Wednesday, April 24, 2013

ಶಿವಗಿರಿ ಮಠಕ್ಕೆ ಮೋದಿ: ಕೊಡಿಯೇರಿ ತೀವ್ರ ಆಕ್ಷೇಪ



ಕಾಸರಗೋಡು, : ಶಿವಗಿರಿ ಮಠವನ್ನು ಕೇಸರೀಕರಣಗೊಳಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಪ್ರತಿಪಕ್ಷ ಉಪನಾಯಕ ಕೊಡಿಯೇರಿ ಬಾಲಕೃಷ್ಣನ್ ಆರೋಪಿಸಿದ್ದಾರೆ.
ಅವರು ಇಂದು ಬೆಳಗ್ಗೆ ನಗರದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಶಿವಗಿರಿ ಹಿಂದೂ ಮಠವಲ್ಲ. ಆದರೆ ಈಗ ಇದನ್ನು ಹಿಂದೂಕರಣಗೊಳಿಸಲು ಆರೆಸ್ಸೆಸ್ ಹಾಗೂ ಕೆಲ ಸನ್ಯಾಸಿಗಳು ಹುನ್ನಾರ ನಡೆಸುತ್ತಿದ್ದಾರೆ. ಶಿವಗಿರಿ ಮಠದ ಕಾರ್ಯಕ್ರಮಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಿರುವುದರ ಹಿಂದೆ ಕೇಸರೀ ಕರಣಗೊಳಿಸುವ ಉದ್ದೇಶ ಅಡಗಿದೆ ಎಂದವರು ಹೇಳಿದರು.
ರಾಜ್ಯದ ಕಾರ್ಮಿಕ ಸಚಿವ ಶಿಬು ಬೇಬಿ ಜೋನ್‌ರವರು ನರೇಂದ್ರ ಮೋದಿಯನ್ನು ಭೇಟಿಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಡಿಯೇರಿ, ಮುಖ್ಯಮಂತ್ರಿಯವರಿಗೆ ಅರಿತೇ ಶಿಬು ಬೇಬಿ ಜೋನ್ ಮೋದಿ ಯನ್ನು ಭೇಟಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಹಿಂದುತ್ವವನ್ನು ಹೇರಲಾಗುತ್ತಿದ್ದು, ಇದನ್ನು ತಡೆಗಟ್ಟಲು ಐಕ್ಯರಂಗ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದವರು ಆಪಾದಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಥೋಮಸ್ ಐಸಾಕ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಸತೀಶ್ಚಂದ್ರನ್, ಮಾಜಿ ಸಚಿವ ಸಿ.ಎಚ್.ಕುಂಞಂಬು ಮೊದಲಾದವರು ಜತೆಯಲ್ಲಿದ್ದರು.

No comments:

Post a Comment