Tuesday, April 23, 2013

ಕುಂಜತ್ತೂರು ಮುಂದುವರಿದ ಸಂಘರ್ಷ:2 ಬೈಕ್ ಗಳಿಗೆ ಕಿಚ್ಚು:ಮೂವರ ವಿರುದ್ದ ಕೇಸು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರು ಪ್ರದೇಶದಲ್ಲಿ ಬ್ಯಾನರ್ ಗಳ ವಿಷಯದಲ್ಲಿ ಉಂಟಾದ ಸಂಘರ್ಷದಲ್ಲಿ ಬೈಕ್ ಗಳಿಗೆ ಕಿಚ್ಚಿಟ್ಟು ನಾಶಗೊಳಿಸಲಾಗಿದೆ.ಪೊಲೀಸರು 25ಮಂದಿಯನ್ನು ಕಸ್ಟಡಿಗೆ ತೆಗೆದು ಮೂವರ ವಿರುದ್ದ ಕೇಸು ದಾಖಲಿಸಿದ್ದಾರೆ.ಪೊಲೀಸರು  ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನ್ನು ಏರ್ಪಡಿಸಿದ್ದುಕುಂಜತ್ತೂರು,ಮಾಡ,ತೂಮಿನಾಡು,ಕಣ್ವತೀರ್ಥ,ಮಜಲ್  ಪ್ರದೇಶಗಳಲ್ಲಿ ಪೊಲೀಸ್ ಪಿಕೆಟ್ ಪೋಸ್ಟ್ ಸ್ಥಾಪಿಸಲಾಗಿದೆ.ಕುಂಜತ್ತೂರು ಜಂಕ್ಷನ್ ನಲ್ಲಿ ಪೊಲೀಸ್ ಬಸ್ಸುಗಳನ್ನು ಇರಿಸಲಾಗಿದೆ ಹಾಗು ಬೈಕ್ ಗಳಲ್ಲಿ ಪೊಲೀಸರು ಪೆಟ್ರೋಲಿಂಗ್ ನಡೆಸುತಿದ್ದಾರೆ.ಜನರು ಶಾಂತಿಯನ್ನು ಕಾಪಾಡಲು  ಪೊಲೀಸ್ ಅಧಿಕಾರಿಗಳು ನಿನ್ನೆಯಿಂದ ಇವತ್ತಿನವರೆಗೆ  ಪೊಲೀಸ್ ಠಾಣೆ ಹಾಗು ಖಾಸಗಿ ಸ್ಥಳಗಳಲ್ಲಾಗಿ ಮೂರು ಸಲ ಸರ್ವಪಕ್ಷದ ಶಾಂತಿ ಸಭೆಯನ್ನು ಕೂಡಾ ಕರೆದಿದ್ದಾರೆ.
ಕುಂಜತ್ತೂರು ಮಂಜೇಶ್ವರಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಭಂಧಪಟ್ಟ ಫ್ಲೆಕ್ಸ್ ಬೋರ್ಡ್,ತೋರಣಗಳನ್ನು ಹಾನಿಗೊಳಿಸುವ ಕಿಡಿಗೇಡಿಗಳದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಕುಂಜತ್ತೂರಿನಲ್ಲಿ ಸಂಘರ್ಷಾವಸ್ಥೆ ಉಂಟಾಗಲು ಕಾರಣವಾಗಿದೆ. ಹಿನ್ನೆಲೆಯಲ್ಲಿ ಕುಂಜತ್ತೂರಿನಿಂದಬಂದ್ಯೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಬೋರ್ಡ್ತೋರಣಗಳನ್ನು ಕುಂಬಳೆ ಸರ್ಕಲ್ ಇನ್ಸ್ ಪೆಕ್ಟರ್ ಟ್.ಪಿ.ರಂಜಿತ್ ರವರ ನೇತೃತ್ವದಲ್ಲಿತೆರವುಗೊಳಿಸಲಾಯಿತು.
ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿರುವ ಕುಂಜತ್ತೂರಿನಲ್ಲಿ ಕೆಲವೊಂದು ಸಂಘಟನೆಯ ಕಾರ್ಯಕರ್ತರಿಂದ ಉಂಟಾಗುವ ಸಂಘರ್ಷಾವಸ್ಥೆಯನ್ನು ತಡೆಯಲು ಹಾಗುಜನರು ಶಾಂತಿ ಕಾಪಾಡಲು ಸೋಮವಾರ ಕುಂಜತ್ತೂರಿನ ಮಾಸ್ಕೋ ಹಾಲ್ ನಲ್ಲಿ ಡಿ ವೈ ಎಸ್ಪಿ ಮೋಹನ್ ರವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷದ ಸಭೆಯನ್ನುಕರೆಯಲಾಗಿತ್ತು ಸಭೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.ಸಭೆ ಮುಗಿದು ಜನರು ಹೊರಬರುವಷ್ಟರಲ್ಲಿ ದುಷ್ಕರ್ಮಿಗಳು ಕುಂಜತ್ತೂರುಕ್ಷೌರದಂಗಡಿ ಮಾಲಕ ಕಿರಣ್ ಕುಮಾರ್  ಬೈಕ್ ಗೆ ಕಿಚ್ಚಿಟ್ಟು ನಾಶಗೊಳಿಸಿದರು ಬಳಿಕ ಕುಂಜತ್ತೂರಿನ ಯತೀಂ ಖಾನ್ ರಸ್ತೆಯಲ್ಲಿ ಫ್ಲಾಟ್ ನಲ್ಲಿ ವಾಸಿಸುತ್ತಿರುವ ಅಶ್ರಫ್ರವರ ಬೈಕ್ ಗೂ ಕಿಚ್ಚಿಟ್ಟು ನಾಶಗೊಳಿಸಲಾಯಿತು  ಸಂಭಂಧ ಪೊಲೀಸರು ಮೂವರ ವಿರುದ್ದ ಕೇಸು ದಾಖಲಿಸಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಮಾಸ್ಕೋ ಹಾಲ್ ಸಮೀಪವಿರುವ ಭಜನಾ ಮಂದಿರದ ಪರಿಸರದಲ್ಲಿ ಸೇರಿದ್ದ ೨೫ ಮಂದಿಯನ್ನು ಪೊಲೀಸರು ಸೋಮವಾರ ರಾತ್ರಿ ಕಸ್ಟಡಿಗೆ ತೆಗೆದು ಮಂಗಳವಾರ ಬೆಳಿಗ್ಗೆ ಬಿಡುಗಡೆಗೊಳಿಸಿದ್ದಾರೆ.ಕುಂಜತ್ತೂರು ಪರಿಸರದಲ್ಲಿ ಉದ್ವಿಘ್ನ ಪರಿಸ್ಥಿತಿ ನೆಲೆಗೊಂಡ ಕಾರಣ ಪೊಲೀಸ್  ಬಿಗಿ ಬಂದೋಬಸ್ತ್ ನಿಂದ ಇದೀಗ ಪರಿಸ್ಥಿತಿ ಶಾಂತಗೊಂಡಿದೆ.

No comments:

Post a Comment