Tuesday, April 9, 2013

ಬಂದಿಯೋಡ್ ಹಾಗು ಮಂಜೇಶ್ವರದ ಪಾವೂರು ನಲ್ಲಿ 1.8 ಕ್ವಿಂಟಾಲ್ ಗಾಂಜಾ ಪತ್ತೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನಿನ್ನೆ ನಡೆದ ಕಾಸರಗೋಡು ಎಸ್ಪಿ ಯವರ ವಿಶೇಷ ದಳದ ಕಾರ್ಯಾಚರನೆಯಲ್ಲಿ ಬಂದಿಯೋಡ್ ಹಾಗು ಮಂಜೇಶ್ವರದ ಪಾವೂರಿನಲ್ಲಿ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ  1.8 ಕ್ವಿಂಟಾಲ್ ಗಾಂಜಾ  ಪತ್ತೆಯಾದ ಬಗ್ಗೆ ವರದಿಯಾಗಿದೆ.
 ಮಂಗಳವಾರ ಸಂಜೆ ನಡೆದ ದಾಳಿಯಲ್ಲಿ ಬಂದಿಯೋಡ್ ಮಲ್ಲಂಗೈ ಎಂಬ ಸ್ಥಳದಲ್ಲಿ ಅಝ್ವೀನಾ ಕ್ವಾರ್ಟರ್ಸ್ ರಿಕ್ಷಾ ಚಾಲಕ ಅಬ್ಬಾಸ್ (35ಎಂಬವರ ಮನೆಗೆ ದಾಳಿ ನಡೆಸಿದ ವಿಶೇಷ ದಳ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ 30 ಕೆ.ಜಿ ಗಾಂಜಾವನ್ನು ಪತ್ತೆ ಹಚ್ಚಿ ಕ್ವಾಟರ್ಸ್ ನಲ್ಲಿದ್ದ  ಅಬ್ಬಾಸ್ ರವರ ಪತ್ನಿ ಉಪ್ಪಿನಂಗಡಿ ನಿವಾಸಿ ಸೆಮೀರಾ ಯಾನೆ ಸೆಮೀಮಾ (26) ಹಾಗು ಕಾಸರಗೋಡು ತಲಂಗರ ನಿವಾಸಿ ಅಬ್ದುಲ್ ಅಝೀಝ್ (46) ಎಂಬವರನ್ನು  ಬಂಧಿಸಿರುತ್ತಾರೆ.ನಂತ್ರ ಆರೋಪಿ ಅಬ್ದುಲ್ ಅಝೀಝ್ ಪೊಲೀಸರಿಗೆ ನೀಡಿದ ಮಾಹಿತಿಯಂತೆ  ಮಂಜೇಶ್ವರದ ಪಾವೂರು ಸೂಪಿಗುರಿ ಎಂಬ ಸ್ಥಳದಿಂದ 1.8 ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚಲಾಗಿದೆ. ಇದರ ಮೊತ್ತ ಸುಮಾರು 27 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಮೊದಲು ಗಾಂಜಾವನ್ನು ಕುಂಜತ್ತೂರಿನ ಮನೆಯೊಂದರಲ್ಲಿ ಶೇಖರಿಸಿಡಲಾಗಿತ್ತು ಮಾತ್ರವಲ್ಲದೆ ಕುಂಜತ್ತೂರಿನಿಂದಲೇ ಸಪ್ಲೈ ಕೂಡಾ ಆಗುತಿತ್ತು.ಇದರ ಹಲವು ಏಜಂಟ್ ಗಳು ತೂಮಿನಾಡು,ಕುಂಜತೂರು ಹಾಗು ಮಂಜೇಶ್ವರ ಪ್ರದೇಶಗಳಲ್ಲಿ ವ್ಯಾಪಕ ಮಾರಾಟ ಮಾಡುತಿದ್ದರು ಮಂಜೇಶ್ವರ್ ಟೈಮ್ಸ್  ಹಲವು ಸಲ ತೂಮಿನಾಡು ಕುಂಜತ್ತೂರಿನಲ್ಲಿ ವ್ಯಾಪಕ ಗಾಂಜಾ ಮಾರಾಟ ನಡೆಯುತ್ತಿರುವುದಾಗಿ ಪೊಲೀಸ್ ಇಲಾಖೆಯನ್ನು ಕೂಡಾ ಎಚ್ಚರಿಸಿತ್ತು. ಕುಂಜತ್ತೂರಿನ ಮನೆಯೊಂದರಲ್ಲಿ ಶೇಖರಿಸಿಡಲಾಗಿದ್ದ  1.5 ಕ್ವಿಂಟಾಲ್ ಗಾಂಜಾವನ್ನು 2 ದಿವಸಕ್ಕೆ ಮೊದಲು ಅಬ್ದುಲ್ ಅಝೀಝ್ ಸ್ವಂತ ಮನೆಯಿರುವ ಪಾವೂರಿನ ಸೂಪಿಗುರಿ ಎಂಬ ಸ್ಥಳಕ್ಕೆ ಕೊಂಡೊಯ್ದಿರುವುದಾಗಿ ಆರೋಪಿ  ಪೊಲೀಸರಿಗೆ ತಿಳಿಸಿದ್ದಾನೆ. ಕಾಸರಗೋಡು ಡಿವೈಎಸ್ಪಿ ಮೋಹನ ಚಂದ್ರನ್ ರವರ ನೇತೃತ್ವದಲ್ಲಿ ಧಾಳಿ ನಡೆದಿದೆ.

No comments:

Post a Comment