Friday, April 19, 2013

ಕುಡಿದು ಆಟೋ ಚಲಾಯಿಸಿದ ಮದ್ಯಪಾನಿಯ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಂಠ ಪೂರ್ತಿ ಕುಡಿದು ಅಟೋ ಚಲಾಯಿಸುತಿದ್ದ ವ್ಯಕ್ತಿಯೊಬ್ಬನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.
ಗುರುವಾರ ರಾತ್ರಿ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಪಚ್ಲಂಪಾರೆ ನಿವಾಸಿ ಹಮೀದ್(೪೪) ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.ಈತ ಉಪ್ಪಳ ಗೇಟ್ ಸಮೀಪದಲ್ಲಿ ರಿಕ್ಷಾವನ್ನು ಚಲಾಯಿಸುತಿದ್ದ ವೇಳೆ ಶಂಶಯಗೊಂಡ ಪೊಲೀಸರು ಆಟೋವನ್ನು ತಡೆದು ಚಾಲಕನನ್ನು ತಪಾಸಣೆ ನಡೆಸಿದಾಗ ಆತ ಕಂಠಪೂರ್ತಿ ಕುಡಿದಿರುವುದು ಖಚಿತವಾಗಿದ್ದು ಕೂಡಲೇ ಆತನನ್ನು ಸೆರೆ ಹಿಡಿಯಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

No comments:

Post a Comment