Monday, April 15, 2013

ಬಸ್ಸಿನಲ್ಲಿ ಶಿಕ್ಷಕಿಯ ಪರ್ಸ್ ಕಳವು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಬಸ್ಸಿನಲ್ಲಿ ಪ್ರಯಾಣಿಸುತಿದ್ದ ವೇಳೆ ಶಿಕ್ಷಕಿಯೋರ್ವರ ಬ್ಯಾಗಿನಿಂದ ಸಾವಿರ ರೂ,ಎಟಿಎಂ ಕಾರ್ಡು ಕಳವಿಗೀಡಾದ ಘಟನೆ ನಡೆದಿದೆ.
ಉಪ್ಪಳ ಅಮ್ಗನವಾಡಿ ಶಿಕ್ಷಕಿಯಾದ ಪ್ರತಾಪ ನಗರ ನಿವಾಸಿ ಸವಿತಾ ಎಂಬವರ ಪರ್ಸ್ ಕಳವಿಗೀಡಾದ ಬಗ್ಗೆ ದೂರಲಾಗಿದೆ.ಉಪ್ಪಳ ಸಮೀಪದ ಸೋಂಕಾಲಿನಿಂದ ಕೈಕಂಬದ ನಡುವೆ ಘಟನೆ ನಡೆದಿರುವುದಾಗಿ ಹೇಳಲಾಗಿದ್ದು ಅದೇ ಬಸ್ಸ್ ನಲ್ಲಿ ಸೋಂಕಾಲ್ ನಿಂದ ಕನ್ನಡ ಹಾಗು ತಮಿಳು ಬಾಷೆ ಮಾತನಾಡುತಿದ್ದ ಯುವತಿಯರು ಬಸ್ಸಿಗೆ ಹತ್ತಿದ್ದು ಅವರು ಶಿಕ್ಷಕಿಯ ಜೊತೆ ಜೊತೆಯಾಗಿಯೇ ಇದ್ದರೆಂದು ಶಿಕ್ಷಕಿ ತಿಳಿಸಿದ್ದಾರೆ.ಶಿಕ್ಷಕಿ ಕೈಕಂಬದಲ್ಲಿ ಇಳಿದು ನೋಡುವಾಗ ವಿಷಯ ಅರಿವಿಗೆ ಬಂದಿದೆ. ಉಪ್ಪಳ ಪೊಲೀಸ್ ಕಂಟ್ರೋಲ್ ರೂಂ ನಲ್ಲಿ ಸವಿತಾ ಕೇಸು ದಾಖಲಿಸಿದ್ದಾರೆ. ಬಸ್ಸಿನಲ್ಲಿ ಮಹಿಳೆಯರ ಚಿನ್ನಾಭರಣ,ಹಣ,ಕಳವುಗೈಯುವ ತಂಡವು ಸಕ್ರಿಯವಾಗಿದ್ದು ಪ್ರಯಾಣಿಕರು ಬಗ್ಗೆ ಜಾಗ್ರತೆ ಪಾಲಿಸಲು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

No comments:

Post a Comment