Tuesday, April 16, 2013

ಬೋಸ್ಟನ್ ಸರಣಿ ಬಾಂಬ್ ಸ್ಫೋಟ: ಮೂವರ ಸಾವು; 125 ಮಂದಿಗೆ ಗಾಯ ಏಪ್ರಿಲ್ -16-2013

 ನ್ಯೂಯಾರ್ಕ್: ಅಮೆರಿಕದ ಬೋಸ್ಟನಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಕ್ಕೆ, 3 ಮಂದಿ ಮೃತಪಟ್ಟಿದ್ದು, 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಅಮೆರಿಕದ ಕಾಲಮಾನ ಸೋಮವಾರ ಮಧ್ಯಾಹ್ನ 2:50ರಲ್ಲಿ ಈ ಸರಣಿ ಸ್ಫೋಟಗಳು ನಡೆದಿವೆ.

ದಾಳಿಯ ನಂತರ ಇಡೀ ಅಮೆರಿಕ ಎಚ್ಚೆತ್ತಿದ್ದು, ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ವಿಶ್ವದ ಅತಿ ಹಳೆಯ ಮತ್ತು ಪ್ರತಿಷ್ಠಿತ ಬೋಸ್ಟನ್ ಮ್ಯಾರಥಾನ್ ನಡೆಯುತ್ತಿದ್ದಾಗ ಸ್ಪರ್ಧೆಯು ಅಂತಿಮ ಚರಣದಲ್ಲಿದ್ದಾಗ 2 ಮೂರು ಕಡೆ ಬಾಂಬ್ ಗಳು ಸ್ಫೋಟಗೊಂಡಿವೆ. ಇನ್ನೂ ಹೆಚ್ಚಿನ ರಿಮೋಟ್ ಬಾಂಬ್ ದಾಳಿಗಳು ನಡೆಯಬಹುದೆಂದು ಶಂಕಿಸಿ, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಾಂಬ್ ಸ್ಫೋಟದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಬರಾಕ್ ಒಬಾಮಾ, ಅಮೆರಿಕನ್ನರಿಗೆ ಧೈರ್ಯ ತುಂಬಿದ್ದಾರೆ. ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರು ಎಲ್ಲೇ ಅಡಗಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

  ಭಯೋತ್ಪಾದನೆ ದಾಳಿಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

No comments:

Post a Comment