Sunday, April 28, 2013

ವಿದ್ಯುತ್ ದರದಲ್ಲಿ ಏರಿಕೆ ಸಾಧ್ಯತೆ:300 ಮೀರಿದ ಎಲ್ಲಾ ಯೂನಿಟ್ ಗೂ ಸಮಾನ ದರ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ವಿದ್ಯುತ್ ದರ ಇನ್ನೂ ಕೂಡಾ ಏರುವ ಸಾಧ್ಯತೆ ಇರುವುದಾಗಿ ವಿದ್ಯುತ್ ನಿಯಂತ್ರಣಾ ಆಯೋಗ ಪ್ರಕಟಿಸಿದೆ. ತಿಂಗಳ ಕೊನೆಯೊಳಗೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ವಿದ್ಯುತ್ ದರದಲ್ಲಿ ಶೇ.12 ರಷ್ಟು ಹೆಚ್ಚಳ ತರುವ ತೀರ್ಮಾನಗಳನ್ನು ಆಯೋಗ ಕೈಗೊಂಡಿರುವುದಾಗಿ ತಿಳಿದು ಬಂದಿದೆ.ಇದರಂತೆ ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ  ಸ್ಲ್ಯಾಬ್ ಗೆ ಹೊಂದಿಕೊಂಡು ೨೦ ಪೈಸೆಯಿಂದ ೭೦ ಪೈಸೆ ತನಕ ಹೆಚ್ಚಳ ಉಂಟಾಗಲಿದೆ.
2750 ಕೋಟಿ ರೂ.ಗಳ ಆದಾಯ ನಷ್ಟ ಎದುರಿಸುತ್ತಿದೆ ಎಂದು ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ವಿದ್ಯುನ್ಮಂಡಳಿ ಸ್ಪಷ್ಟಪಡಿಸಿದೆ.ಇದರಲ್ಲಿ 1570 ಕೋಟಿ ರೂ.ವನ್ನು ವಿದ್ಯುತ್ ದರ ಹೆಚ್ಚಿಸುವ ಮೂಲಕ ವಸೂಲಿ ಮಾಡಲು ಅನುಮತಿ ನೀಡಬೇಕೆಂದೂ ಮಂಡಳಿ ವಿನಂತಿಸಿಕೊಂಡಿದೆ.ಆದರೆ ಇದೇ ವೇಳೆ ವಿದ್ಯುತ್ ಇಲಾಖೆಯ ಸಿಬ್ಬಂಧಿಗಳ ಸವಲತ್ತುಗಳನ್ನು ಹೆಚ್ಚಿಸಲು ಅದರ ಭಾರವನ್ನು ವಿದ್ಯುತ್ ಗ್ರಾಹಕರ ಮೇಲೆ ಹೊರಿಸಲಸಾಧ್ಯವೆಂದು ಆಯೋಗ ಈಗಾಗಲೇ ಮನವರಿಕೆ ಮಾಡಿಕೊಟ್ಟಿದೆ.
ತಿಂಗಳಿಗೆ 300 ಕ್ಕಿಂತ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದ್ದಲ್ಲಿ ಎಲ್ಲಾ ಸ್ಲ್ಯಾಬ್ ನವರೂ ಸಮಾನ ರೀತಿಯ ಹೆಚ್ಚುವರಿ ದರ ನೀಡಬೇಕಾಗಿ ಬರಲಿದೆ.ಇಂತಹ ಗ್ರಾಹಕರಿಗೆ ಸ್ಲ್ಯಾಬ್ ಸಂಪ್ರದಾಯದಂತೆ ಲಭಿಸುವ ಯಾವುದೇ ವಿನಾಯಿತಿ ಲಭಿಸಲು ಸಾಧ್ಯವಿಲ್ಲ.
2012-2013 ಆರ್ಥಿಕ ವರ್ಷದಲ್ಲಿ ವಿದ್ಯುನ್ಮಂಡಳಿಯ ನಷ್ಟ 1040 ಕೋಟಿಯಲ್ಲಿ ಆಗಿ ನಿಗದಿ ಪಡಿಸಿ ನಿಗಮ ಅದಕ್ಕೆ ಆಯೋಗ ಅಂಗೀಕಾರ ನೀಡಿತ್ತು.ಇದರಲ್ಲಿ 600 ಕೋಟಿ ರೂ.ಗಳ ನಷ್ಟವನ್ನು ದರ ಏರಿಸುವ ಮೂಲಕ ವಸೂಲಿ ಮಾಡುವ ಅನುಮತಿಯನ್ನು ಆಯೋಗ ಮಂಡಳಿಗೆ ನೀಡಿತ್ತು.ಈಗಿರುವ ಟೆಲಿಸ್ಕೋಪಿಕ್ ಸಂಪ್ರದಾಯದ ರೀತಿಯ ದರ ವಸೂಲಿ ಕ್ರಮವನ್ನು ಕೈ ಬಿಟ್ಟು ಎಲ್ಲಾ ಸ್ಲ್ಯಾಬ್ ನವರಿಗೂ ಸಮಾನ ರೀತಿಯ ವಿದ್ಯುತ್ ದರ ಹೆಚ್ಚಿಸಬೇಕಾದ ಬೇಡಿಕೆಯನ್ನು ಮಂಡಳಿ ಮುಂದಿರಿಸಿದೆ.ಅಂದರೆ 200 ಯೂನಿಟ್ ತನಕ ವಿದ್ಯುತ್ ಬಳಸಿದ್ದಲ್ಲಿ ಪ್ರತೀ ಯೂನಿಟ್ ಗೂ ೨೦೦ ನೇ ಯೂನಿಟ್ ದರ ನೀಡಬೇಕಾಗಿದೆ.
ಈಗ ಸ್ಲ್ಯಾಬ್ ಆಧಾರದಲ್ಲಿ ಗ್ರಾಹಕರಿಗೆ ದರ ವಸೂಲಿ ನಿಗದಿಪಡಿಸಲಾಗಿದೆ.ಅದರಂತೆ ಈಗ 40 ಯೂನಿಟ್ ತನಕ ಒಂದೇ ದರ 40 ಯೂನಿಟ್ ಕ್ಕಿಂತ ಮೇಲ್ಪಟ್ಟ ಯೂನಿಟ್ ಗಳಿಗೆ ಸ್ಲ್ಯಾಬ್ ಗೆ ಹೊಂದಿಕೊಂಡು ವಿಭಿನ್ನವಾದ ಹೆಚ್ಚು ದರ ವಸೂಲಿ ಮಾಡಲಾಗುತ್ತದೆ.300 ಕ್ಕಿಂತ ಅಧಿಕ ವಿದ್ಯುತ್ ಬಳಸುವ ಗ್ರಾಹಕರಿಗೆ ಟೆಲಿಸ್ಕೋಪಿಕ್ ಸರ ವಸೂಲು ಮಾಡಬೇಕೆಂಬ ಆಯೋಗದ ಅಭಿಪ್ರಾಯದಂತೆ ಇನ್ನು 300 ಕ್ಕಿಂತ ಅಧಿಕ ವಿದ್ಯುತ್ ಬಳಸುವ ಗ್ರಾಹಕರು ಭಾರೀ ದರ ತೆರಬೇಕಾಗಿ ಬರಲಿದೆ.

No comments:

Post a Comment