Wednesday, March 27, 2013

ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣ;ಕುರಿಯನ್‌ಗೆ ನ್ಯಾಯಾಲಯದ ನೋಟಿಸ್ಬುಧವಾರ - ಮಾರ್ಚ್ -27-2013

ಇಡುಕ್ಕಿ(ಕೇರಳ: ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್ ಮರುವಿಮರ್ಶೆ ಅರ್ಜಿಯೊಂದರ ಸಂಬಂಧ ಕೇರಳದ ನ್ಯಾಯಾಲಯವೊಂದು ಇಂದು ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್‌ರಿಗೆ ನೋಟಿಸ್ ಕಳುಹಿಸುವಂತೆ ಆದೇಶ ನೀಡಿದೆ.
ಸಂತ್ರಸ್ತೆಯ ಮನವಿಯನನು ಅಂಗೀಕರಿಸಿದ ತೊಡುಪುರ ಸತ್ರ ನ್ಯಾಯಾಧೀಶ ಅಬ್ರಹಾಂ ಮಾಥ್ಯೂ, ಪ್ರಕರಣದ ಪ್ರಧಾನ ಆರೋಪಿ ಧರ್ಮರಾಜನ್, ಇತರ ಆರೋಪಿಗಳಾದ ಜಮಾಲ್ ಹಾಗೂ ಉನ್ನಿಕೃಷ್ಣನ್ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್‌ಗಳನ್ನು ನೀಡುವಂತೆ ಸೂಚಿಸಿದರು.
ಅರ್ಜಿಯ ವಿಚಾರಣೆಯನ್ನು ಮೇ 29ಕ್ಕೆ ನಿಗದಿಗೊಳಿಸಲಾಗಿದೆ.
ಅಂದು, ಪ್ರಕೃತ ತಿರುವನಂತಪುರದ ಪೂಜಾಪುರ ಕಾರಾಗೃಹದಲ್ಲಿರುವ ಧರ್ಮರಾಜನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾ. ಅಬ್ರಹಾಂ ಆದೇಶಿಸಿದರು.

ಪ್ರಕರಣದಲ್ಲಿ ಕುರಿಯನ್‌ರ ಪಾಲ್ಗೊಂಡಿರುವಿಕೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ಕೋರಿ ಸಲ್ಲಿಸಿದ್ದ ದೂರನ್ನು ಪೀರ್ಮೇಡು ಪ್ರಥಮ ದರ್ಜೆಯ ನ್ಯಾಯಾಂಗ ದಂಡಾಧಿಕಾರಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಸಂತ್ರಸ್ತೆ ಸತ್ರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು.
1996ರ ಫೆ.19ರಂದು ತಾನು ಕುರಿಯನ್‌ರನ್ನು ಗೆಸ್ಟ್ ಹೌಸ್ ಒಂದಕ್ಕೆ ಕೊಂಡೊಯ್ದಿದ್ದು, ಅಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ನಡೆದಿತ್ತೆಂದು, ಜಾಮೀನು ಉಲ್ಲಂಘಿಸಿದ್ದ ಧರ್ಮರಾಜನ್ ತನ್ನ ಬಂಧನಕ್ಕೆ ಮೊದಲು ಟಿವಿ ವಾಹಿನಿಯೊಂದರಲ್ಲಿ ‘ಬಹಿರಂಗಪಡಿಸಿದುದನ್ನು’ ಸಂತ್ರಸ್ತೆಯ ಪರ ವಕೀಲರು ನ್ಯಾಯಾಲಯದ ಮುಂದಿರಿಸಿದರು.
ಧರ್ಮರಾಜನ್‌ನ ಈ ಹೇಳಿಕೆಯ ಆಧಾರದಲ್ಲಿ ಸಂತ್ರಸ್ತೆ ಕಳೆದ ಮಾ.1ರಂದು ಪೀರ್ಮೇಡು ನ್ಯಾಯಾಲಯಕ್ಕೆ ದೂರೊಂದನ್ನು ಸಲ್ಲಿಸಿದ್ದಳು.
ಕುರಿಯನ್‌ರನ್ನು ಪ್ರಕರಣದ ಓರ್ವ ಆರೋಪಿಯನ್ನಾಗಿ ಮಾಡುವಂತೆ ಕೋರಿ ಆಕೆ ಕಳೆದ ತಿಂಗಳು ಕೊಟ್ಟಾಯಂ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರೊಂದನ್ನು ದಾಖಲಿಸಿದ್ದಳು. ಆದರೆ, ಆ ದೂರನ್ನು ಪೊಲೀಸರು ನೋಂದಣಿ ಮಾಡಲಿಲ್ಲ.
1996ರ ಜನವರಿಯಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿಯ ಬಾಲಕಿಯೊಬ್ಬಳನ್ನು ಅಪಹರಿಸಿ, ವಿವಿಧ ಸ್ಥಳಗಳಿಗೆ ಸಾಗಿಸಿ, ಸುಮಾರು 40ಕ್ಕೂ ಹೆಚ್ಚು ಮಂದಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಪ್ರಕರಣ ಇದಾಗಿದೆ. ಸಂತ್ರಸ್ತೆಯು ಅತ್ಯಾಚಾರಿಗಳಲ್ಲಿ ಕುರಿಯನ್‌ರ ಹೆಸರನ್ನು ಹೇಳಿದ್ದರೂ, ಅವರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರಲಿಲ್ಲ
ಕೃಪೆ ವಾ.ಭಾರತಿ 

No comments:

Post a Comment