Friday, April 26, 2013

ಪ್ರಣಾಳಿಕೆಗಳೆಂಬ ಚಂದಮಾಮ ಕತೆಪುಕ್ಕಟೆ ಲ್ಯಾಪ್‌ಟಾಪ್ಕಾಂಗ್ರೆಸ್ ಪಕ್ಷವೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದರಿಂದ, ಎಲ್ಲ ಪಕ್ಷಗಳೂ ತಮ್ಮ ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ದಂತಾಗಿದೆ. ಒಂದು ಪಕ್ಷ ಇನ್ನೊಂದು ಪಕ್ಷದ ಜೊತೆಗೆ ಪೈಪೋಟಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದರಿಂದ, ಅದನ್ನು ಓದುವಾಗ ಯಾವುದೋ ಒಂದು ರಮ್ಯವಾದ ಕತೆಯನ್ನು ಓದಿದಂತಾಗುತ್ತದೆ. ಒಂದು ರೂಪಾಯಿಗೆ ಅಕ್ಕಿ, ಸೇರಿದಂತೆ ಆಕಾಶದಲ್ಲಿರುವ ನಕ್ಷತ್ರಗಳನ್ನೂ ಭೂಮಿಗಿಳಿಸುತ್ತೇವೆ ಎಂದು ಕೆಲವು ಪಕ್ಷಗಳು ಭರವಸೆ ನೀಡಿವೆ. ಅದನ್ನು ಮೀರಿಸುವಂತೆ ಇನ್ನೊಂದು ಪಕ್ಷ, ಮಂಗಳ ಗ್ರಹದಲ್ಲಿ ಪುಕ್ಕಟೆ ಜನತಾ ಕಾಲನಿಯನ್ನು ಘೋಷಿಸಿವೆ. ಹೀಗೆ ವಿವಿಧ ಪಕ್ಷಗಳ ಪ್ರಣಾಳಿಕೆಯನ್ನು ಓದಿದರೆ ಹೊಟ್ಟೆ ಹುಣ್ಣಾಗುವಂತೆ ನಗು ಉಕ್ಕಿ ಬರಬೇಕು. ಜನರನ್ನು ಶತಮೂರ್ಖರು ಎಂದು ತಿಳಿದು ಕೊಂಡೇ ಈ ಪ್ರಣಾಳಿಕೆಗಳನ್ನು ಪಕ್ಷಗಳು ಘೋಷಿಸಿವೆ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ.
ಒಂದು ರೂಪಾಯಿಗೆ ಅಕ್ಕಿ ನೀಡುವುದು ಪಕ್ಕಕ್ಕಿರಲಿ. ಇಂದು ರೇಷನ್ ಕಾರ್ಡನ್ನು ಜನರು ಬಳಸುತ್ತಿರುವುದು ಒಂದು ಗುರುತು ಪತ್ರವಾಗಿ ಮಾತ್ರ. ಜನರಿಗೆ ಸಬ್ಸಿಡಿಯಲ್ಲಿ ಅಕ್ಕಿ, ಗೋಧಿ, ಸಕ್ಕರೆಯನ್ನು ವಿತರಿಸಿದರೆ ದೇಶ ದಿವಾಳಿ ಎದ್ದು ಹೋಗುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಕೃಷಿ ಸಚಿವರಿರುವ ನಾಡು ನಮ್ಮದು.
