Wednesday, April 10, 2013

ರಸ್ತೆಗಳಲ್ಲಿ ಬುಲೆಟ್ ಟ್ಯಾಂಕರ್‌ಗಳ ಓಡಾಟ ಎಷ್ಟು ಸುರಕ್ಷಿತ?


ರಸ್ತೆಗಳಲ್ಲಿ ಬುಲೆಟ್ ಟ್ಯಾಂಕರ್‌ಗಳ ಓಡಾಟ ಎಷ್ಟು ಸುರಕ್ಷಿತ?

 ಏಪ್ರಿಲ್ -10-2013

ಮಂಗಳೂರು, : ಬುಲೆಟ್ ಟ್ಯಾಂಕರ್‌ಗಳು ರಸ್ತೆಯಲ್ಲಿ ಓಡಾಡುವುರಿಂದ ಸಂಭವಿಸುವ ಅಪಾಯಗಳ ಬಗ್ಗೆ ನಿರ್ಲಕ್ಷ ವಹಿಸಿರುವುದರಿಂದ ಮತ್ತೆ ದ.ಕ. ಜಿಲ್ಲೆಯ ಉಪ್ಪಿನಂಗಡಿಯ ಪೆರ್ನೆ ಬಳಿ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಘಟನೆ ಟ್ಯಾಂಕರ್‌ಗಳ ಅಪಾಯದ ಬಗ್ಗೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ರಸ್ತೆಗಳ ಮೂಲಕ ಅಪಾಯಕಾರಿ ರಾಸಾಯನಿಕ ಉತ್ಪನ್ನಗಳನ್ನು ಹೊತ್ತು ಸಾಗುವ ಬುಲೆಟ್ ಟ್ಯಾಂಕರ್‌ಗಳು ಅಪಾಯ ಸಂಭವಿಸಿದಲ್ಲಿ ಜನಸಮುದಾಯ ಮಾತ್ರವಲ್ಲ ಪರಿಸರಕ್ಕೂ ಭಾರೀ ಪ್ರಮಾಣದ ಹಾನಿ ಸಂಭವಿಸುವ ಬಗ್ಗೆ ಸಾಕಷ್ಟು ವಿರೋಧ ಗಳು ವ್ಯಕ್ತವಾಗಿದ್ದರೂ ನಮ್ಮನ್ನಾಳುವ ಸರಕಾರ, ಜನಪ್ರತಿನಿಧಿಗಳು ಮಾತ್ರ ಸೂಕ್ತ ಕ್ರಮ ಕೈಗೊಳ್ಳು ವಲ್ಲಿ ವಿಫಲವಾಗಿರುವುದು ಮತ್ತೊಮ್ಮೆ ಸಾರ್ವ ಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 
ಕಂಪೆನಿಗಳ ಬೇಜವಾಬ್ದಾರಿತನ
ಇಂದು ಸಂಭವಿಸಿದ ದುರ್ಘಟನೆಗೆ ಕಾರಣವಾದ ಬುಲೆಟ್ ಟ್ಯಾಂಕರ್‌ನಲ್ಲಿದ್ದ ಎಲ್‌ಪಿಜಿ ಅನಿಲವನ್ನು ಟ್ಯಾಂಕರ್‌ಗೆ ತುಂಬಿಸುವ ಸಂದರ್ಭ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮ ಹಾಗೂ ಘಟನೆಯನ್ನು ನಿರ್ವಹಿಸುವಲ್ಲಿ ಸಂಬಂಧಪಟ್ಟ ಸಂಸ್ಥೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಪ್ರಸ್ತುತ ದುರ್ಘಟನೆಗೆ ತುತ್ತಾಗಿರುವ ಬುಲೆಟ್ ಟ್ಯಾಂಕರ್‌ನಲ್ಲಿ ಎಚ್‌ಪಿಸಿಎಲ್ ಕಂಪೆನಿಗೆ ಸೇರಿದ ಎಲ್‌ಪಿಜಿ ಅನಿಲವಿತ್ತೆಂದು ಹೇಳಲಾಗಿದೆ. ಆರಂಭದಲ್ಲಿ ಈ ಬುಲೆಟ್ ಟ್ಯಾಂಕರ್ ಎಂಆರ್‌ಪಿಎಲ್ ಸಂಸ್ಥೆಗೆ ಸೇರಿದ್ದು, ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಎಂಆರ್‌ಪಿಎಲ್ ಸಂಸ್ಥೆಯ ಅಧಿಕಾರಿ ಲಕ್ಷ್ಮಿ ಕುಮಾರ್ ಅವರನ್ನು ಸಂಪರ್ಕಿಸಿದಾಗ, ‘‘ಅದು ನಮಗೆ ಸೇರಿದ್ದಲ್ಲ, ಎಚ್‌ಪಿಸಿಎಲ್‌ನವರದ್ದು’’ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್‌ಪಿಜಿ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು ಅಥವಾ ರಾಸಾ ಯನಿಕಗಳನ್ನು ಸಾಗಿಸುವ ಬುಲೆಟ್ ಟ್ಯಾಂಕರ್ 16,000 ಲೀಟರ್ ಸಾಮರ್ಥ್ಯವನ್ನು ಹೊಂದಿರು ತ್ತದೆ. ಟ್ಯಾಂಕರ್‌ನಲ್ಲಿ ಹಲವು ಕಂಪಾರ್ಟ್ ಮೆಂಟ್‌ಗಳಿರುತ್ತವೆ. ಘಟನೆಗೆ ತುತ್ತಾಗಿರುವ ಟ್ಯಾಂಕರ್‌ನಲ್ಲಿ ಎಷ್ಟು ಕಂಪಾರ್ಟ್ ಮೆಂಟ್ ಗಳಲ್ಲಿ ಎಷ್ಟು ಅನಿಲವನ್ನು ತುಂಬಿಸಲಾಗಿತ್ತು ಹಾಗೂ ಟ್ಯಾಂಕರ್‌ನಲ್ಲಿದ್ದ ಒಟ್ಟು ಅನಿಲದ ಬಗ್ಗೆಯೂ ಈ ವರೆಗೂ ನಿಖರವಾದ ಮಾಹಿತಿಗಳು ದೊರಕಿಲ್ಲ. ಆದರೆ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಕಂಪೆನಿಯಿಂದ ಯಾವುದೇ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಬಂದಿಲ್ಲ. ಕಂಪೆನಿಗಳು ಅಥವಾ ಏಜೆನ್ಸಿಗಳಿಗೆ ಮಾತ್ರವೇ ಯಾವ್ಯಾವ ಕಂಪಾರ್ಟ್ ಮೆಂಟ್‌ನಲ್ಲಿ ಎಷ್ಟು ಪ್ರಮಾಣದ ವಸ್ತು ತುಂಬಿರುತ್ತದೆ ಎಂಬ ನಿಖರ ಮಾಹಿತಿ ಇರುವುದರಿಂದ ಯಾವುದೇ ರೀತಿಯ ಅಪಾಯವನ್ನು ನಿರ್ವಹಿಸುವಲ್ಲಿ ಸಹಕಾರಿಯಾಗುತ್ತದೆ.
ಬೆಂಕಿ ಸಂಭವಿಸಿದಾಗ ಅಗ್ನಿ ಶಾಮಕದಳದ ಜೊತೆ ಕಾರ್ಯನಿರ್ವ ಹಿಸಲು ಸಾಧ್ಯವಾಗುತ್ತದೆ. ಆದರೆ ಇಂದಿನ ಘಟನೆಯಲ್ಲಿ ಅಂತಹ ಯಾವುದೇ ಕಾರ್ಯ ನಡೆದಿಲ್ಲದಿರುವುದು ಅಪಾಯದ ತೀವ್ರತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಬೆಂಕಿ ನಂದಿಸಲು ಸುಮಾರು 5 ಗಂಟೆಗಳಿಗೂ ಅಧಿಕ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಟ ನಡೆಸಬೇಕಾಯಿತು. ಇದೀಗ ಈ ದುರದೃಷ್ಟಕರ ಟ್ಯಾಂಕರ್ ಅನಿಲ ತುಂಬಿಸಿ ಸಂಬಂಧಪಟ್ಟ ಕಂಪೆನಿಯಿಂದ ಹೊರಬರುವಾಗ ಎಷ್ಟು ಅನಿಲವನ್ನು ಹೊಂದಿತ್ತು. ಈ ಟ್ಯಾಂಕರ್ ಎಲ್‌ಪಿಜಿ ಸಾಗಿಸಲು ಅರ್ಹವಾಗಿತ್ತೇ? ಅದರಲ್ಲಿದ್ದ ಅನಿಲವನ್ನು ಹೊರುವ ಸಾಮರ್ಥ್ಯವನ್ನು ಟ್ಯಾಂಕರ್ ಹೊಂದಿತ್ತೇ? ಈ ಬಗ್ಗೆ ಪರಿಶೀಲನೆ, ತಪಾಸಣೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಕಂಪೆನಿ ಉತ್ತರಿಸಬೇಕಿದೆ.
ಮಂಗಳೂರಿನಲ್ಲಿ ಎಲ್‌ಪಿಜಿ ಹಾಗೂ ಅಪಾಯ ಕಾರಿ ರಾಸಾಯನಿಕಗಳನ್ನು ಉತ್ಪಾದಿಸುವ ಕೈಗಾರಿಕೆಗಳಿರುವುದರಿಂದ ದಿನನಿತ್ಯ ಇಲ್ಲಿಂದ ಬೇರೆ ರಾಜ್ಯ, ನಗರಗಳಿಗೆ ನೂರಾರು ಬುಲೆಟ್ ಟ್ಯಾಂಕರ್‌ಗಳ ಮೂಲಕ ಆ ಅಪಾಯಕಾರಿ ಉತ್ಪನ್ನಗಳನ್ನು ಸಾಗಿಸಲಾಗುತ್ತದೆ. ಮಂಗಳೂರಿ ನಲ್ಲಿ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಎಂಸಿಎಫ್ ಸೇರಿದಂತೆ ಹಲವು ಕಂಪೆನಿಗಳಿಂದ ಈ ಅಪಾಯಕಾರಿ ಉತ್ಪನ್ನಗಳು ನೆರೆಯ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮೊದಲಾದೆ ಡೆಗಳಿಗೆ ಸಾಗಿಸಲ್ಪಡುತ್ತವೆ. ಆದರೆ, ಸಾರ್ವಜನಿಕ ವಾಹನಗಳು ಓಡಾಡುವ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ಬುಲೆಟ್ ಟ್ಯಾಂಕರ್‌ಗಳು ಓಡಾಡುವ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ, ಪ್ರತಿಭಟನೆಗಳು ತೀವ್ರವಾಗಿದ್ದರೂ ಇದಕ್ಕೆ ಕಡಿವಾಣ ಹಾಕಲು ಮಾತ್ರ ಇನ್ನೂ ಸಾಧ್ಯವಾಗಿಲ್ಲ.
ಘಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಕೆಲಹೊತ್ತು ತೊಂದರೆಯಾಗಿದ್ದರೂ ಪಕ್ಕದ ಅಡ್ಡ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ದುರ್ಘಟನೆ ಗೊಳಗಾದ ಟ್ಯಾಂಕರ್ ಹಿಂದೆ ಬಸ್ಸುಗಳು ಇರಲಿಲ್ಲ. ಇದ್ದಿದ್ದರೆ ನಿಜಕ್ಕೂ ಆ ಬಗ್ಗೆ ಊಹೆಯೂ ಅಸಾಧ್ಯ ಎಂದು ಪುತ್ತೂರಿನ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್ ‘ವಾರ್ತಾಭಾರತಿ’ ಜೊತೆ ಪ್ರತಿಕ್ರಿಯಿಸಿದ್ದಾರೆ.
‘‘ಟ್ಯಾಂಕರ್‌ಗಳ ಮೂಲಕ ಈ ರೀತಿಯ ಅಪಾಯಕಾರಿ ಉತ್ಪನ್ನಗಳನ್ನು ಸಾಗಿಸುವಾಗ ಸೂಕ್ತ ರೀತಿಯ ತಪಾಸಣೆಯೂ ಅಗತ್ಯವಾಗಿ ರುತ್ತದೆ. ಕೇರಳದಲ್ಲಿ ಪ್ರತಿ 20 ಕಿ.ಮೀ.ಗಳ ಅಂತರದಲ್ಲಿ ಈ ರೀತಿಯ ಘನ ವಾಹನಗಳ ತಪಾಸಣೆ ನಡೆಸುವ ವ್ಯವಸ್ಥೆ ಇರುತ್ತದೆ. ಹಾಗಾಗಿ ಭಯ ಇರುವುದರಿಂದ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಅತ್ಯಂತ ಜಾಗರೂಕತೆ ಯಿಂದ ವಾಹನ ಚಲಾಯಿಸುತ್ತಾರೆ. ಅಂತಹ ವ್ಯವಸ್ಥೆ ನಮ್ಮ ಹೆದ್ದಾರಿಗಳಲ್ಲಿಯೂ ಅಗತ್ಯ’’ ಎಂದು ಯಶವಂತ್ ಅಭಿಪ್ರಾಯಿಸಿದ್ದಾರೆ. 
300 ಮೀಟರ್ ವ್ಯಾಪ್ತಿಯಲ್ಲಿ ಎಲ್ಲವೂ ಸುಟ್ಟು ಕರಕಲು!
