Monday, March 11, 2013

ಕುಂಜತ್ತೂರು ವಾಹನ ಅಫಘಾತ:ಮೃತರ ಅಂತ್ಯ ಸಂಸ್ಕಾರ:ಬಾಲಕನ ಸ್ಥಿತಿ ಚಿಂತಾಜನಕನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರಾಷ್ಟ್ರೀಯ ಹೆದ್ದಾರಿಯ ಕುಂಜತ್ತೂರು ಜಂಕ್ಷನ್ ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಕುಂಜತ್ತೂರನ್ನೇ ಬೆಚ್ಚಿ ಬೀಳಿಸಿದ  ಭೀಕರ ವಾಹನ ಅಪಘಾತದಲ್ಲಿ ಮೃತಪಟ್ಟ ತಂದೆ ಪುತ್ರ ಸಹಿತ ಮೂವರ ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಮದ್ಯಾಹ್ನ ಮನೆಗೆ ತರಲಾಯಿತು.ಮೃತರ ಮನೆಗೆ ಲೀಗ್ ನೇತಾರರಾದ ಕೆ.ಕೆ.ಅಬ್ದುಲ್ಲಾ ಕುಂಞಿ,ಅಶ್ರಫ್ ಪೆರ್ಲ, ಯೂತ್ ಲೀಗ್ ನೇತಾರ ಮುಸ್ತಫ ಉದ್ಯಾವರ,ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಮುಶ್ರತ್ ಜಹಾನ್,ಉಪಾಧ್ಯಕ್ಷ ಮುಕ್ತಾರ್,ಬ್ಲಾಕ್ ಪಂ.ಅಧಕ್ಷೆ ಮಮ್ತಾಜ್ ಸಮೀರ,ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ,ಮಂಜೇಶ್ವರ ಮಾಜಿ ಶಾಸಕ ಸಿ.ಎಚ್.ಕುಂಞಂಬು,ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಜಯಾನಂದನ್,ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷ ಸಿ.ಆಹ್ಮದ್ ಕುಂಞಿ,ಮೊದಲಾದವರು ಬೇಟಿ ನೀಡಿದರು. ಮೃತ ದೇಹವನ್ನು ನೋಡಲು ಸಹಸ್ರಾರು ಜನರು ತಲುಪಿದ್ದರು.ಮೂವರ ಮೃತ ದೇಹವನ್ನು ಕೂಡಾ ಉದ್ಯಾವರ ಸಾವಿರ ಜಮಾಹತ್ ಅಂಗಣದಲ್ಲಿ ದಫನ ಮಾಡಲಾಯಿತು.
ಬಾಲಕನ ಸ್ಥಿತಿ ಚಿಂತಾಜನಕ:ವಾಹನ ಅಫಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೃತ ಅಬ್ಬುಂಞಿ ಯಾನೆ ಅಬೂಬಕ್ಕರ್ ರವರ ಇನ್ನೊಬ್ಬ ಮಗ ಸಾಬಿತ್(8) ಸ್ಥಿತಿ ಚಿಂತಾಜನಕವಾಗಿದ್ದು ಈತನನ್ನು  ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಎಮ್ಮರ್ ಜೆನ್ಸಿಯಲ್ಲಿ ಇರಿಸಲಾಗಿದೆ. ಮಗುವಿನ ಚಿಕಿತ್ಸೆಗಾಗಿ ಹಾಗು ಕಡು ಬಡತನದಲ್ಲಿರುವ ಮೃತಪಟ್ಟ ಅಬ್ಬುಂಞಿ ಅಬೂಬಕ್ಕರ್ ಕುಟುಂಬಕ್ಕೆ ನೆರವಾಗಲು ಊರಿನವರು ಹಣವನ್ನು ಸಂಗ್ರಹಮಾಡುತಿದ್ದಾರೆ.

No comments:

Post a Comment