Tuesday, March 5, 2013

ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಅಯಸ್ಕಾಂತಮುಂಬೈ: ಬರೋಬ್ಬರಿ 50 ಸಾವಿರ ಟನ್ ಭಾರದ, ವಿಶ್ವದ ಅತ್ಯಂತ ಬೃಹತ್ ಅಯಸ್ಕಾಂತವೊಂದನ್ನು ಭಾರತದ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ(ಬಿಎಎಆರ್‌ಸಿ) ವಿನ್ಯಾಸಗೊಳಿಸುತ್ತಿದೆ.
ತಮಿಳುನಾಡಿನ ಮಧುರೈ ಸಮೀಪದ ಬೆಟ್ಟವೊಂದರ ಬುಡದಿಂದ 4300 ಅಡಿ ಆಳದಲ್ಲಿರುವ ಗುಹೆಯೊಂದರಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ನ್ಯೂಟ್ರಿನೊ ವೀಕ್ಷಣಾಲಯ’ ಎಂಬ ಭೌತ ಕಣ ಸಂಶೋಧನಾ ಕೇಂದ್ರದಲ್ಲಿ ಈ ದೈತ್ಯ ಗಾತ್ರದ ಅಯಸ್ಕಾಂತವನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ‘ದೇವಕಣ’ದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಜಿನೇವಾದ ಸಿಇಆರ್‌ಎನ್ ಕೇಂದ್ರದಲ್ಲಿರುವ ಅಯಸ್ಕಾಂತವು ಜಗತ್ತಿನಲ್ಲೇ ಅತಿ ಬೃಹತ್ ಗಾತ್ರದ ಆಯಸ್ಕಾಂತವೆನಿಸಿದ್ದು, ಅದು 12,500 ಸಾವಿರ ಟನ್‌ಗಳಷ್ಟು ಭಾರವಿದೆ. ಆದರೆ ನ್ಯೂಟ್ರಿನೋ ವೀಕ್ಷಣಾಲಯದಲ್ಲಿ ಸ್ಥಾಪನೆಯಾಗಲಿರುವ ಅಯಸ್ಕಾಂತವು ಇದಕ್ಕಿಂತ ಹಲವಾರು ಪಟ್ಟು ದೊಡ್ಡದಾಗಿದ್ದು, ಅದರ ಭಾರವು ಸುಮಾರು 50 ಸಾವಿರ ಟನ್‌ಗಳಷ್ಟಿರುವುದು ಎಂದು ಬಿಎಎಆರ್‌ಸಿಯ ಅಣು ಭೌತಶಾಸ್ತ್ರ ಸಂಶೋಧನಾ ವಿಭಾಗದ ವಿವೇಕ್ ದಾತಾರ್ ತಿಳಿಸಿದ್ದಾರೆ.
ಈ ದೈತ್ಯ ಗಾತ್ರದ ಅಯಸ್ಕಾಂತದ ನಿರ್ಮಾಣಕ್ಕೆ ಅಣುಶಕ್ತಿ ಆಯೋಗದ ಹಸಿರು ನಿಶಾನೆ ಈಗಾಗಲೇ ಲಭಿಸಿದೆ.

No comments:

Post a Comment