Tuesday, April 16, 2013

2014ರ ಲೋಕಸಭಾ ಚುನಾವಣೆ: ಬಿಜೆಪಿಯೊಂದಿಗೆ ಮೈತ್ರಿ ಯಿಲ್ಲ: ನವೀನ್ ಪಟಾ್ನಯಕ್

 ಮುಂದಿನ ಲೋಕಸಭಾ ಚುನಾಣೆಯಲ್ಲಿ ತನ್ನ ಬಿಜೆಡಿ ಪಕ್ಷವು ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಬೆಳೆಸದೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟಪಡಿಸಿದ್ದು, ತೃತೀಯ ರಂಗವು ‘ಅತ್ಯಂತ ಆರೋಗ್ಯಕರ’ ಆಯ್ಕೆ ಯಾಗಿದೆಯೆಂದು ಹೇಳಿದ್ದಾರೆ.
ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲವೆಂದು ಇಂದಿಲ್ಲಿ ನಡೆದ ಸಮ್ಮೇಳನ ವೊಂದರ ನೇಪಥ್ಯದಲ್ಲಿ ಅವರು ಪತ್ರಕರ್ತರಿಗೆ ತಿಳಿಸಿದರು.
2014ನೆ ಲೋಕಸಭಾ ಚುನಾವಣೆಯಲ್ಲಿ ಬಿಜು ಜನತಾ ದಳವು (ಬಿಜೆಡಿ) ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸುವ ಕುರಿತಾದ ಪ್ರಶ್ನೆಯೊಂದಕ್ಕೆ ನವೀನ್ ಉತ್ತರಿಸುತ್ತಿದ್ದರು.
ತೃತೀಯ ರಂಗವನ್ನು ಪುನಶ್ಚೇತನಗೊಳಿಸುವ ಸಾಧ್ಯತೆ ಯಿದೆಯೇ ಎಂದು ಕೇಳಿದಾಗ, ತೃತೀಯ ರಂಗವು, ‘ಅತ್ಯಂತ ಆರೋಗ್ಯಕರ ಪರ್ಯಾಯವಾಗಿದೆ! ಆದರೆ, ಅದನ್ನೂ ಆರಂಭದ ದಿನಗಳಲ್ಲೇ ಇದೆಯೆಂದು ಅವರು ಹೇಳಿದರು.
1999ರಿಂದ ಈಶಾನ್ಯ ರಾಜ್ಯವನ್ನು ಆಳುತ್ತಿರುವ ಬಿಜೆಡಿ 2009ರ ತನಕ ಬಿಜೆಪಿಯೊಂದಿಗೆ ಮೈತ್ರಿ ಹೊಂದಿತ್ತು. ಆದರೆ, 2009ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿಯೊಂದಿಗಿನ ಸಂಬಂಧವನ್ನು ಪ್ರಾದೇಶಿಕ ಪಕ್ಷವು ಕಡಿದುಕೊಂಡಿತ್ತು. ಲೋಕಸಭೆಯಲ್ಲಿ ಬಿಜೆಡಿಯ 14 ಸದಸ್ಯರಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಬಿಜೆಡಿ ಭಾಗಿಯಾಗಿತ್ತು ಹಾಗೂ ಪಟ್ನಾಯಕ್ ಸಂಪುಟ ದರ್ಜೆಯ ಸಚಿವರಾಗಿದ್ದರು.
ಕೃಪೆ.ವಾ.ಭಾರತಿ 

No comments:

Post a Comment