ಸಚಿನ್ ಕ್ರಿಕೆಟ್ ಮೈದಾನದಲ್ಲಿ ಗೋರುವ ರನ್‌ಗಳಿಂದಲೇ ದೇಶದ ಜನರ ಹೊಟ್ಟೆ ತುಂಬಿಸಬಹುದು ಎಂದು ಶರದ್ ಪವಾರ್ ಭಾವಿಸಿರುವಾಗ, ಕಾಂಗ್ರೆಸ್ ಪಕ್ಷ ಒಂದು ರೂಪಾಯಿಗೆ ಅಕ್ಕಿ ಕೊಡುತ್ತದೆ ಎಂದು ನಿರೀಕ್ಷಿಸಿ, ಕಾಯುವುದು ನಮ್ಮ ಮೂರ್ಖ ತನವೇ ಸರಿ. ಅದೆಲ್ಲಾ ಇರಲಿ. ಇಂದು ಎಲ್ಲ ವನ್ನೂ ಜನರಿಗೆ ಪುಕ್ಕಟೆಯಾಗಿ ಕೊಡುತ್ತೇವೆ ಎಂದು ಭರವಸೆ ನೀಡುವ ಎಲ್ಲ ಮುಖ್ಯ ಪಕ್ಷಗಳು ಒಂದಲ್ಲ ಒಂದು ಕಾಲದಲ್ಲಿ ಈ ನಾಡನ್ನು ಆಳಿವೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದಾರೆ.
ಕೆಜೆಪಿ ನಾಯಕ ಯಡಿಯೂರಪ್ಪ ಅವರೂ ಈ ನಾಡನ್ನು ಮುಖ್ಯಮಂತ್ರಿಯಾಗಿ ಅನುಭವಿಸಿ ದ್ದಾರೆ. ಬಿಜೆಪಿಯೂ ಅಧಿಕಾರ ನಡೆಸಿದೆ. ಕಾಂಗ್ರೆಸ್ ಅಂತೂ ಹಲವು ದಶಕಗಳ ಕಾಲ ಈ ನಾಡನ್ನು ಆಳಿತು. ಈ ಹಿಂದೆ ಅವರಿಗೆ ಇದನ್ನೆಲ್ಲ ಸಾಧಿಸಲು ಯಾಕೆ ಸಾಧ್ಯವಾಗಲಿಲ್ಲ? ಹಿಂದೆ ಸಾಧ್ಯವಾಗದ್ದು ಈಗ ಯಾಕೆ ಸಾಧ್ಯವಾಗುತ್ತದೆ ಎಂದು ಜನರು ಭಾವಿಸಬೇಕು. ಎಲ್ಲ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಒಂದು ಪ್ರಣಾ ಳಿಕೆಯನ್ನು ಘೋಷಿಸುತ್ತವೆ.
ಆದರೆ ಅಧಿಕಾರ ಹಿಡಿದ ಮರುದಿನವೇ ತನ್ನ ಪ್ರಣಾಳಿಕೆಯನ್ನು ಬದಲಿಸುತ್ತವೆ. ಅಧಿಕಾರ ಹಿಡಿದ ಬಳಿಕ, ನಾಡನ್ನು ದೋಚುವುದೇ ನಮ್ಮ ಪ್ರಣಾಳಿಕೆ ಎಂದು ಘೋಷಿಸಿ, ಹಾಡಹಗಲೇ ರಾಜ್ಯ ವನ್ನು ದಿವಾಳಿ ಎಬ್ಬಿಸಿದ್ದಾರೆ. ‘ಭ್ರಷ್ಟರು’ ಎಂದು ಆರೋಪಿಸಿದರೆ ‘‘ಹೌದು. ನಾವು ಭ್ರಷ್ಟರು. ಏನೀವಾಗ, ನೀವೇನು ಸಾಚಾಗಳ?’’ ಎಂದು ವಿರೋಧಪಕ್ಷವನ್ನು ಕೇಳುವಷ್ಟು ನಾಚಿಗೆಗೆಟ್ಟ ನಾಯಕರು ನಮ್ಮನ್ನು ಆಳಿದ್ದಾರೆ. ಇಂಥವರು ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡು ತ್ತಾರೆ ಎಂದರೆ ನಾವದನ್ನು ನಂಬಬೇಕೆ?
