Thursday, April 25, 2013

ಪಾಪ್ಯುಲರ್ ಫ್ರಂಟ್ ಮೆರವಣಿಗೆ:50 ಮಂದಿ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅನುಪತಿ ಪಡೆಯದೆ ಪ್ರತಿಭಟನಾ ಮೆರವಣಿಗೆ ನಡೆಸಿದ 50 ಮಂದಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬುಧವಾರ ರಾತ್ರಿ ಹೊಸಂಗಡಿ ಜಂಕ್ಷನ್ ನಲ್ಲಿ ಪಾಪ್ಯುಲರ್ ಫ್ರಂಟ್ ಮಂಜೇಶ್ವರ ಮಂಡಲದ ಕಾರ್ಯಕರ್ತರ ವತಿಯಿಂದ ಕಣ್ಣೂರಿನಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಸೆರೆ ಹಿಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು.ಆದರೆ ಮೆರವಣಿಗೆಗೆ ಅನುಮತಿಪಡೆಯದ ಕಾರಣ ಮಂಜೇಶ್ವರ ಪೊಲೀಸರು ಇವರ ವಿರುದ್ದ ಕೇಸು ದಾಖಲಿಸಿದ್ದಾರೆ.
ಇದಕ್ಕೆ ಸಂಭಂಧಿಸಿ ಅಬ್ದುಲ್ಲಾ ಪೊಯ್ಯಂಗಳ,ಅನ್ಸಾರ್ ಹೊಸಂಗಡಿ,ಖಾದರ್ ಹೊಸಂಗಡಿ,ಝಕರಿಯಾ ಉದ್ಯಾವರ ಸೇರಿದಂತೆ ಮೊತ್ತ 50 ಮಂದಿ ವಿರುದ್ದ ಕೇಸು ದಾಖಲಿಸಿದ್ದಾರೆ.

No comments:

Post a Comment