Tuesday, April 2, 2013

ಸೌದಿಯ ನಿತಾಕತ್‌ಗೆ ಜೈಲು ಪಾಲಾಗುತ್ತಿರುವ ಭಾರತೀಯರು ಏಪ್ರಿಲ್ -02-2013


ಮಂಗಳೂರು: ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಅವಕಾಶ ಒದಗಿಸುವ ‘ನಿತಾಕತ್’ ಹೆಸರಿನ ಕಾರ್ಮಿಕ ಕಾನೂನನ್ನು ಸೌದಿ ಅರೇಬಿಯಾ ಸರಕಾರವು ಸೌದಿಯಲ್ಲಿ ಜಾರಿ ಮಾಡಿದೆ. ಈ ಕಾನೂನನ್ನು ಅಲ್ಲಿಯ ಆಡಳಿತ ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದರ ಪರಿಣಾಮವಾಗಿ ನಿತ್ಯ ನೂರಾರು ಭಾರತೀಯರು ಉದ್ಯೋಗ ಕಳೆದುಕೊಂಡು ಬರಿಗೈಯಲ್ಲಿ ತವರಿಗೆ ಮರಳುತ್ತಿದ್ದಾರೆ. ಬಹಳಷ್ಟು ಮಂದಿ ಅಲ್ಲಿಯ ಕಾನೂನಿನ ಸಂದಿಗ್ಧತೆಯಲ್ಲಿ ಸಿಲುಕಿ ಜೈಲು ಶಿಕ್ಷೆಯ ಹಾದಿಯಲ್ಲಿದ್ದಾರೆ. ಜೈಲು ಶಿಕ್ಷೆಯಿಂದ ಪಾರಾಗಲು ಭೂಗತರಾಗಿರು ವವರೂ ಇದ್ದಾರೆ. ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿ ಸಬಹುದು ಅಥವಾ ಜೈಲು ಶಿಕ್ಷೆಯ ಸಂಕಷ್ಟವಿಲ್ಲದೆ ತವರಿಗೆ ಹಿಂದಿರುಗುವ ಅವಕಾಶ ಬಂದೀತು ಎಂದು ತಲೆಮರೆಸಿಕೊಂಡು ಓಡಾಡುತ್ತಿರುವವರೂ ಇದ್ದಾರೆ. ಈ ರೀತಿ ಸಂಕಷ್ಟಕ್ಕೊಳಗಾಗಿರುವ ಭಾರತೀಯರ ರಕ್ಷಣೆಗೆ ಮುಂದಾಗಬೇಕಿದೆ ಭಾರತ ಸರಕಾರ.
ಸಮಸ್ಯೆಯ ಅರಿವಿದ್ದ ಕೆಲವರು ತಮ್ಮ ವೀಸಾದ ಪ್ರಾಯೋಜಕ (ಕಫೀಲ್)ರ ಸಹಕಾರ ಪಡೆದು ಹಿಂದಿರುಗಿದ್ದಾರೆ. ಅಂಥವರು ಹಂಚಿಕೊಂಡ ಅನುಭವ ಇಲ್ಲಿದೆ...
‘‘ಕಾರ್ಮಿಕರ ಪರಿವರ್ತಿತ ಕಾನೂನಿನ್ವಯ ಇದುವರೆಗೆ 100 ರಿಯಲ್ ಸಿಗುತ್ತಿದ್ದ ಇಕಾಮಾ (ಗುರುತುಪತ್ರ) ನವೀಕರಣದ ಮೊತ್ತವನ್ನು 2,400 ರಿಯಲ್‌ಗೆ ಏರಿಸಲಾಗಿದೆ. ಇನ್ಶೂರೆನ್ಸ್ ಮಾಡಿಸಲೇ ಬೇಕು. ಇದು ಪ್ರತಿವರ್ಷದ ವೆಚ್ಚವಾಗಿದೆ. ಇದೀಗ ಅಕಾಮಾ ನವೀಕರಣಕ್ಕೆ ಏರಿಕೆ ಆಗಿರುವ ಭಾರಿ ಪ್ರಮಾಣದ ಮೊತ್ತವನ್ನ ಭರಿಸುವ ಶಕ್ತಿ ಕಾರ್ಮಿಕರಲ್ಲಿ ಇಲ್ಲ. ಅಲ್ಲಿಯ ಕಫೀಲ್ (ಪ್ರಾಯೋಜಕ) ಕೂಡಾ ಈ ಮೊತ್ತ ಭರಿಸಲು ಸಿದ್ಧನಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕುವ ಭಾರತೀಯ ಉದ್ಯೋಗಿಗಳು ಶಿಕ್ಷೆ ಅನುಭವಿಸದೇ ಬೇರೆ ದಾರಿಯ ಇಲ್ಲ’’ ಎಂದು ಕಳೆದ 23 ವರ್ಷಗಳಿಂದ ಸೌದಿಯಲ್ಲಿ ಮಾನವ ಸಂಪನ್ಮೂಲ ಒದಗಿಸುವ ಕೆಲಸ ಮಾಡಿಕೊಂಡಿದ್ದ ಸುರತ್ಕಲ್ ಕಾನ ನಿವಾಸಿ ಎಸ್.ಎಚ್.ಅನ್ಸಾರಿ ಎಂಬ ವರು ತಿಳಿಸುತ್ತಾರೆ. ಇವರು ನಿತಾಕತ್ ಕಾನೂನಿನ ಶಿಕ್ಷೆಗೆ ಸಿಲಕುವ ಮೊದಲೇ ಅಲ್ಲಿಂದ ಪಾರಾಗಿ ಬಂದಿದ್ದಾರೆ.
