Tuesday, April 23, 2013

ವಾಗ್ದಾನದ ಬಗ್ಗೆ ಅಭ್ಯರ್ಥಿಯಿಂದ ಪ್ರಮಾಣ ಪತ್ರ: ಹೀಗೊಂದು ವಿನೂತನ ಪ್ರಯತ್ನಕ್ಕೆ ಸಿದ್ಧತೆಅಭ್ಯರ್ಥಿಗಳ ಭರವಸೆಗಳಿಗೆ ಮೂಗುದಾರ...!
ಮಂಗಳೂರು ಚುನಾವಣೆಯ ಸಂದರ್ಭ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಕಣಕ್ಕಿಳಿಯುವ ಅಭ್ಯರ್ಥಿಗಳು ತಮ್ಮ ಪಕ್ಷದ ಬಗ್ಗೆ, ಮತದಾರರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಬಣ್ಣ ಬಣ್ಣದ ಪ್ರಣಾಳಿಕೆಗಳೊಂದಿಗೆ ಮತಯಾಚಿಸುತ್ತಾ ವಾಗ್ದಾನ ಗಳನ್ನೇನೋ ನೀಡುತ್ತಾರೆ. ಆದರೆ ಚುನಾವಣೆ ಯಲ್ಲಿ ಗೆದ್ದ ಬಳಿಕ ಆ ಬಗ್ಗೆ ವಾಗ್ದಾನಗಳನ್ನು ಈಡೇರಿಸುವುದು ಬಿಡಿ, ಬಹುತೇಕ ಅಭ್ಯರ್ಥಿ ಗಳು ಮತದಾರರ ಬಳಿಯೂ ಸುಳಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕಿನ್ನಿಗೋಳಿ ಗ್ರಾಹಕರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿರುವ ಪದ್ಮನಾಭ ನಿಡ್ಡೋಡಿಯವರು ಸಮಾನ ಮನಸ್ಕರ ಜೊತೆ ಸೇರಿ ಜನಪ್ರತಿನಿಧಿಯಾಗ ಬಯಸುವ ಅಭ್ಯರ್ಥಿ ಗಳು ತಮ್ಮ ಭರವಸೆಗಳ ಬಗ್ಗೆ ಅಫಿದಾವಿತ್ ಸಲ್ಲಿಸುವ ಮೂಲಕ ಅಭ್ಯರ್ಥಿಗೆ ಮೂಗುದಾರ ಹಾಕುವ ವಿನೂತನ ಪ್ರಯೋಗಕ್ಕೆ ಮುಂದಾಗಿ ದ್ದಾರೆ.
ಈ ಪ್ರಾಯೋಗಿಕ ಯತ್ನಕ್ಕೆ ಪೂರಕವಾಗಿ ಮೂಡುಬಿದಿರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಭಯ ಕುಮಾರ್ ಜೈನ್ ಜನರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ತಮ್ಮ ಭರವಸೆಯ ಬಗ್ಗೆ ಅಫಿದಾವಿತ್ (ಛಾಪಾ ಕಾಗದದಲ್ಲಿ ಪ್ರಮಾಣಪತ್ರ) ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಗ್ರಾಹಕರ ಜಾಗೃತಿ ವೇದಿಕೆಯಲ್ಲಿ ಸುಮಾರು 26 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿ ರುವ ಪದ್ಮನಾಭ ನಿಡ್ಡೋಡಿ ತಮ್ಮ 