Sunday, April 14, 2013

ಕೈಗೆ ಕಗ್ಗಂಟಾದ 9 ಕ್ಷೇತ್ರಗಳು ಏಪ್ರಿಲ್ -15-2013

*ಕಾಂಗ್ರೆಸ್ ಪಕ್ಷದ 38 ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ
*ಬೆಂ.ದಕ್ಷಿಣಕ್ಕೆ ತೇಜಸ್ವಿನಿ, ಚಾ.ಪೇಟೆಗೆ ಬಾವಾ, ಕಲಘಟಗಿಗೆ ಲಾಡ್
ಬೆಂಗಳೂರು,: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ 38 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಕಾಂಗ್ರೆಸ್ ರವಿವಾರ ಬಿಡುಗಡೆ ಮಾಡಿದೆ. ಇದರಿಂದಾಗಿ ಕಾಂಗ್ರೆಸ್ ೨೧೫ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದ್ದು, ಉಳಿದ 9 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.ಎರಡು ಹಂತಗಳಲ್ಲಿ ಒಟ್ಟು ೨೧೫ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್‌ಗೆ ೯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೆ ಪಟ್ಟಿ:ಬೆಂಗಳೂರು ದಕ್ಷಿಣ-ತೇಜಸ್ವಿನಿ ಗೌಡ, ಕೆ.ಆರ್.ಪುರ-ಬಿ.ಎ.ಬಸವರಾಜು, ಮಂಗಳೂರು ಉತ್ತರ-ಬಿ.ಎ.ವೊಯ್ದಿನ್ ಬಾವಾ, ಮಳವಳ್ಳಿ-ಪಿ.ಎಂ.ನರೇಂದ್ರ ಸ್ವಾಮಿ, ಹಿರಿಯೂರು-ಡಿ.ಸುಧಾಕರ್, ಪದ್ಮನಾಭನಗರ-ಎಲ್.ಎಸ್.ಚೇತನ್‌ಗೌಡ, ಶ್ರವಣಬೆಳಗೊಳ-ಸಿ.ಎಸ್.ಪುಟ್ಟೇಗೌಡ.
ಬಳ್ಳಾರಿನಗರ-ಅನಿಲ್‌ಲಾಡ್, ಕಲಘಟಗಿ-ಸಂತೋಷ್‌ಲಾಡ್,ಮಹದೇವಪುರ-ಎ.ಸಿ.ಶ್ರೀನಿವಾಸ, ತುರುವೇಕರೆ- ಗೀತಾ ರಾಜಣ್ಣ, ಮುಳಬಾಗಿಲು-ಅಮರೇಶ್, ಜೇವರ್ಗಿ- ಅಜಯ್‌ಸಿಂಗ್, ಚಿತ್ತಾಪುರ-ಪ್ರಿಯಾಂಕ ಖರ್ಗೆ, ದಾವಣಗೆರೆ ದಕ್ಷಿಣ-ಶಾಮನೂರು ಶಿವಶಂಕರಪ್ಪ.
ರಾಯಚೂರು ಗ್ರಾಮಾಂತರ-ರಾಜಾ ರಾಯಪ್ಪ ನಾಯಕ, ದೇವನಹಳ್ಳಿ-ವೆಂಕಟಸ್ವಾಮಿ, ಹುಬ್ಬಳ್ಳಿ ಧಾರವಾಡ ಕೇಂದ್ರ-ಮಹೇಶ್ ನಲ್ವಾಡೆ, ಖಾನಾಪುರ-ರಫಿಕ್ ಕೆ.ಖಾನಾಪುರಿ, ಮಾನ್ವಿ-ಜಿ.ಹಂಪಯ್ಯ ನಾಯಕ, ಗಂಗಾವತಿ-ಶ್ರೀನಾಥ್ ಎಚ್.ಆರ್., ಕೆಜಿಎಫ್-ವಿ.ಶಂಕರ್, ದೊಡ್ಡಬಳ್ಳಾಪುರ-ಟಿ.ವೆಂಕಟರಾಮಯ್ಯ, ಹುಬ್ಬಳ್ಳಿ ಧಾರವಾಡ ಪಶ್ಚಿಮ-ಎಸ್.ಆರ್. ಮೋರೆ, ಹಾನಗಲ್-ಮನೋಹರ್ ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ-ಎಸ್.ಎನ್.ಸತೀಶ್.ಹುಕ್ಕೇರಿ-ರವಿ ಬಸವರಾಜ್ ಕರಾಳೆ, ಮಸ್ಕಿ-ಪ್ರತಾಪ್‌ಗೌಡ ಪಾಟೀಲ್, ಜಯನಗರ-ಎಂ.ಸಿ.ವೇಣುಗೋಪಾಲ್, ಚಾಮರಾಜಪೇಟೆ-ಜಿ.ಎ.ಬಾವಾ, ಬಿಜಾಪುರ ನಗರ-ಮಖ್ಬೂಲ್ ಭಗವಾನ್, ಕಾರವಾರ-ರಮಾನಂದ ನಾಯಕ್, ತರೀಕೆರೆ-ಶ್ರೀನಿವಾಸ್ ಜಿ.ಎಚ್., ಸಿ.ವಿ.ರಾಮನ್‌ನಗರ-ಪಿ.ರಮೇಶ್ , ಶಿರಸಿ-ದೀಪಕ್ ರಾಮ್‌ದಾಸ್ ಹೊನ್ನಾವರ, ಜಯನಗರ-ಎಂ.ಸಿ. ವೇಣುಗೋಪಾಲ್, ಮಲ್ಲೇಶ್ವರಂ-ಬಿ.ಕೆ.ಶಿವರಾಂ, ಶ್ರೀರಂಗಪಟ್ಟಣ-ಎ.ಎಸ್.ರಂದ್ರ.                          

No comments:

Post a Comment