Friday, April 19, 2013

ಬಿಯರ್ ಬಾಟಲಿಯಲ್ಲಿ ಪ್ಲಾಸ್ಟಿಕ್ ಹಾಳೆ ಗ್ರಾಹಕನಿಗೆ 50,000 ರೂ. ಪರಿಹಾರಹೈದರಾಬಾದ್, : ಮಲಿನಕಾರಿ ಬಿಯರನ್ನು ಪೂರೈಸಿರುವುದಕ್ಕಾಗಿ ವಕೀಲರೊಬ್ಬರಿಗೆ 50,000 ರೂ. ಪರಿಹಾರ ನೀಡುವಂತೆ ಬಳಕೆದಾರರ ವೇದಿಕೆಯೊಂದು ಯುನೈಟಡ್ ಬ್ರೂವರೀಸ್ ಕಂಪೆನಿಗೆ ಆದೇಶ ನೀಡಿದೆ.
ವಕೀಲರಿಗೆ ಪೂರೈಸಲಾದ ಕಿಂಗ್‌ಫಿಶರ್ ಸ್ಟ್ರಾಂಗ್ ಬಿಯರ್ ಬಾಟಲಿಯ ಒಳಗೆ ಆರು ಇಂಚು ಪ್ಲಾಸ್ಟಿಕ್ ಹಾಳೆಯಿತ್ತು. ಬಿಯರ್ ಕುಡಿದ ಹಲವರು ಅಸ್ವಸ್ಥರಾಗಿ ದ್ದರು. ಈ ಹಿನ್ನೆಲೆಯಲ್ಲಿ ಯನೈಟೆಡ್ ಬ್ರೂವರೀಸ್ ಕಂಪೆನಿಗೆ ಪರಿಹಾರ ಕೋರಿ ನೋಟಿಸ್ ಜಾರಿ ಮಾಡಿ ದರು. ಆದರೆ, ಕಂಪೆನಿಯು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಆಗ ವಕೀಲ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಕುಲ್ಕಚಾರ ಮಂಡಲದ ಕಾಮನ್‌ಪಲ್ಲಿ ಗ್ರಾಮದ ಕೆ. ಜಗನ್ ರಂಗಾರೆಡ್ಡಿ ಜಿಲ್ಲಾ ಬಳಕೆದಾರರ ವೇದಿಕೆಗೆ ದೂರು ಸಲ್ಲಿಸಿದರು

No comments:

Post a Comment