Friday, April 19, 2013

ಕರ್ನಾಟಕ: ಪ್ರಚಾರಕ್ಕಾಗಿ ‘ಸುರಕ್ಷಿತ’ ಕ್ಷೇತ್ರಗಳನ್ನು ಬಯಸಿರುವ ಮೋದಿ



 ಹೊಸದಿಲ್ಲಿ,: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ತಿಂಗಳ ಕೊನೆಯಲ್ಲಿ ಪ್ರಚಾರ ಮಾಡಲಿದ್ದಾರೆ.
ಚುನಾವಣೆ ಮೇ 5ರಂದು ನಡೆಯಲಿದೆ.
ಪಕ್ಷವು ಬಲಿಷ್ಠವಾಗಿರುವ ಹಾಗೂ ಚುನಾವಣೆಯಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿರುವ ಸುಮಾರು 20 ಜಿಲ್ಲೆಗಳನ್ನು ಗುರುತಿಸುವಂತೆ ಪಕ್ಷದ ಕರ್ನಾಟಕ ಘಟಕಕ್ಕೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘‘ಸುರಕ್ಷಿತವಲ್ಲದ’’ ಕ್ಷೇತ್ರಗಳಲ್ಲಿ ಪ್ರಚಾರ ಮಾಡದಿರಲು ಮೋದಿ ನಿರ್ಧರಿಸಿದ್ದಾರೆ ಎಂಬುದಾಗಿ ಅವರಿಗೆ ನಿಕಟವಾಗಿರುವ ಮೂಲಗಳು ಹೇಳಿವೆ.
ಯಾಕೆಂದರೆ, ಇಂಥ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ ಬಳಿಕ ಪಕ್ಷ ಸೋತರೆ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ ಹಾಗೂ ದೃಢನಿರ್ಧಾರದ ಮತ ಆಕರ್ಷಣಕಾರ ಎಂಬ ತನ್ನ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಎಂಬ ಭೀತಿ ಮೋದಿಗಿದೆ ಎಂದು ಅವು ಹೇಳಿವೆ.
ಅವರು ತನ್ನ ಚುನಾವಣಾ ಪ್ರಚಾರವನ್ನು ಎಪ್ರಿಲ್ 28ರಂದು ಆರಂಭಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಲು ನರೇಂದ್ರ ಮೋದಿ ಸ್ಪರ್ಧೆಯಲ್ಲಿದ್ದಾರೆ. ಆದರೆ, ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದರೆ ಆ ಪಕ್ಷದೊಂದಿಗಿನ ತನ್ನ ಮೈತ್ರಿಯನ್ನು ಜೆಡಿಯು ಕಡಿದುಕೊಳ್ಳುವುದಾಗಿ ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಚ್ಚರಿಸಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡದ ಕಳಂಕವನ್ನು ಮೋದಿ ಹೊತ್ತಿದ್ದಾರೆ ಎಂದು ನಿತೀಶ್ ಬಣ್ಣಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು, ಬಿಜೆಪಿ ನಾಯಕರ ಒಳಜಗಳ ಮತ್ತು ಬಹಿರಂಗ ಜಗಳ ಮನೆಮಾತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರಕ್ಕೆ ಮೋದಿ ಹಿಂದೇಟು ಹಾಕುತ್ತಿದ್ದಾರೆ.

No comments:

Post a Comment