70ರ ಇಳಿ ಹರೆಯದಲ್ಲೂ, ರಾಜಕೀಯದಲ್ಲಿ ಹೊಸ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಲು ಸಮಾನ ಮನಸ್ಕರನ್ನು ಒಟ್ಟುಗೂಡಿಸುವಲ್ಲಿ ನಿರತರಾಗಿದ್ದಾರೆ. ‘‘ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ತನ್ನ ಭರವಸೆಗಳು, ವಾಗ್ದಾನಗಳ ಬಗ್ಗೆ ಛಾಪಾ ಕಾಗದದಲ್ಲಿ ಪ್ರಮಾಣ ಪತ್ರ ನೀಡಿದ್ದಲ್ಲಿ ಮುಂದೆ ಆತನನ್ನು ಪ್ರಶ್ನಿಸುವ ಅಧಿಕಾರ ಮತದಾರರಿಗಿ ರುತ್ತದೆ. ಜನಪ್ರತಿನಿಧಿಯಾಗಿ ಆಯ್ಕೆಯಾದಾಗ ಆತ ತನ್ನ ಕರ್ತವ್ಯ ಮರೆತಾಗ ಅದನ್ನು ನೆನಪಿಸುವ ಪ್ರಯತ್ನವಾಗಿ ಮತದಾರ ನ್ಯಾಯಾಲಯದ ಮೆಟ್ಟಿಲೇರಲು ಈ ಪ್ರಮಾಣ ಪತ್ರ ಸಹಕಾರಿ ಯಾಗಲಿದೆ. ಈ ನಿಟ್ಟಿನಲ್ಲಿ ಇದೀಗ ಪಕ್ಷೇತರ ಅಭ್ಯರ್ಥಿ ತಮ್ಮ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿದ್ದಾರೆ. ಇದೊಂದು ನಮ್ಮ ಪ್ರಾಯೋಗಿಕ ಹೆಜ್ಜೆ. ಮುಂದೆ ಸಮಾಜದಲ್ಲಿ ರಾಜಕೀಯವಾಗಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ.
ಈ ಬಗ್ಗೆ ಚುನಾವಣಾ ಆಯೋಗವನ್ನೂ ಈ ಬಗ್ಗೆ ಸಂಪರ್ಕಿಸಲಿದ್ದೇವೆ. ಜನರು, ಸಂಘಟನೆಗಳಿಂದ ಈ ಬಗ್ಗೆ ಪೂರಕ ಬೆಂಬಲ, ಪ್ರತಿಕ್ರಿಯೆ ಅಗತ್ಯವಿದೆ’’ ಎಂದು ತಮ್ಮ ಆಲೋಚನೆಗಳ ಬಗ್ಗೆ ವಿವರ ಪದ್ಮನಾಭ ನಿಡ್ಡೋಡಿ ‘ವಾರ್ತಾಭಾರತಿ’ಗೆ ವಿವರ ನೀಡಿದ್ದಾರೆ. ‘‘ತಮ್ಮಲ್ಲಿಗೆ ಮತ ಕೇಳಲು ಬರುವ ಅಭ್ಯರ್ಥಿ ಯಿಂದ ಪ್ರಮಾಣ ಪತ್ರ ಕೇಳುವ ಮೂಲಕ ಮತ ಚಲಾಯಿಸುವ ಹಕ್ಕಿಗೆ ತಾನು ಬಾಧ್ಯನಾಗುವು ದಾಗಿ ಹೇಳುವ ಕ್ರಾಂತಿಕಾರಿ ಬದಲಾವಣೆ ಜನ ಸಾಮಾನ್ಯರಿಂದ ಆಗಬೇಕಾಗಿದೆ. ಈ ಮೂಲಕ ಆಯ್ಕೆಯಾದ ಜನಪ್ರತಿನಿಧಿಯ ನಿಯಂತ್ರಣ ವನ್ನು ಮತದಾರ ತನ್ನಲ್ಲಿ ಉಳಿಸಿಕೊಂಡು ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ’’ ಎಂದು ಪದ್ಮನಾಭ ನಿಡ್ಡೋಡಿ ಅಭಿಪ್ರಾಯಿಸಿದ್ದಾರೆ.
ಮೂಡುಬಿದಿರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಭಯ ಕುಮಾರ್ ಜೈನ್ 28ರ ಹರೆಯದ ಅವಿವಾಹಿತ ಯುವಕ. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಇವರು, ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡವರು. ಸ್ನೇಹಿತರ ಒತ್ತಾಯದ ಮೇರೆಗೆ ಒಂದು ದಿನದ ನಿರ್ಧಾರದಲ್ಲಿ ವಿಧಾನ ಸಭೆಗೆ ನಾಮಪತ್ರ ಸಲ್ಲಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಆಸ್ತಿಪಾಸ್ತಿಗೆ ಸಂಬಂಧಿಸಿ ನಾಮಪತ್ರದ ಜೊತೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ 2.60 ಲಕ್ಷ ರೂ.ಗಳ ಚಿರಾಸ್ತಿ, ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. ಇವರಿಗೆ ಅಖಿಲ ಭಾರತ ಕಾರ್ಮಿಕ ಸಂಘ ಬೆಂಬಲ ಸೂಚಿಸಿದ್ದು, ತಾನು ವಿಧಾನಸಭೆಗೆ ಆಯ್ಕೆಯಾ ದಲ್ಲಿ ಜನರ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಲು ಬದ್ಧನಾಗಿರುವುದಾಗಿ ಅಭಯ ಕುಮಾರ್ ಜೈನ್ ತಮ್ಮ ಪ್ರಮಾಣದಲ್ಲಿ ಘೋಷಿಸ ಲಿದ್ದಾರೆ. ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆ ಯುತ್ತಿವೆ ಎಂದು ಪದ್ಮನಾಭ ನಿಡ್ಡೋಡಿ ತಿಳಿಸಿದ್ದಾರೆ.
‘‘ಚುನಾವಣೆಯ ಸಂದರ್ಭ ನೂರಾರು ಭರವಸೆಗಳನ್ನು ನೀಡುವ ರಾಷ್ಟ್ರೀಯ ಪಕ್ಷಗಳು ಆಯ್ಕೆಯಾದ ಬಳಿಕ ಅವುಗಳನ್ನೆಲ್ಲಾ ಗಾಳಿಗೆ ತೂರಿ ಬಿಡುತ್ತವೆ. ಜನಸಾಮಾನ್ಯರೂ ಅದನ್ನು ಪ್ರಶ್ನಿಸು ವಂತಿರುವುದಿಲ್ಲ. ಈ ನಿಟ್ಟಿನಲ್ಲಿ ಇದೊಂದು ವಿನೂತನ ಹೆಜ್ಜೆಗೆ ನಮ್ಮ ಸಂಘವೂ ಕೈಜೋಡಿ ಸಿದೆ. ಇದು ಆರಂಭಿಕ ಯತ್ನ. ಸದ್ಯ ನಮಗೆ ಸೋಲು ಗೆಲುವು ಮುಖ್ಯ ಅಲ್ಲ. ರಾಜಕೀಯ ಬದಲಾವಣೆ ನಮ್ಮ ಉದ್ದೇಶ. ಹಾಗಾಗಿ ನಮ್ಮ ಬೆಂಬಲಿತ ಅಭ್ಯರ್ಥಿ ತಮ್ಮ ವಾಗ್ದಾನದ ಬಗ್ಗೆ ಪ್ರಮಾಣ ಪತ್ರ ಘೋಷಿಸಲಿದ್ದಾರೆ. ಈ ಬಗ್ಗೆ ಕಾನೂನು ಪ್ರಕ್ರಿಯೆ ಗಳು ನಡೆಯುತ್ತಿದ್ದು, ಒಂದೆರಡು ದಿನಗಳಲ್ಲೇ ಅಂತಿಮ ಕ್ರಮಗಳನ್ನು ಪೂರೈಸಲಾಗುವುದು’’ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ಅಧ್ಯಕ್ಷ ಸುದತ್ತ್ ಜೈನ್ ಅಭಿಪ್ರಾಯಿಸಿದ್ದಾರೆ

No comments:

Post a Comment