Friday, April 12, 2013

ಕಣ್ವತೀರ್ಥ:ರೈಲು ಡಿಕ್ಕಿ ಮದ್ಯವಯಸ್ಕ ಮೃತ್ಯು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರೈಲು ಡಿಕ್ಕಿ ಹೊಡೆದು ಮಧ್ಯವಯಸ್ಕ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕಣವತೀರ್ಥ ರಾಮಾಡಿಯಿಂದ ವರದಿಯಾಗಿದೆ.
ತಮಿಳ್ನಾಡು ನಿವಾಸಿಯೆಂದು ಶಂಶಯಿಸಲಾಗಿರುವ ಈತ ಕೇಸರಿ ಲುಂಗಿ ಉಟ್ಟಿರುತ್ತಾನೆ ಸುಮಾರು 50 ವರ್ಷ ಪ್ರಾಯ ಅಂದಾಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕಾಸರಗೋಡಿನಿಂದ ಮಂಗಳೂರು ಕಡೆ ತೆರಳುತಿದ್ದ ಎಕ್ಸ್ ಪ್ರೆಸ್ ರೈಲ್ ಗಾಡಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.ಶುಕ್ರವಾರ ಬೆಳಿಗ್ಗೆ ಕಣ್ವತೀರ್ಥ ರಾಮಾಡಿಗೆ ತಲುಪಿದ ಈತ ರೈಲು ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ.ಮೃತ ದೇಹವನ್ನು ಸಮಾಜ ಸೇವಕರಾದ ಕುಂಜತ್ತೂರಿನವರಾದ  ಅಮೀರ್ ಯಾನೆ ಅಮ್ಮಿಚ್ಚ ಹಾಗು ಅಕ್ಬರ್ ಸೇರಿ ಮಂಗಲ್ಪಾಡಿ ಆಸ್ಪತ್ರೆಯ ಶವಗಾರಕ್ಕೆ ತಲುಪಿಸಿದರು  

No comments:

Post a Comment