ಹಾಗೆ ನೋಡಿದರೆ ಒಂದು ರೂಪಾಯಿಗೆ ಅಕ್ಕಿ ನೀಡುವುದು ಈ ದೇಶದಲ್ಲಿ ಕಷ್ಟವೇನೂ ಅಲ್ಲ. ನಮ್ಮ ದೇಶದ ಗೋದಾಮಿನಲ್ಲಿ ಸೋರಿಕೆ ಯಾಗುತ್ತಿರುವ, ಕೊಳೆತು ಹೋಗುತ್ತಿರುವ ಅಕ್ಕಿ ಚೀಲಗಳನ್ನು ಭದ್ರ ಮಾಡಿ, ಸಾರ್ವಜನಿಕವಾಗಿ ವಿತರಿಸಿದರೆ, ಬಡವರಿಗೆ ಒಂದು ರೂಪಾಯಿ ಗಲ್ಲ, ಪುಕ್ಕಟೆಯಾಗಿಯೇ ಅಕ್ಕಿಯನ್ನು ವಿತರಿಸ ಬಹುದಾಗಿದೆ. ಆದರೆ, ಕೊಳೆತು ಹೋದರೂ ಕೊಟ್ಟು ಹೋಗಬಾರದು ಎಂಬ ಮಾತನ್ನು ಎಲ್ಲ ಸರಕಾರಗಳೂ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿವೆ.
ಆದುದರಿಂದ, ಎಲ್ಲ ಪ್ರಣಾಳಿಕೆಗಳೂ ಈ ನಾಡಿನ ಬಡವರನ್ನು, ಶೋಷಿತರನ್ನು ಅಣಕಿಸುವುದಕ್ಕಾಗಿಯೇ ರಚನೆಗೊಂಡಿವೆ ಎನ್ನುವುದೇ ಹೆಚ್ಚು ಸರಿ. ಪ್ರಣಾಳಿಕೆಯೆಂದರೆ ತೋಚಿದ್ದೆಲ್ಲವನ್ನೂ ಗೀಚಬಹುದು. ಅದರ ಅನುಷ್ಠಾನವಾಗಬೇಕು ಎಂದೇನೂ ಇಲ್ಲ ಎಂಬುದು ಎಲ್ಲ ಪಕ್ಷಗಳಿಗೂ ಗೊತ್ತಿದೆ. ಅದಕ್ಕಾ ಗಿಯೇ ಸರ್ವ ಭರವಸೆಗಳನ್ನೂ ಅಲ್ಲಿ ನೀಡಲಾ ಗುತ್ತದೆ. ಆದುದರಿಂದ, ಮೊತ್ತ ಮೊದಲು ಚುನಾವಣಾ ಆಯೋಗ ಈ ಪ್ರಣಾಳಿಕೆಗಳ ಮೇಲೆ ಕಣ್ಣಿಡಬೇಕಾಗಿದೆ.
ಯಾವುದೇ ಪ್ರಣಾ ಳಿಕೆಯನ್ನು ಹೇಗೆ ಬೇಕಾದರೂ ಬರೆಯ ಬಹುದು ಎನ್ನುವ ಮನಸ್ಥಿತಿ ಅಳಿಯ ಬೇಕಾದರೆ, ಪ್ರಣಾಳಿಕೆಗೂ ಒಂದು ನೀತಿ ಸಂಹಿತೆ, ಒಂದು ಕಡಿವಾಣ, ಲಕ್ಷಣ ರೇಖೆ ಯನ್ನು ವಿಧಿಸಬೇಕಾಗಿದೆ. ಯಾವ ಪಕ್ಷಗಳು ಪ್ರಣಾಳಿಕೆಯನ್ನು ಘೋಷಿಸುತ್ತದೆಯೋ, ಆ ಪಕ್ಷದಿಂದ ಸ್ಪರ್ಧಿಸುವ ಎಲ್ಲ ಪ್ರತಿನಿಧಿಗಳೂ ಆ ಪ್ರಣಾಳಿಕೆಯ ಅನುಷ್ಠಾನಕ್ಕೆ ಜವಾಬ್ದಾರರಾ ಗಬೇಕು.
