Thursday, April 25, 2013

ಕುಂಜತ್ತೂರು ಶಾಂತ:ಬಿಗು ಪೊಲೀಸ್ ಪಹರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಕಳೆದೆರಡು ದಿನಗಳಿಂದ ಉದ್ರಿಕ್ತವಾಗಿದ್ದ ಕುಂಜತ್ತೂರು ಇದೀಗ ಶಾಂತವಾಗಿದ್ದು ಪ್ರದೇಶದಲ್ಲಿ ಬಿಗು ಪೊಲೀಸ್ ಪಹರೆಯನ್ನು ಏರ್ಪಡಿಸಲಾಗಿದೆ.
ಕುಂಜತ್ತೂರಿನಲ್ಲಿ ಅಹಿತಕರ ಘಟನೆ ಸಂಭಂಧಿಸಿ ಪೊಲೀಸರು ಸೆರೆ ಹಿಡಿದ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಕುಂಜತ್ತೂರು ಯತೀಂ ಖಾನ ಪರಿಸರದ ನಿವಾಸಿ ಅಶ್ರಫ್ ಹಾಗು ಕುಂಜತ್ತೂರು ಕ್ಷೌರದಂಗಡಿ ಮಾಲಿಕ ಕಿರಣ್ ಕುಮಾರ್ ರವರ ಬೈಕ್ ಗಳನ್ನು ದುಷ್ಕರ್ಮಿಗಳು ಕಿಚ್ಚಿಟ್ಟು ನಾಶಗೊಳಿಸಿದ್ದರು ಇದೀಗ ಕಿರಣ್ ಕುಮಾರ್ ರವರ ಬೈಕ್ ಗೆ ಕಿಚ್ಚಿಟ್ಟ ಪ್ರಕರಣಕ್ಕೆ ಸಂಭಂಧಿಸಿ ಪೊಲೀಸರು ತೂಮಿನಾಡು ನಿವಾಸಿ ಯಾಕೂಬ್(48) ಹಾಗು ಗುಡ್ಡಕೇರಿ ನಿವಾಸಿ ಅಲ್ತಾಫ್(24) ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಆದರೆ ಅಶ್ರಫ್ ರವರ ಬೈಕ್ ಗೆ ಕಿಚ್ಚಿಟ್ಟ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನ ಮೇಷ ಎಣಿಸುತ್ತಿರುವುದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕುಂಜತ್ತೂರಿನ ಸಂಘರ್ಷಾವಸ್ಥೆಯ ಹಿನ್ನೆಲೆಯಲ್ಲಿ ತೂಮಿನಾಡು,ಕುಂಜತ್ತೂರು,ಕಣ್ವತೀರ್ಥ,ಮಜಲ್,ಪದವು,ಉದ್ಯಾವರ ಮೊದಲಾದ ಸ್ಥಳಗಳಲ್ಲೆಲ್ಲಾ ಪೊಲೀಸ್ ಬಿಗು ಪಹರೆ ಏರ್ಪಡಿಸಿದೆ.ಹಾಗು ಪೊಲೀಸರು 24 ಗಂಟೆಯೂ ಪೆಟ್ರೋಲಿಂಗ್ ನಡೆಸುತಿದ್ದಾರೆ.ಮಂಗಳವಾರ ರಾತ್ರಿಯಿಂದ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

No comments:

Post a Comment