‘‘ಬೆಳಗ್ಗೆ 9ರಿಂದ 9:30ರ ಅವಧಿಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ಸಂದರ್ಭ ಉಂಟಾದ ಬೆಂಕಿಯನ್ನು ಮಧ್ಯಾಹ್ನ 2:30ರ ವೇಳೆಗೆ ಸಂಪೂರ್ಣವಾಗಿ ನಂದಿಸಲಾಗಿದೆ. ದುರ್ಘಟನೆ ಸಂಭವಿಸಿದ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಎಲ್ಲವೂ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸುವ ಕೆಲಸದಲ್ಲಿ 13 ವಾಹನಗಳು ಹಾಗೂ 70 ಮಂದಿ ಸಿಬ್ಬಂದಿ ಭಾಗವಹಿಸಿದ್ದರು’’ ಎಂದು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಎಚ್.ಎಸ್. ವರದರಾಜನ್ ತಿಳಿಸಿದ್ದಾರೆ.
 ಪೆರ್ನೆಯ ತಿರುವು ರಸ್ತೆಯಲ್ಲಿ ಟ್ಯಾಂಕರ್ ಚಾಲಕ ಅತೀ ವೇಗವಾಗಿ ವಾಹನ ಚಲಾಯಿ ಸುತ್ತಿದ್ದುದು ಅಥವಾ ಓವರ್ ಟೇಕ್ ಮಾಡಲು ಹೋಗುವ ಸಂದರ್ಭ ಈ ಘಟನೆ ಸಂಭವಿಸಿರ ಬಹುದು. ನಮಗೆ 10:15ಕ್ಕೆ ಘಟನೆಯ ಬಗ್ಗೆ ಸಂದೇಶ ಬಂದಿತ್ತು. ಘಟನೆಯಲ್ಲಿ ಏಳರಿಂದ ಎಂಟು ಮನೆಗಳು ಹಾಗೂ ಅಂಗಡಿ ಸುಟ್ಟು ಹೋಗಿವೆ. ಗ್ಯಾಸ್ ಏಜೆನ್ಸಿ ಅಂಗಡಿಯೊಂದು ಅಲ್ಲಿದ್ದು, ಅದರಲ್ಲಿ 27 ಸಿಲಿಂಡರ್‌ಗಳಿದ್ದ ಕಾರಣ ಘಟನೆಯ ತೀವ್ರತೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ ಎಂಬುದು ವರದರಾಜನ್ ಅಭಿಪ್ರಾಯ.
ರೈಲು ಮಾರ್ಗದ ಮೂಲಕ ಬುಲೆಟ್ ಟ್ಯಾಂಕರ್‌ಗಳಲ್ಲಿ ಅಪಾಯಕಾರಿ ರಾಸಾ ಯನಿಕ ಉತ್ಪನ್ನಗಳನ್ನು ಸಾಗಿಸಬಹುದಾಗಿದೆ. ಒಂದು ವೇಳೆ ಆಕಸ್ಮಿಕ ದುರ್ಘಟನೆಗಳು ಸಂಭವಿಸಿದರೂ ಸಾರ್ವಜನಿಕವಾಗಿ ತೊಂದರೆಗಳಾಗುವ ಸಾಧ್ಯತೆಯನ್ನು ಅಲ್ಲಗಳೆಯ ಲಾಗದಿದ್ದರೂ ಅಪಾಯ ತುಂಬಾ ಕಡಿಮೆ. ಆದರೆ ರಸ್ತೆಗಳ ಮೂಲಕ ಈ ಬುಲೆಟ್ ಟ್ಯಾಂಕರ್‌ಗಳು ಸಾಗುವುದರಿಂದ ತಿರುವು ಮುರುವುಗಳ ರಸ್ತೆಯಲ್ಲಿ ಟ್ಯಾಂಕರ್‌ಗಳ ಚಾಲನೆ ಸದಾ ಅಪಾಯಕ್ಕೆ ಆಹ್ವಾನದಂತಿರುತ್ತದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಟ್ಯಾಂಕರ್‌ಗಳ ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇವೆ. ಮಂಗಳೂರಿ ನಿಂದ ವಿವಿಧ ರಾಜ್ಯ ಹಾಗೂ ನಗರಗಳಿಗೆ ರೈಲು ಮಾರ್ಗದ ಸೌಲಭ್ಯವಿದ್ದರೂ ಕಂಪೆನಿ ಗಳು ಮಾತ್ರ ರಸ್ತೆಗಳ ಮೂಲಕ ಈ ಅಪಾಯಕಾರಿ ಉತ್ಪನ್ನಗಳನ್ನು ಸಾಗಿಸುತ್ತಿರುವುದು ಆತಂಕಕಾರಿ.
ಕೃಪೆ:ವಾ.ಭಾರತಿ

No comments:

Post a Comment