Saturday, April 6, 2013

29 ಗಂಟೆ ಬಳಿಕ 10 ತಿಂಗಳ ಶಿಶುವಿನ ರಕ್ಷಣೆ



- ಏಪ್ರಿಲ್ -07-2013

ಥಾಣೆ, : ಇಲ್ಲಿನ ಏಳು ಮಹಡಿಗಳ ಕಟ್ಟಡವೊಂದು ಕುಸಿದ 29 ಗಂಟೆಗಳ ಬಳಿಕ ರಕ್ಷಣಾ ಕಾರ್ಯಕರ್ತರು 10 ತಿಂಗಳ ಶಿಶುವೊಂದನ್ನು ಅವಶೇಷಗಳ ಅಡಿಯಿಂದ ಜೀವಂತವಾಗಿ ನಿನ್ನೆ ಹೊರತೆಗೆದಿದ್ದಾರೆ.
ಆದರೆ, ಸಾವಿನ ದವಡೆಯಿಂದ ಹೊರಬಂದ ಹೆಣ್ಣು ಮಗುವನ್ನು ಸ್ವಾಗತಿಸಲು ಕುಟುಂಬ ಸದಸ್ಯರಾರೂ ಇಲ್ಲ.
ಮಗು ಈಗ ಕಲ್ವದಲ್ಲಿರುವ ಛತ್ರಪತಿ ಶಿವಾಜಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಹೆಸರು ಯಾರಿಗೂ ಗೊತ್ತಿಲ್ಲದಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ಅದನ್ನು ‘ಗುಡಿಯಾ’ ಎಂದು ಕರೆಯುತ್ತಿದ್ದಾರೆ.
‘‘ನಮಗೆ ಅವಳ ಹೆಸರು ಗೊತ್ತಿಲ್ಲ. ನಾವು ಅವಳನ್ನು ಗುಡಿಯಾ ಎಂದು ಕರೆಯುತ್ತೇವೆ. ಅವಳು ನೋಡಲು ‘ಗುಡಿಯಾ’ (ಗೊಂಬೆ)ದಂತೆಯೇ ಇದ್ದಾಳೆ’’ ಎಂದು ಮಗುವಿನ ತೊಟ್ಟಿಲು ತೂಗಿದ ಆಸ್ಪತ್ರೆ ಸಿಬ್ಬಂದಿ ಎಂ. ವೇಲ ಹೇಳಿದರು. ಮಗುವಿನ ಮುಖದಲ್ಲಿ ಜಜ್ಜಿದ ಗಾಯಗಳಿವೆ.
 ‘‘ಮಗು ಹಾಲು ಕುಡಿದಿದೆ ಹಾಗೂ ಈಗ ತುಂಬಾ ಚೇತರಿಸಿಕೊಂಡಿದೆ. ಮಗು ದೇವರ ದಯೆಯಿಂದ ಬದುಕಿದೆ. ಈಗ ದೇವರ ದಯೆಯಿಂದ ಕುಟುಂಬಿಕರು ಬಂದು ಮಗುವನ್ನು ಕರೆದುಕೊಂಡು ಹೋಗುವುದನ್ನು ನಾವು ಎದುರುನೋಡುತ್ತಿದ್ದೇವೆ’’ ಎಂದು ವೇಲ ಹೇಳಿದರು.
ಮಗುವಿನ ತಾಯಿ ಮತ್ತು ಚಿಕ್ಕಮ್ಮ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಗುಡಿಯಾಳ ನೆರೆಕರೆಯ ವ್ಯಕ್ತಿಯೊಬ್ಬರು ಆಸ್ಪತ್ರೆ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೆ, ಯಾರೂ ಮಗುವನ್ನು ಕರೆದುಕೊಂಡು ಹೋಗಲು ಬಂದಿಲ್ಲ.
ಕಟ್ಟಡ ಕುಸಿದ ಸುಮಾರು 30 ಗಂಟೆಗಳ ಬಳಿಕ ಇನ್ನೊಬ್ಬ ವ್ಯಕ್ತಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಕುತೀಬಿ ಶೇಖ್ (65) ಎಂಬ ಮಹಿಳೆಯನ್ನು ನಿನ್ನೆ ರಾತ್ರಿ ಸಿಎಸ್‌ಎಂ ಆಸ್ಪತ್ರೆಗೆ ಸೇರಿಸಲಾಗಿ

No comments:

Post a Comment