Monday, April 15, 2013

ಹಿಂದೂ ಸಹೋದರನ ಮೃತ ದೇಹವನ್ನು ದಫನ ಗೈದ ಕುಂಜತ್ತೂರಿನ ಮುಸ್ಲಿಂ ಸಹೋದರರು


ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರೈಲಿನಡಿಗೆ ಬಿದ್ದು ಮೃತಪಟ್ಟ ಹಿಂದೂ ಬಾಂಧವನ ಮೃತದೇಹವನ್ನು ಮುಸ್ಲಿಂ ಸಹೋದರರು ಕೊಂಡು ಶ್ಮಶಾನದಲ್ಲಿ ದಫನ ಗೈದ ಘಟನೆ  ಇಲ್ಲಿಗೆ ಸಮೀಪದ ಉಪ್ಪಳದಲ್ಲಿ ನಡೆದಿದೆ.
ಇತ್ತೀಚೆಗೆ ಕಣ್ವತೀರ್ಥ ರಾಮಾಡಿ ಬಳಿ ರೈಲ್ವೇ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಮೃತಪಟ್ಟ ತಮಿಳ್ನಾಡು ನಿವಾಸಿ ಹಿಂದೂ ಬಾಂಧವನ ಮೃತದೇಹವನ್ನು ಕೊಂಡು ಹೋಗಲು ವಾರೀಸುದಾರರು ತಲುಪದ ಕಾರಣ ಮೃತ ದೇಹವನ್ನು ಹಿಂದೂ ಸಂಪ್ರದಾಯದಂತೆ  ದಫನ ಗೈಯಲು ಮಂಜೇಶ್ವರದ ಹಿಂದೂ ಸಹೋದರರಲ್ಲಿ ವಿನಂತಿಸಿ ಕೊಂಡಿತ್ತು.  ಈ ಕಾರ್ಯಕ್ಕೆ ಯಾರೂ ಮುಂದಾಗದ ಕಾರಣ ಕುಂಜತ್ತೂರಿನ ಸಮಾಜ ಸೇವಕರಾದ ಅಮೀರ್ ಯಾನೆ  ಅಮ್ಮಿಚ್ಚನ ನೇತೃತ್ವದಲ್ಲಿ ಮುಸ್ಲಿಂ ಸಹೋದರರು ಸೇರಿ ಮೃತದೇಹವನ್ನು ಮಂಗಲ್ಪಾಡಿ ಶವಗಾರದಿಂದ ಉಪ್ಪಳ ಪಾರಕಟ್ಟೆಗೆ ಕೊಂಡು ಹೋಗಿ ಪೊಲೀಸರ ಸಮ್ಮುಖದಲ್ಲಿ ದಫನಗೈದು ಮತ ಸೌಹಾರ್ದಕ್ಕೆ ಸಾಕ್ಷಿಯಾದರು.ಕುಂಜತ್ತೂರಿನ ಈ ತಂಡವು ಈಗಾಗಲೇ ಹಲವಾರು ಇಂತಹ ಕಾರ್ಯವನ್ನು ಗೈದು ಊರವರಿಂದ ಪ್ರಶಂಶೆಯನ್ನು ಪಡಕೊಂಡಿದೆ

No comments:

Post a Comment