Saturday, March 9, 2013

ಗಡಿನಾಡ ಸಮೂಸ ಪ್ರಿಯರಿಗೊಂದು ಕಹಿ ಸುದ್ದಿ



ಮಂಜೇಶ್ವರ:ನಮ್ಮ ಗಡಿನಾಡ ಪ್ರದೇಶದಲ್ಲಿ ಸಮೂಸ ಪ್ರಿಯರೇ ಅಧಿಕ ಮಂದಿ ಇದ್ದಾರೆ. ಸಾಧಾರಣದ ಬೇಕರಿಗಳಿಂದ ಹಿಡಿದು ದೊಡ್ಡ ದೊಡ್ಡ ಬೇಕರಿಗಳಲ್ಲೂ ಸಮೂಸ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ  ಸ್ಥಾನವನ್ನೇ ಗಿಟ್ಟಿಸಿಕೊಂಡಿದೆ.ಏನಿಲ್ಲದಿದ್ದರೂ ಬೇಕರಿಗಳಿಗೆ ಹತ್ತಿದವರು ಮಕ್ಕಳಿಂದ  ಹಿಡಿದು ಮುದುಕರವರೇಗೆ ಕೂಡಾ ಒಂದು ಸಮೂಸವಾದರೂ ತಿನ್ನದೇ ಹೊರಬರುವವರು ಬಾರೀ ಕಡಿಮೆ.ಆದರೆ ನಮ್ಮ ಗಡಿಪ್ರದೇಶದಲ್ಲಿ ಉತ್ಪಾಧನೆಯಾಗುತ್ತಿರುವ ಸಮೂಸ ದ ಮೇಲೆ ಒಂದು ಲೇಬಲ್ ಕೂಡಾ ಅಂಟಿಸಬೇಕಾದದ್ದಿದೆ "ಸಮೂಸ ಸೇವಣೆ ಆರೋಗ್ಯಕ್ಕೆ ಹಾನಿಕರ"ವೆಂದು ಯಾಕಂದರೆ ಬಹುತೇಕ ಜನರೀಗೆ ಗೊತ್ತಿಲ್ಲದ ರೀತಿಯಲ್ಲಿ ಇದರಲ್ಲಿ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಸೇರಿಸಿ ಸಮೂಸ ವನ್ನು ಮಾರಾಟಮಾಡಲಾಗುತ್ತದೆಂಬ ಮಾಹಿತಿ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇಲ್ಲಿ ತಯಾರಿಸಲಾಗುತ್ತಿರುವ ಸಮೂಸಗಳಿಗೆ ಮದುವೆ ಸಭಾಂಗಣಗಳಲ್ಲಿ ಸಮಾರಂಭಕ್ಕೆ ಕೋಳಿ ಫ್ರೈ ಮಾಡಲು ಉಪಯೋಗಿಸಿ ಉಪೇಕ್ಷಿಸಿದ ಎಣ್ಣೆಗಳನ್ನು ಕೊಂಡು ಹೋಗಿ ಸಮೂಸ ಫ್ರೈ ಮಾಡಲಾಗುತ್ತದೆ.ಇದು ಮಾತ್ರವಲ್ಲ ಅತೀ ಕೊಳೆತ ಕೆಳ ದರ್ಜೆಯಲ್ಲಿರುವ ಕಡಿಮೆ ಬೆಲೆಯಲ್ಲಿ ಸಿಕ್ಕುವ ಸಸ್ಯಹಾರಿ ಪದಾರ್ಥಗಳನ್ನು ಉಪಯೋಗಿಸಿ ಮಾಲಿನ್ಯ ತುಂಬಿರುವ ಸ್ಥಳಗಳಲ್ಲಿ ಇಂತಹ  ಸಮೂಸಗಳನ್ನು ಮಾಡಿ ಬೇಕರಿಗಳಿಗೆ ವಿತರಿಸಲಾಗುತ್ತಿದೆ ಇದನ್ನು ತಿಂದ ಮಕ್ಕಳಲ್ಲಿ ಅತಿಯಾದ ಕೆಮ್ಮು ಕಂಡುಬರುತ್ತಿದೆ ಮಾತ್ರವಲ್ಲ ವಿಷಭರಿತವಾದ ಪದಾರ್ಥಗಳನ್ನು ತುಂಬಿಸಿ ಉಪೇಕ್ಷಿಸಿದ ಎಣ್ಣೆಯನ್ನು ಉಪಯೋಗಿಸಿ ತಯಾರಿಸಲ್ಪಡುತ್ತಿರುವ ಈ ಸಮೂಸದ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಮೌನ ಸಮ್ಮತ ನೀಡಿರುವುದು ನಕಲಿ ಸಮೂಸ ವ್ಯಾಪಾರಿಗಳ ಉತ್ತುಂಗಕ್ಕೆ ಕಾರಣವಾಗಿದೆ.ಗಡಿನಾಡ ಪ್ರದೇಶದಲ್ಲಿ ಲಭ್ಯವಾಗುವ ಸಮೂಸ ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿದೆ.ಗಡಿನಾಡ ಸಮೂಸವನ್ನು ತ್ಯಜಿಸಿದರೆ ಹಲವು ರೀತಿಯ ಆರೋಗ್ಯ ಲಾಭ ಒದಗುವುದರಿಂದ ನಾವು ವೈದ್ಯರಿಂದ ದೂರ ಇರಲೂ ಬಹುದು. ಆರೋಗ್ಯಭಾಗ್ಯ ಸಿಕ್ಕಿದಾಗ ಹಲವು ಭಾಗ್ಯಗಳು ಸಿಕ್ಕಂತೆಯೇ. ನಕಲಿ ಪದಾರ್ಥಗಳನ್ನು ಉಪಯೋಗಿಸಿ ಸಮೂಸ ತಯಾರಿಸುತ್ತಿರುವವರ ವಿರುದ್ದ ಸಂಭಂಧ ಪಟ್ಟ ಇಲಾಖೆಯವರು ಗಮನ ಹರಿಸಲು ಸ್ಥಳೀಯರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.

No comments:

Post a Comment