Thursday, April 11, 2013

ಬಡವರ ಬದುಕು ಧ್ವಂಸಗೊಳಿಸಿದ ಟ್ಯಾಂಕರ್ ದುರಂತ


ಬಡವರ ಬದುಕು ಧ್ವಂಸಗೊಳಿಸಿದ ಟ್ಯಾಂಕರ್ ದುರಂತ

ಏಪ್ರಿಲ್ -11-2013

ಪುತ್ತೂರು, ಎ.10ನೀರವ ವೌನ ಆವರಿಸಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ನಷ್ಟ ಪರಿಹಾರ ವಿತರಣೆ ಕುರಿತು ಸಮೀಕ್ಷೆ ನಡೆಸುತ್ತಿದ್ದಾರೆ. ಬುಧವಾರ ಸಂಜೆಯ ತನಕವೂ ಇಲ್ಲಿಗೆ ಜನರು ಆಗಮಿಸಿ ಕುತೂಹಲ ದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಈ ಪ್ರದೇಶ ವಿಡೀ ದುಃಖತಪ್ತವಾಗಿದ್ದು, ಪ್ರತಿಯೊಬ್ಬರ ಬಾಯಲ್ಲೂ ಹೀಗಾಗಬಾರದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಜನರು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ.
ಅಪಘಾತಕ್ಕೀಡಾದ ಟ್ಯಾಂಕರ್‌ನ ಮುಖ ಭಾಗ ಹಾಗೂ ಇತರ ವಾಹನಗಳನ್ನು ಅಧಿಕಾರಿ ಗಳು ಕ್ರೇನ್‌ನ ನೆರವಿನಿಂದ ರಸ್ತೆ ಬದಿಗೆ ಸರಿಸಿ ದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಓರ್ವ ಕಂದಾಯ ನಿರೀಕ್ಷಕ ಹಾಗೂ ಸ್ಥಳೀಯ ಗ್ರಾಮಕರಣಿಕ ಸೇರಿದಂತೆ ಒಟ್ಟು 6 ಮಂದಿ ಗ್ರಾಮ ಕರಣಿಕರು ಅಪಘಾತ ದಿಂದಾಗಿ ನಷ್ಟಕ್ಕೊಳಗಾದ ಮನೆಗಳು, ಅಂಗಡಿ ಗಳು, ಇನ್ನಿತರ ಹಾನಿಗಳ ಬಗ್ಗೆ ಮಾಹಿತಿ ಹಾಗೂ ಕುಟುಂಬಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಸಮೀಕ್ಷೆ ನಡೆಸಿ ಸಂಗ್ರಹಿತ ವರದಿಯನ್ನು ಉಪ ವಿಭಾಗಾಧಿಕಾರಿಗಳಿಗೆ ಕಳುಹಿಸಲಾಗುವುದು. ಬಳಿಕ ಅವರು ಪರಿಹಾರದ ವಿವರವನ್ನು ನೀಡ ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶಗಳಲ್ಲಿ ಅಪಘಾತದ ಬಳಿಕ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ. ಇದೀಗ ಮೆಸ್ಕಾಂ ಇಲಾಖೆಯು ವಿದ್ಯುತ್ ಸರಿಪಡಿಸುವ ಕಾರ್ಯ ನಡೆಸುತ್ತಿದೆ. ಈ ಭಾಗದ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ನೂತನ ವಿದ್ಯುತ್ ತಂತಿಯನ್ನು ಅಳವಡಿಸಲಾಗುತ್ತಿದ್ದು, ವಿದ್ಯುತ್ ಕಂಬಗಳನ್ನೂ ಬದಲಾಯಿಸುವ ಕೆಲಸ ಭರ ದಿಂದ ಸಾಗುತ್ತಿದೆ. ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತ ರಿದ್ದು, ವಿದ್ಯುತ್ ಸಂಪರ್ಕ ದುರಸ್ತಿ ಹಾಗೂ ಜೋಡಣೆ ಕಾರ್ಯ ನಡೆಸುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದಾಗಿ ಇಲ್ಲಿನ ಜನರಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ.
ಇನ್ನೊಂದೆಡೆ ಅಪಘಾತಕ್ಕೀಡಾಡ ಟ್ಯಾಂಕರ್ ನಿಂದ ಹರಿದ ತ್ಯಾಜ್ಯ ಜೊತೆಗೆ ಬೆಂಕಿ ನಂದಿ ಸಲೆಂದು ಸುಮಾರು 11 ಅಗ್ನಿಶಾಮಕ ದಳದ ವಾಹನಗಳು ಹರಿಸಿದ ನೀರು ಕೊಳೆಚೆಯೊಂದಿಗೆ ಇಲ್ಲಿನ ಕೆಲವೊಂದು ಬಾವಿಗಳನ್ನು ಸೇರಿದೆ. ಇದರಿಂದ ಬಹುತೇಕ ಬಾವಿಗಳ ನೀರು ಕುಡಿಯಲು ಅಯೋಗ್ಯವಾಗಿದ್ದು, ಇಲ್ಲಿನ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಮನೆ ಮನೆಗಳಿಗೆ ವಿತರಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಬುಧವಾರ ಐಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದರು.
ಮೃತ ವಸಂತ ಘಟನೆ ವೇಳೆ ತನ್ನ ಓಮ್ನಿ ಕಾರಿನಿಂದ ಇಳಿದು ಹೊರಗೋಡಿದವರು ತಕ್ಷಣವೇ ಕಾರನ್ನು ರಕ್ಷಿಸುವ ಉದ್ದೇಶದಿಂದ ಹಿಂದಿರುಗಿ ಬಂದಿದ್ದರು. ಈ ವೇಳೆ ಅವರು ಬೆಂಕಿಗಾಹುತಿಯಾದರು ಎಂದು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ವ್ಯಕ್ತಿಯೊಬ್ಬರು ವಿವರಿಸಿ ದರು. ವಸಂತರ ಸಹೋದರಿ ತನ್ನ ಅಣ್ಣನ ಮೃತ ವಿಚಾರ ತಿಳಿದು ಪ್ರಜ್ಞಾಶೂನ್ಯರಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ತೀವ್ರತೆ ಸಾರುತ್ತಿರುವ ದೃಶ್ಯಾವಳಿ: ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಹಠಾತ್ ಆವರಿಸಿದ ಬೆಂಕಿಯಿಂದ ತಪ್ಪಿಸಿ ಕೊಳ್ಳಲು ಓಡಿದ ಶೋಭಾ ರೈಯವರನ್ನು ಬೆಂಕಿ ಬಲಿ ತೆಗೆದುಕೊಂಡಿತ್ತು. ಅವರು ಬಟ್ಟೆ ಒಗೆಯುತ್ತಿದ್ದ ಕಲ್ಲಿನಲ್ಲಿ ಸಾಬೂನು, ಪಕ್ಕದಲ್ಲೇ ಒಗೆಯಲೆಂದು ಇರಿಸಿದ್ದ ಕೆಲವೊಂದು ಬಟ್ಟೆಗಳು ಇನ್ನೂ ಅಲ್ಲೇ ಉಳಿದುಕೊಂಡಿದೆ. ಮೃತ ಟೈಲರ್ ಗುರುವಪ್ಪ ಮದುವೆ ಕಾರ್ಯಕ್ಕೆ ಹೋಗಲು ನಿನ್ನೆ ರಜೆ ಮಾಡಲು ತೀರ್ಮಾನಿಸಿದ್ದರು. ಆದರೆ ತುರ್ತಾಗಿ ಬಟ್ಟೆ ಯೊಂದನ್ನು ಹೊಲಿದು ಕೊಡಬೇಕಾದ ಅನಿವಾರ್ಯತೆಯಿಂದ ಬೆಳಗ್ಗೆ ಬೇಗನೆ ಅಂಗಡಿಗೆ ಆಗಮಿಸಿದ್ದರು. ವೃದ್ಧ ತಾಯಿ ಮತ್ತು ಸಹೋದರಿ ಯನ್ನು ಅಗಲಿರುವ ಗುರುವಪ್ಪರನ್ನೇ ನಂಬಿಕೊಂ ಡಿದ್ದ ಈ ಎರಡು ಜೀವಗಳು ಅನಾಥವಾಗಿದ್ದು, ಈ ಮನೆಯಲ್ಲಿ ನೋವು ಮಡುಗಟ್ಟಿದೆ.

