತಿ ನೀಡಿಲ್ಲ.
ಜೀವನ್ಮರಣದ ನಡುವೆ ಹೋರಾಡುತ್ತಿರುವ 49ವರ್ಷದ ಸರಬ್‌ಜಿತ್‌ಗೆ ಲಾಹೋರ್‌ನಲ್ಲಿ ಸರಕಾರಿ ಸ್ವಾಮ್ಯದ ಜಿನ್ನಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾಹೋರ್‌ನ ಕೋಟ್ ಲಾಖ್‌ಪಟ್ ಜೈಲಿನಲ್ಲಿ ಕನಿಷ್ಠ ಆರು ಮಂದಿ ಕೈದಿಗಳ ಗುಂಪೊಂದು ಶುಕ್ರವಾರ ಸರಬ್‌ಜಿತ್ ಮೇಲೆ ಇಟ್ಟಿಗೆ ಹಾಗೂ ತಟ್ಟೆಗಳಿಂದ ಬಲವಾಗಿ ಹೊಡೆದು ಗಾಯಗೊಳಿಸಿತ್ತು.
ಸರಬ್‌ಜಿತ್ ಅಳವಾದ ಕೋಮಾವಸ್ಥೆಗೆ ಜಾರಿರುವುದರಿಂದ ಆತನಿಗೆ ಶಸ್ತ್ರಕ್ರಿಯೆ  ನಡೆಸುವುದು ಅಸಾಧ್ಯವಂದು ವೈದ್ಯರು ಹೇಳಿದ್ದಾರೆ. ಹಲ್ಲೆಯಿಂದಾಗಿ ಆತನ ತಲೆಗೆ ಗಂಭೀರವಾದ ಪೆಟ್ಟಾಗಿದ್ದು, ಮೆದುಳಿನಲ್ಲಿ  ತೀವ್ರವಾದ ರಕ್ತಸ್ರಾವವಾಗಿದೆಯೆಂದು ಅವರು ತಿಳಿಸಿದ್ದಾರೆ.ಮುಂದಿನ 24 ತಾಸುಗಳು ಸರಬ್‌ಜಿತ್ ಪಾಲಿಗೆ ನಿರ್ಣಾಯಕವಾಗಿವೆಯೆಂದು ಪಾಕಿಸ್ತಾವದ ಟಿವಿ ವಾಹಿನಿಗಳು ವರದಿ ಮಾಡಿವೆ.
ಭಾರತೀಯ ಹೈಕಮಿಶನ್‌ಗೆ ಮಾಹಿತಿ: ಲಾಹೋರ್‌ನ ಜಿನ್ನಾ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರಬ್‌ಜಿತ್ ಸಿಂಗ್‌ನ ದೇಹಸ್ಥಿತಿಯ ಬಗ್ಗೆ  ಪಾಕ್‌ನಲ್ಲಿನ ಭಾರತೀಯ ಹೈಕಮಿಶನ್ ಕಚೇರಿಯ ಅಧಿಕಾರಿಗಳಿಗೆ ಅಲ್ಲಿನ ವೈದ್ಯಾಧಿಕಾರಿಗಳು ಇಂದು ಮಾಹಿತಿ ನೀಡಿದ್ದಾರೆ. ಸರಬ್‌ಜಿತ್ ಕೋಮಾವಸ್ಥೆಯಲ್ಲಿದ್ದು, ಆತನನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರಿಸಲಾಗಿದೆ ಹಾಗೂ ಆತನಿಗೆ ನಾಳದ ಮೂಲಕ ದ್ರವಾಹಾರವನ್ನು ನೀಡಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಇಬ್ಬರು ಕೈದಿಗಳ ವಿರುದ್ಧ ಪ್ರಕರಣ ದಾಖಲು: ಆದಾಗ್ಯೂ ಸರಬ್‌ಜಿತ್ ಮೇಲೆ ಶುಕ್ರವಾರ ನಡೆದ ಹಲ್ಲೆಗೆ ಸಂಬಂಧಿಸಿ ಆಮೀರ್ ಅಫ್ತಾಬ್ ಹಾಗೂ ಮುದಸ್ಸರ್ ಎಂಬ ಇಬ್ಪರು  ಪಾಕ್ ಕೈದಿಗಳ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿ ಕೊಳ್ಳಲಾಗಿದೆ.ಕೊಲೆ ಪ್ರಕರಣವೊಂದರಲ್ಲಿ ಮರಣದಂಡನೆ ಎದುರಿಸುತ್ತಿರುವ  ಅಫ್ತಾಬ್ ಕೆಲವು ದಿನಗಳ ಹಿಂದೆ ಸರಬ್‌ಜಿತ್ ಜೊತೆ ಜಗಳವಾಡಿದ್ದನೆನ್ನಲಾಗಿದೆ.1990ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ  14 ಮಂದಿಯ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸರಬ್‌ಜಿತ್ ಅಪರಾಧಿಯೆಂದು ಆಪಾದಿಸಿ ಪಾಕ್‌ನ ನ್ಯಾಯಾಲಯವು ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕ್ಷಮಾದಾನ ಕೋರಿ ಆತ ಸಲ್ಲಿಸಿದ್ದ ಅರ್ಜಿಗಳನ್ನು ಹಿಂದಿನ ಪಾಕ್ ಅಧ್ಯಕ್ಷ ಪರ್ವೇಝ್ ಮುಶರ್ರಫ್ ತಿರಸ್ಕರಿಸಿದ್ದರು.2008ರಲ್ಲಿ ಆಗಿನ ಪಿಪಿಪಿ ನೇತೃತ್ವದ ಸರಕಾರವು ಸರಬ್‌ಜಿತ್‌ನ ಮರಣದಂಡನೆಯನ್ನು ಅನಿರ್ದಿಷ್ಟಾವಧಿಯವರೆಗೆ ಮಂದೂಡಿತ್ತು.
ಪ್ರಧಾನಿ ಖೇದ: ಪಾಕ್ ಜೈಲಿನಲ್ಲಿ ಭಾರತೀಯ ಕೈದಿ ಸರಬ್‌ಜಿತ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ವಿಷಾದನೀಯವೆಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ

No comments:

Post a Comment