ಬೃಹತ್ ಕಂಪೆನಿ ಉದ್ಯೋಗಿಗಳಿಗೆ ಈ ಸಮಸ್ಯೆ ಕಾಡುವುದಿಲ್ಲ. ಅಲ್ಲಿನ ಉದ್ಯೋಗಿಗಳ ಅಕಾಮವನ್ನು ಕಂಪೆನಿಯೇ ನವೀಕರಿಸಿಕೊಡುತ್ತದೆ. ಆದರೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಅಥವಾ ಕಫೀಲ್‌ನ ಅಧೀನದಲ್ಲಿ ಎಲ್ಲೆಲ್ಲೋ ದುಡಿಯುತ್ತಿರುವವರು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸರಿಯಾದ ದಾಖಲೆ ಪತ್ರಗಳಿಲ್ಲದೆ ವ್ಯವಹಾರ ನಡೆಸುತ್ತಿರುವ ಕಫೀಲ್‌ನನ್ನು ಇಲ್ಲಿನ ಸರಕಾರವು ಕೆಂಪು ಪಟ್ಟಿಯಲ್ಲಿ ಸೇರಿಸಿರುತ್ತದೆ.
ಅಂತಹ ಕಫೀಲ್‌ಗಳು ವ್ಯವಹಾರಿಕ ದಾಖಲೆ ಸರಿಪಡಿಸಿಕೊಳ್ಳ ದಿದ್ದಲ್ಲಿ ಅವರ ಅಧೀನ ಕಾರ್ಮಿಕರ ಅಕಾಮಾ ನವೀಕರಿಸುವಂತಿಲ್ಲ. ಇಂತಹ ಕಫೀಲ್‌ನ ಅಧೀನದ ಕಾರ್ಮಿಕರು ಸಿಕ್ಕಿಬಿದ್ದರೆ ಅವರನ್ನು ಜೈಲಿಗೆ ತಳ್ಳಲಾ ಗುತ್ತದೆ. ಅಷ್ಟಕ್ಕೇ ಮುಗಿಯುವುದಿಲ್ಲ, ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಪಾಸ್‌ಪೋರ್ಟ್ ಮೇಲೆ ಗಲ್ಫ್ ರಾಷ್ಟ್ರಗಳಿಗೆ ಪ್ರವೇಶ ನಿರ್ಬಂಧಿಸುವ ಮುದ್ರೆ ಕೂಡಾ ಒತ್ತಲಾಗುತ್ತದೆ. ಈ ಮುದ್ರೆ ವಿದೇಶಿ ಉದ್ಯೋಗದ ಆಸೆಯನ್ನೇ ಭಗ್ನಗೊಳಿಸುತ್ತದೆ. ಏಕೆಂದರೆ ಇದು ಗಲ್ಫ್ ರಾಷ್ಟ್ರಗಳಿಗೆ ಪ್ರವೇಶ ನಿರ್ಬಂಧಿಸುವ ಮುದ್ರೆಯಾಗಿದ್ದರೂ ಜಗತ್ತಿನ ಯಾವ ರಾಷ್ಟ್ರಗಳಲ್ಲೂ ಈ ಮುದ್ರೆಯ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿ ಕೊಳ್ಳುವುದಿಲ್ಲ. ದಾಖಲೆ ಪತ್ರ ಸರಿ ಇರದ ಕಾರಣಕ್ಕಾಗಿ ಉದ್ಯಮಿ (ಕಫೀಲ್) ಕೆಂಪು ಪಟ್ಟಿಯಲ್ಲಿ ಸೇರಿದ್ದರೂ ಶಿಕ್ಷೆ ಅನುಭವಿಸಬೇಕಿರುವುದು ಅವನ ಅಧೀನದ ಕಾರ್ಮಿಕರು. ಇದು ಸೌದಿ ಅರೇಬಿಯಾ ಕಾನೂನು. ಸೌದಿ ಅರೇಬಿಯಾದ ಉದ್ಯಮಿ (ಕಫೀಲ್)ಗಳಲ್ಲಿ ಹೆಚ್ಚಿನವರು ಕೆಂಪು ಪಟ್ಟಿಯಲ್ಲಿರುವವರೇ ಆಗಿದ್ದಾರೆ. ಆದುದರಿಂದ ಸೌದಿಯಲ್ಲಿ ದುಡಿಯುತ್ತಿರುವ ಶೇ.50ಕ್ಕಿಂತ ಹೆಚ್ಚು ಭಾರತೀಯರು ಶಿಕ್ಷೆಯ ಭೀತಿ ಎದುರಿಸುವಂತಾಗಿದೆ. ಇವರ ನೆರವಿಗೆ ಭಾರತ ಸರಕಾರ ಕೂಡಲೇ ಧಾವಿಸಬೇಕಿದೆ.
ಆಝಾದ್ ವೀಸಾ ಹೊಂದಿರುವವರು ಸ್ವ ಉದ್ಯೋಗ ಮಾಡುವಂತಿಲ್ಲ
ಭಾರತೀಯರ ವ್ಯಾಪಾರ ವಹಿವಾಟು ಬಂದ್ 
ಕಫೀಲ್‌ಗಳ ಪಾಲಾಗುತ್ತಿವೆ ಭಾರತೀಯರ ಬಂಡವಾಳ

ಆಝಾದ್ ವೀಸಾ ಎಂಬ ಅಡ್ಡದಾರಿಯ ಮೂಲಕ ಸೌದಿ ಅರೇಬಿಯಾದಲ್ಲಿ ಕಫೀಲ್‌ನ ಹೊರತಾಗಿ ಬೇರೆಲ್ಲಾದರೂ ಕೆಲಸ ಮಾಡುವ ಹಾಗೂ ಸ್ವಂತ ವಾಪಾರ ನಡೆಸುವ ಅವಕಾಶ ಈ ಹಿಂದೆ ಇತ್ತು. ಆದರೆ ಬದಲಾದ ಕಾನೂನಿನಲ್ಲಿ ಇದಕ್ಕೆ ಅವಕಾಶ ವಿಲ್ಲ. ಕಫೀಲ್‌ನ ಹೆಸರಿನಲ್ಲೇ ಪರವಾನಿಗೆ ಪಡೆದು ಭಾರತೀಯರು ವ್ಯಾಪಾರ ನಡೆಸುತ್ತಿದ್ದರು. ಇಂತಹ ವ್ಯಾಪಾರಕ್ಕಾಗಿ ಬಂಡವಾಳ ಹೊಡಲು ಭಾರತದಲ್ಲಿ ಸಾಲ ಮಾಡಿದವರೂ ಇದ್ದಾರೆ. ಹತ್ತಾರು ವರ್ಷ ಗಳಿಂದ ಸೌದಿಯಲ್ಲಿ ವ್ಯಾಪಾರಾ ಭಿವೃದ್ಧಿಗೊಳಿಸಿ ನಾಲ್ಕಾರು ಅಂಗಡಿ ಹೊಂದಿದ ವರೂ ಇದ್ದಾರೆ. ಸದ್ಯದ ಕಾನೂನು ಇಂತಹ ವ್ಯಾಪಾರಕ್ಕೆ ಆಸ್ಪದ ನೀಡುವುದಿಲ್ಲ. ಇದರಿಂದ ಬಂಡವಾಳ ಹೂಡಿದ ವರು ದಿಗ್ಭ್ರಾಂತರಾಗಿದ್ದಾರೆ.
