Sunday, April 14, 2013

ಮಂಜೇಶ್ವರ ರೈಲ್ವೇ ಹಳಿಯಲ್ಲಿ 6 ದಿವಸದಿಂದ ನಿಲುಗಡೆಯಾದ ಗೂಡ್ಸ್



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಮಂಜೇಶ್ವರ ರೈಲ್ವೇ ಹಳಿಯಲ್ಲಿ ಕಳೆದ  6 ದಿವಸದಿಂದ ಗೂಡ್ಸ್ ಗಾಡಿ ನಿಲುಗಡೆಯಾಗಿದ್ದು ಇದರಿಂದ ವಿದ್ಯಾರ್ಥಿಗಳು,ಕಾರ್ಮಿಕರು ಸಹಿತ ಪ್ರಯಾಣಿಕರು ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ.
ಮಂಜೇಶ್ವರದಿಂದ ರೈಲ್ವೇ ಸ್ಟೇಶನ್ ನಿಂದ ರಾಷ್ಟ್ರೀಯ ಹೆದ್ದಾರಿಯ ಬಾಗಕ್ಕೆ ತಲುಪಬೇಕಾದರೆ ಗೂಡ್ಸ್ ಗಾಡಿಯ ಅಡಿಬಾಗದಿಂದಲೇ ಹಾದು ಹೋಗಬೇಕಾಗಿದೆ.ಇದು ತುಂಬಾ ಅಪಾಯಕಾರಿ ಸಂಗ್ತಿಯಾಗಿದೆ.ಇದಕ್ಕಿಂತ ಮೊದಲು ಇದೇ ಗೂಡ್ಸ್ ಗಾಡಿಯ ಅಡಿಬಾಗದಿಂದ ಹಾದುಹೋಗುವಾಗ ಗೂಡ್ಸ್ ಗಾಡಿ ಚಲಿಸಿ 2 ಮರಣ ಸಂಭವಿಸಿದೆ. ವಿವರವನ್ನು ಕೇಂದ್ರ ರೈಲ್ವೇ ಸಹ ಮಂತ್ರಿಯಾಗಿದ್ದ ಆಹ್ಮದ್ ಸಹಿತ ಎಲ್ಲಾ ಅಧಿಕಾರಿಗಳಿಗೂ ಮನದಟ್ಟಾಗುವ ರೀತಿಯಲ್ಲಿ  ಮಂಜೇಶ್ವರ ಗ್ರಾಹಕರ ವೇದಿಕೆಯ ರೀತಿಯ ಹಲವು ಸಂಘಟನೆಗಳು ಆವಾಗಲೇ ಎಚ್ಚರಿಕೆ ನೀಡಿದೆ.ಇದೀಗ ಕಾಸರಗೋಡು ಸಂಸದರಾದ ಕರುಣಾಕರನ್ ರವರನ್ನು  ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷರು ಸಂಪರ್ಕಿಸಿದಾಗ ಸಂಸದರು ರೈಲ್ವೇ ಅಧಿಕಾರಿಗಳಿಗೆ ಗೂಡ್ಸ್ ಗಾಡಿಯನ್ನು ತೆರವುಗೊಳಿಸಲು ಆದೇಶಿಸಿ 2 ದಿವಸಕಳೆದರೂ ಅಧಿಕಾರಿಗಳು ಯಾರು ಸ್ಪಂದಿಸಿಲ್ಲವೆಂದು ವೆಲ್ಫೇರ್ ಪಾರ್ಟಿ ಕೂಡಾ ಆರೋಪಿಸಿದೆ. ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಹಾಗು ರೈಲ್ವೇ ಅಧಿಕಾರಿಗಳು ಇಂತಹ ಘಟನೆಗಳನ್ನು ಕಂಡೂ ಕಾಣದಂತೆ ವರ್ತಿಸುವುದು ಇಲ್ಲಿಯ ನಾಗರಿಕರನ್ನು ಇನ್ನೂ ಆತಂಕಕ್ಕೀಡುಮಾಡಿದೆ.
ಇತ್ತೀಚೆಗೆ ಇದೇ ರೀತಿ ಗೂಡ್ಸ್ ಗಾಡಿ ಮಂಜೇಶ್ವರದ ರೈಲ್ವೇ ಹಳಿಯಲ್ಲಿ ನಿಲುಗಡೆಯಾಗಿ ಸುಮಾರು ವಾರಗಳೇ ಕಳೆದು ನಂತ್ರ ಮುಂದಕ್ಕೆ ಚಲಿಸಿತ್ತು.ಮಂಜೇಶ್ವರದ ರೈಲ್ವೇ ಹಳಿಯಲ್ಲಿ ವಾರಗಳ ತನಕ ಗೂಡ್ಸ್ ನಿಲುಗಡೆಯಾಗುವುದು ಮಾಮೂಲಿಯಾಗಿದೆ.ಜನಪ್ರತಿನಿಧಿಗಳು ಇದಕ್ಕೊಂದು ಪರಿಹಾರಕಂಡುಕೊಳ್ಳಬೇಕಾಗಿದೆ.ಇಲ್ಲವಾದರೆ ಇನ್ನು ಅದೆಷ್ಟೋ ಜೀವಗಳು ಗೂಡ್ಸ್ ಗಾಡಿಗೆ ಬಲಿಯಾಗುವ ಸಾಧ್ಯತೆ ಇದೆ.ಸಂಭಂಧಪಟ್ಟವರು ಇತ್ತ ಕಡೆ ಗಮನಿಸಲು ನಾಗರಿಕರು ಆಗ್ರಹಿಸಿದ್ದಾರೆ

No comments:

Post a Comment