ಸಂತ್ರಸ್ತರೆಡೆಗೆ ಗಮನಹರಿಸದ ರಾಜ್ಯ ಸರಕಾರ
ದಕ್ಷಿಣ ಭಾರತದಲ್ಲಿ ಪ್ರಥಮ ಭೀಕರ ಗ್ಯಾಸ್ ಟ್ಯಾಂಕರ್ ಸ್ಫೋಟ 2012ರ ಆಗಸ್ಟ್ 28ರಂದು ಕೇರಳದ ಕಣ್ಣೂರು ಬಳಿ ನಡೆದಿತ್ತು. ಅದರಲ್ಲಿ 19 ಮಂದಿ ಮೃತಪಟ್ಟು 35 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಕೇರಳ ಸರಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿ ಸಿತ್ತು. ಪ್ರಸಕ್ತ ಪೆರ್ನೆಯಲ್ಲಿ ನಡೆದಿರುವ ದುರಂತ ದಕ್ಷಿಣ ಭಾರತದ ಎರಡನೆಯ ಹಾಗೂ ಕರ್ನಾಟಕದ ಪ್ರಥಮ ಭೀಕರ ಅನಿಲ ಟ್ಯಾಂಕರ್ ದುರಂತವಾಗಿದೆ. ಆದರೆ ರಾಜ್ಯ ಸರಕಾರ ನೇರವಾಗಿ ಇದುವರಗೆ ಪರಿಹಾರ ಘೋಷಿಸದಿ ರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಹಾರ ಕಾರ್ಯ ಆರಂಭ
 ದುರಂತ ನಡೆದ ಸ್ಥಳದಲ್ಲಿ ಬುಧವಾರ ಮೆಸ್ಕಾಂ ಅಧಿಕಾರಿ ಗಳು ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ನೆಲ್ಯಾಡಿ ಹಾಗೂ ಪೆರ್ನೆಯ ಮೂಲಕ ಮನೆಗಳ ಸಂತ್ರಸ್ತರಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪೆರ್ನೆ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿಯ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಭೇಟಿ ನೀಡಿದ್ದು, ನಷ್ಟದ ಅಂದಾಜು ಸರ್ವೇ ನಡೆಸಿದೆ. ಸಮೀಕ್ಷಾ ತಂಡದಲ್ಲಿ ಓರ್ವ ಕಂದಾಯ ನಿರೀಕ್ಷಕ ಹಾಗೂ ಸ್ಥಳೀಯ ಗ್ರಾಮಕರಣಿಕ ಸೇರಿದಂತೆ ಒಟ್ಟು 6 ಮಂದಿ ಗ್ರಾಮ ಕರಣಿಕರಿದ್ದಾರೆ

No comments:

Post a Comment