ಇವರೆಲ್ಲ ಕಳೆದ ಮಾ.27 ರಿಂದ ವ್ಯಾಪಾರ ಬಂದ್ ಮಾಡಿದ್ದಾರೆ. ಅವರೀಗ ಹೂಡಿದ ಬಂಡವಾಳ ಸಹಿತ ವ್ಯಾಪಾರ ವನ್ನು ಕಫೀಲ್‌ನ ಸುಪರ್ದಿಗೆ ಒಪ್ಪಿಸಿ ಬರಿಗೈಯಲ್ಲಿ ಭಾರತಕ್ಕೆ ಹಿಂದಿರಗುವ ಪರಿಸ್ಥಿತಿ ಇದೆ. ಭಾರತೀಯ ವ್ಯಾಪಾರಿಗಳು ಕೋಟ್ಯಂತರ ರೂ.ಗಳ ಲೆಕ್ಕದಲ್ಲಿ ನಷ್ಟ ಅನುಭವಿಸುವಂತಾಗಿದೆ. ಭಾರತೀಯರು ಹೂಡಿದ ಬಂಡವಾಳ ಮತ್ತು ಕಷ್ಟಪಟ್ಟು ನಿರ್ವಹಿಸಿದ ಅಂಗಡಿ, ಮಳಿಗೆಗಳು ಅನಾಯಾಸವಾಗಿ ಕಫೀಲ್‌ನ ಮಾಲಕತ್ವಕ್ಕೆ ಜಾರಲಿವೆ. ಹೊಸ ಕಾನೂನು ಕಫೀಲ್ ಪಾಲಿಗೆ ವರವಾಗಿ ಪರಿಣಮಿಸಿದ್ದು, ಒಬ್ಬ ಕಫೀಲ್ ಇಂತಹ ಹತ್ತಾರು ಅಂಗಡಿಗಳ ಮಾಲಕನಾಗಿ ಮೆರೆಯುಂತಾಗಿದೆ.
ನತಾಕತ್ ಕಾನೂನು ಜಾರಿಯಾಗಿ 2 ವರ್ಷಗಳೇ ಆಗಿದ್ದರೂ ಕಳೆದ ಮಾ.20ರಿಂದ ಇದನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಇಕಾಮಾ ನವೀಕರಣ ಮತ್ತು ದಾಖಲೆ ಪತ್ರ ಸರಿಪಡಿಸಿಕೊಳ್ಳಲು ಮಾ.27ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅವಧಿಯಲ್ಲಿ ಅಲ್ಲಿಯ ಕಫೀಲರು ತಮ್ಮ ಪಾಲಿನ ಕೆಲಸ ಮಾಡದೆ ಇದ್ದುದರಿಂದ ಅವರ ಅಧೀನದಲ್ಲಿ ದುಡಿಯುತ್ತಿ ರುವ ಕಾರ್ಮಿಕರು ಶಿಕ್ಷೆ ಅನುಭವಿಸಿ ಬರಿಗೈಯಲ್ಲಿ ಭಾರತಕ್ಕೆ ಹಿಂದಿರುಗು ವಂತಾಗಿರುವುದು ಮಾತ್ರ ದುರಂತ.
ಸೌದಿ ಮೂಲದವರಿಗೆ ಉದ್ಯೋಗ ಕೊಡುವುದಿಲ್ಲ!
 ಸೌದಿಯ ಮೂಲದವರಿಗೆ ಶೇ.10 ಉದ್ಯೋಗವಕಾಶ ಒದಗಿಸುವ ಕಾನೂನು ಜಾರಿಯಾಗಿದ್ದರೂ ಅಲ್ಲಿಯವರಿಗೆ ಕೆಲಸ ಕೊಡಲು ಸ್ಥಳೀಯ ಉದ್ಯಮಿಗಳೇ ಸಿದ್ಧರಿಲ್ಲ. ಸೌದಿಯ ಮಂದಿ ಮೈ ಬಗ್ಗಿಸಿ ದುಡಿಯುವವರಲ್ಲ. ತಿಂಗಳಿಗೊಮ್ಮೆ ವೇತನ ಪಡೆಯುವುದಷ್ಟೇ ಅವರ ಕೆಲಸ. ಪುಕ್ಕಟೆ ಸಂಬಳ ಕೊಡಲು ಸಿದ್ದರಿಲ್ಲದ ಅಲ್ಲಿಯ ಕಫೀಲರು ಇಕಮಾ ನವೀಕರಿಸುವ ಕಾರ್ಯ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

No comments:

Post a Comment