ಕನಿಷ್ಠ ಶೇ.50 ಭರವಸೆಗಳನ್ನು ಈಡೇರಿಸಲು ವಿಫಲವಾದರೆ ಅವರ ಶಾಸಕತ್ವವೇ ಅನೂರ್ಜಿತವಾಗುವಂತೆ, ಅಫಿದಾವಿತ್‌ನ್ನು ಎಲ್ಲ ಶಾಸಕರಿಂದ ಪಡೆದುಕೊಳ್ಳಬೇಕು. ಆಗ ಅವರು ಒಂದಿಷ್ಟಾದರೂ ಜಾಗರೂಕತೆಯನ್ನು ವಹಿಸಿ, ಹೆಜ್ಜೆಯಿಡುತ್ತಾರೆ. ಅಧಿಕಾರ ಸಿಕ್ಕಿದಾ ಕ್ಷಣ, ಪ್ರಣಾಳಿಕೆಯನ್ನು ಹೇಗೆ ಅನುಷ್ಠಾನ ಗೊಳಿಸಬಹುದು ಎಂದು ಕನಿಷ್ಠ ಯೋಚಿಸು ವುದಕ್ಕಾದರೂ ಮುಂದಾಗುತ್ತಾರೆ.
ಪ್ರಣಾಳಿಕೆಯೆಂದರೆ ಅಂಗೈಯಲ್ಲಿ ಅರಮನೆ ತೋರಿಸಿ ಮೋಸ ಮಾಡುವುದಲ್ಲ. ಈ ಸಂವಿಧಾನ ನಮಗೆ ಯಾವುದೆಲ್ಲ ಹಕ್ಕುಗಳನ್ನು ಕೊಟ್ಟಿದೆಯೋ ಅದನ್ನು ಊರ್ಜಿತಗೊಳಿಸುವ ಕೆಲಸ ಮಾಡಿದರೂ ಸಾಕು. ಒಂದು ಸರಕಾರ ಯಶಸ್ವಿಯಾದಂತೆ. ಸೌಹಾರ್ದದಿಂದ, ನೆಮ್ಮದಿ ಯಿಂದ ಬದುಕುವ ಅವಕಾಶ, ಎಲ್ಲ ಬಡ ಮಕ್ಕಳಿಗೂ ಶಿಕ್ಷಣದ ಹಕ್ಕು, ಮೂರು ಹೊತ್ತು ಉಣ್ಣುವುದಕ್ಕೆ ಆಹಾರ ಒದಗಿಸುವುದು, ಉದ್ಯೋಗ ಒದಗಿಸುವುದು ಹಾಗೆಯೇ ಬಡವ ರಿಗೆ ಉಚಿತ ಆರೋಗ್ಯವನ್ನು ಒದಗಿಸುವುದು, ರೈತರಿಗೆ ದುಡಿದದಕ್ಕೆ ತಕ್ಕ ಫಲವನ್ನು ನೀಡಿ ಅವರನ್ನೂ ಬದುಕಿಸಿ, ನಾಡನ್ನೂ ಬದುಕಿಸು ವುದು. ಇಷ್ಟಾದರೆ ಸಾಕು, ನಾಡು ಅಭಿವೃದ್ಧಿ ಯಾದಂತೆ. ಹಾಸ್ಯಾಸ್ಪದ ಪ್ರಣಾಳಿಕೆಗಳನ್ನು ನೀಡಿ, ಜನರನ್ನು ವಂಚಿಸುವ ಪಕ್ಷಗಳು ಇನ್ನಾ ದರೂ ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಹೆಜ್ಜೆಗಳನ್ನು ಇಡಬೇಕಾಗಿದೆ.

No comments:

Post a Comment