Monday, March 4, 2013

ಬ್ರಹ್ಮ ರಾಕ್ಷಸನ ಉಪದ್ರ:ವಾಸ್ತವ್ಯ ಬದಲಾಯಿಸಿದ ಆರು ಕುಟುಂಬ
ಮಂಜೇಶ್ವರ:ಇದೊಂದು ಕಟ್ಟುಕತೆ ಅಲ್ಲ ಆದರೆ ವಾಸ್ತವ ಸಂಗತಿ ಇನ್ನೂ ನಿಗೂಡವಾಗಿಯೇ ಉಳಿದಿದೆ ವಿಚಿತ್ರ ಬೆಳವಣಿಗೆ ನಡೆದಿರುವುದು ಬೇರೆ ಎಲ್ಲೂ ಅಲ್ಲ ಮಂಜೇಶ್ವರಕ್ಕೆ ಸಮೀಪವಿರುವ ಕುಂಬಳೆ ಕೃಷ್ಣಾ ನಗರದ ಶೇಡಿಕಾವಿನಲ್ಲಿ ಪ್ರದೇಶದಲ್ಲಿ ನಾಲ್ಕು ಎಕ್ರೆ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದ 6 ಕುಟುಂಬಗಳು ಬ್ರಹ್ಮ ರಕ್ಕಸನ ಬಾಧೆಯಿಂದ ವಾಸ ಸ್ಥಳವನ್ನು ಬದಲಾಯಿಸಿಕೊಂಡಿದ್ದಾರೆ.ಜ್ಯೋತಿಷ್ಯರೊಬ್ಬರ ಹೇಳಿಕೆ ಪ್ರಕಾರ ಸ್ಥಳಕ್ಕೆ ಯಾರೋ ಬ್ರಹ್ಮ ರಕ್ಕಸನನ್ನು ಆಹ್ವಾನಿಸಿ ಅದನ್ನು ಇದೇ ಪ್ರದೇಶದ ತೋಟವೊಂದರಲ್ಲಿ ಹರಿಯ ಬಿಟ್ಟ ಕಾರಣ ಇದೀಗ ಇಲ್ಲಿ ಹಲವು ಅನಾಹುತಗಳಿಗೆ ಕಾರಣವಾಗಿದೆಂದು ಹೇಳಲಾಗುತ್ತಿದೆ.ಬ್ರಹ್ಮ ರಕ್ಕಸನ ಬಾಧೆಯಿಂದ ಮನೆಗಳನ್ನು ತ್ಯಜಿಸಿದ ಆರು ಕುಟುಂಬಗಳ ಪೈಕಿ ಒಂದು ಕುಟುಂಬದ ಮೂವರು ಇತ್ತೀಚೆಗೆ ಕೇವಲ ಅಲ್ಪ ಅವಧಿಯಲ್ಲಿ ಮರಣವನ್ನು ಹೊಂದಿರುತ್ತಾರೆಂದು ಕೂಡಾ ಕೇಳಿ ಬಂದಿದೆ. ಮರಣವನ್ನು ಕಂಡ ಕುಟುಂಬವು ಮೊದಲು ಸ್ಥಳದಿಂದ ಬೇರೆಡೆಗೆ ಹೋದರು ಆದರೆ ಇದಾದ ನಂತ್ರ ಬಾಕಿ ಉಳಿದ ಮನೆಯ ಕುಟುಂಬದವರೀಗೂ ವಿಚಿತ್ರ ರೀತಿಯ ಅನುಭವಗಳು ಉಂಟಾಗತೊಡಗಿತ್ತು.ಮದ್ಯರಾತ್ರಿಗಳಲ್ಲಿ ಯಾರೋ ಬಾಗಿಲು ತಟ್ಟಿದಂತಾಗುವುದು,ಹಾಗು ಹಲವು ರೀತಿಯ ವಿಚಿತ್ರವಾದ ದೃಶ್ಯಗಳು ಗೋಚರಿಸುವುದು,ಮನೆಯವರ ಹೆಸರು ಹೇಳಿ ಕರೆಯುವುದು,ಮನೆಯ ಬೆಲ್ ರಿಂಗ್ ಆಗುತ್ತಿರುವುದು ಇತ್ಯಾದಿ ಅನುಭವಗಳು ಆಗುತಿದ್ದು ಇದರಿಂದ ಹೆದರಿದ ಬಾಕಿ ಕುಟುಂಬ ಕೂಡಾ ಕ್ರಮೆಣ ಒಬ್ಬೊಬ್ಬರಾಗಿ ಅಲ್ಲಿಂದ ಜಾಗ ಖಾಲಿ ಮಾಡಿದರೆಂದು ಹೇಳಲಾಗುತ್ತಿದೆ. ಪ್ರದೇಶದಲ್ಲಿ ಈಗ ಹಲವು ಮನೆಗಳು ಕಾಣುತ್ತಿವೆ ಇವರಲ್ಲಿ ವಿಚಾರಿಸಿದಾಗ ಅದೆಲ್ಲಾ ಒಂದು ಮೂಢ ನಂಬಿಕೆ ನಮಗೆ ಅಂತಹ ವಿಷಯದಲ್ಲಿ ನಂಬಿಕೆಯೂ ಇಲ್ಲ ನಮಗೆ ರೀತಿಯ ಯಾವುದೇ ಅನುಭವಗಳಾಗಲೀ ಸಮಸ್ಯೆಗಳಾಗಲೀ ಉದ್ಭವಿಸಿಲ್ಲವೆಂದು ಹೇಳುತ್ತಾರೆ.ಆದರೆ ಈಗಲೂ ಇಲ್ಲಿ ಕೆಲವರು ಇದನ್ನೊಂದು ಮೂಢ ನಂಬಿಕೆ ಎಂದು ವಿಶ್ಲೇಷಿಸಿದರೆ ಇದು ಸತ್ಯವೆಂದೂ ಹೇಳುವವರೂ ಕೂಡಾ ಇದ್ದಾರೆ.ಆದರೆ ಇಲ್ಲಿಂದ ಬ್ರಹ್ಮ ರಕ್ಕಸ ಬಾಧೆಯಿಂದ ತ್ಯಜಿಸಿ ಹೋದರೆಂದು ಹೇಳಲಾಗುತ್ತಿರುವ 6 ಕುಟುಂಬದ ಮನೆಯವರು ಇಲ್ಲಿಂದ ತ್ಯಜಿಸಿ ಹೋದ ಹಿಂದಿನ ನಿಜವಾದ ಚಿತ್ರಣ ಇನ್ನೂ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ.ಇದೀಗ ಇಲ್ಲಿಂದ ತ್ಯಜಿಸಿ ಹೋದ  6 ಕುಟುಂಬದ ಮನೆಗಳು ಇದ್ದ ಪರಿಸರ ಪೊದೆ ಕಾಡುಗಳಿಂದ ಆವೃತವಾಗಿದ್ದು ನಿಜವಾಗಿಯೂ ಒಂದು ಬ್ರಹ್ಮರಕ್ಕಸಿಯ ತಾಣವಾದ ಹಾಗೆ ಅನಿಸುತ್ತದೆಂಬುದಾಗಿ ಸ್ಥಳೀಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿರುತ್ತಾರೆ.

No comments:

Post a Comment