Wednesday, April 17, 2013

ಚಿಪ್ಪಾರಿನಲ್ಲಿ ತಂಡಗಳ ಮಧ್ಯೆ ಘರ್ಷಣೆ:14 ಮಂದಿ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಪೈವಳಿಕೆ ಸಮೀಪದ ಚಿಪ್ಪಾರಿನಲ್ಲಿ ತಂಡಗಳ ಮಧ್ಯೆ ಘರ್ಷಣೆ ಉಂಟಾಗಿ ಮಂಜೇಶ್ವರ ಠಾಣೆಯಲ್ಲಿ 14 ಮಂದಿ ವಿರುದ್ದ ಕೇಸು ದಾಖಲಾಗಿದೆ.
ಸೋಮವಾರ ರಾತ್ರಿ ಉಂಟಾದ ಘರ್ಷಣೆಯಲ್ಲಿ ಸಿಪಿಎಂ ನೇತಾರ ಹಾಗು ಪೈವಳಿಕೆ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಅಬ್ದುಲ್ ರಜಾಕ್ ಚಿಪ್ಪಾರ್ ರವರಿಗೆ ತಂಡವೊಂದು ಹಲ್ಲೆಗೈದಿರುವುದಾಗಿ ದೂರಲಾಗಿದ್ದು ಈ ದೂರಿಗೆ ಸಂಭಂಧಿಸಿ  ಅಶ್ರಫ್ ಕಜೆ,ಮುನೀರ್ ಕುರುವೇರಿ,ಸಿದ್ದೀಖ್ ಮೌಲವಿ,ಇಬ್ರಾಹಿಂ ಖಲೀಲ್,ಹಮೀದ್ ಕಜೆ,ಅಜೀಜ್ ಕಜೆ,ಸಾದಿಕ್,ಎಂಬವರ ವಿರುದ್ದ ಕೇಸು ದಾಖಲಿಸಲಾಗಿದೆ.ಅದೇ ರೀತಿ ಚಿಪ್ಪಾರಿನ ಇಬ್ರಾಹಿಂ ಖಲೀಲ್ ಎಂಬವರು ನೀಡಿದ ದೂರಿನಂತೆ ಅಬ್ದುಲ್ ರಜಾಕ್,ಅಬ್ದುಲ್ ಕುಂಞಿ,ನೌಶಾದ್,ಜಮಾತ್,ಶಂಶೀರ್,ಅಸ್ಬೀರ್,ಸಿದ್ದೀಖ್ ಎಂಬವರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. 

No comments:

Post a Comment