Sunday, April 14, 2013

ಪೆರ್ನೆ ದುರಂತ: 10ಕ್ಕೇರಿದ ಸಾವಿನ ಸಂಖ್ಯೆ

ಪೆರ್ನೆ ದುರಂತ: 10ಕ್ಕೇರಿದ ಸಾವಿನ ಸಂಖ್ಯೆಏಪ್ರಿಲ್ -14-2013

ಮಂಗಳೂರು,: ಉಪ್ಪಿನಂಗಡಿಯ ಪೆರ್ನೆ ಬಳಿ ಸಂಭವಿಸಿದ ಅನಿಲ ಟ್ಯಾಂಕರ್ ದುರಂತದಲ್ಲಿ ಗಂಭೀರ ಗಾಯ ಗೊಂಡು ನಗರದ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಪೆರ್ನೆ ನಿವಾಸಿ ಇಂದಿರಾ ರೈ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ದುರಂತದಲ್ಲಿ ಮೃತ ಪಟ್ಟವರ ಸಂಖ್ಯೆ 10ಕ್ಕೇರಿದೆ.
ಮಂಗಳವಾರ ಸಂಭವಿಸಿದ ದುರಂತದಲ್ಲಿ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾ ಗಿದ್ದ ಇಂದಿರಾ ರೈ ಸುಮಾರು ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾವ 2 ಗಂಟೆಯ ಸುಮಾರಿಗೆ ಕೊನೆ ಯುಸಿರೆಳೆದಿದ್ದಾರೆ. ಪೆರ್ನೆ ನಿವಾಸಿ ಸುಂದರ ರೈ ಎಂಬವರ ಪತ್ನಿಯಾಗಿದ್ದ ಇಂದಿರಾ ರೈ ಮಂಗಳವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಘಟನೆಯಲ್ಲಿ ಸುಂದರ ರೈಯವರ ತಮ್ಮನ ಪತ್ನಿ ಶೋಭಾ ರೈ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಂದಿರಾ ರೈ ಜೊತೆ ಮಾತ ನಾಡಲು ಅವರ ಮನೆಗೆ ಬಂದಿದ್ದ ಅಂಗನವಾಡಿ ಶಿಕ್ಷಕಿ ವಿಮಲಾ ಗಂಭೀರ ಗಾಯಗಳೊಂದಿಗೆ ಜೀವನ್ಮರಣದ ನಡುವೆ ಸುಮಾರು 3 ದಿನಗಳ ಕಾಲ ಹೋರಾಟ ನಡೆಸಿ ಶುಕ್ರವಾರ ಬೆಳಗ್ಗೆ ಸಾವಿಗೀಡಾಗಿದ್ದರು.
ದುರಂತದಲ್ಲಿ ಗಂಭೀರ ಗಾಯಗೊಂಡಿರುವ ಇನ್ನೋರ್ವೆ ಪೆರ್ನೆ ನಿವಾಸಿ ಹಾಜಿಮ್ಮ ಶೇ.50ರಷ್ಟು ಸುಟ್ಟ ಗಾಯಗಳೊಂದಿಗೆ ಪ್ರಸ್ತುತ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

No comments:

Post a Comment