Saturday, March 2, 2013

ಕಟ್ಟಡ ನಿರ್ಮಾಣಕ್ಕೆ ಬಂದ ವ್ಯಕ್ತಿ ನಿದ್ರೆಯಲ್ಲಿ ಮೃತ್ಯುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಆಗಮಿಸಿದ ವ್ಯಕ್ತಿ ನಿದ್ರೆಯಲ್ಲಿ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ನ್ಯೂ ಸ್ಟಾರ್ ಮೈದಾನದ ಬಳಿ ನಡೆದಿದೆ.
 ನಿದ್ದೆಯಲ್ಲಿ ಮೃತಪಟ್ಟ ವ್ಯಕ್ತಿ ಬಿಹಾರ ನಿವಾಸಿ ಇಂದರ್ (40) ಎಂಬವನಾಗಿದ್ದಾನೆ.ಕುಂಜತ್ತೂರು ನ್ಯೂ ಸ್ಟಾರ್ ಮೈದಾನದ ಬಳಿ ಹಸನ್ ಹಾಸಿಫ್ ಎಂಬವರ ಮನೆ ನಿರ್ಮಾಣ ಕೆಲಸಕ್ಕೆಂದು ಬಂದ ಇಂದರ್ ಎಂದಿನಂತೆ ರಾತ್ರಿ ಊಟಮುಗಿಸಿ ಇದೇ ಮನೆಯ ಮೇಲಂತಸ್ತಿನಲ್ಲಿ ಮಲಗಿದ್ದನು ಜತೆಯಾಗಿ 2 ರಾಜಸ್ಥಾನಿ ನಿವಾಸಿಗಳಾದ ಆಶೋಕ್ ಹಾಗು ಪೂರನ್ ರವರ ಜತೆಯಾಗಿ ಮಲಗಿದ್ದರು.ಬೆಳಿಗ್ಗೆ ಜತೆಯಾಗಿ ಮಲಗಿದ ಇಬ್ಬರು ಎದ್ದು ಇಂದರ್ ನನ್ನು ಎಬ್ಬಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲವಾದ ಕಾರಣ ಇಂದರ್ ಮೃತಪಟ್ಟ ಬಗ್ಗೆ ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ(

No comments:

Post a Comment