Tuesday, March 26, 2013

ಸಂಜಯ್‌ದತ್ತ್‌ಗೆ ಕ್ಷಮಾದಾನ ಬೇಡ: ಶಿವಸೇನೆ ಮಾರ್ಚ್ -26-2013

ಮುಂಬೈ, ಮಾ.25: ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಸುಪ್ರೀಂ ಕೋರ್ಟ್‌ನಿಂದ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್ ನಟ ಸಂಜಯ್‌ದತ್ತ್‌ಗೆ ಕ್ಷಮಾದಾನ ನೀಡುವುದನ್ನು ಶಿವಸೇನೆ ಬಲವಾಗಿ ವಿರೋಧಿಸಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆಯೆಂದು ಅದು ಅಭಿಪ್ರಾಯಿಸಿದೆ.
ಮಹಾರಾಷ್ಟ್ರ ವಿಧಾನಪರಿಷತ್‌ನ ಅಧಿವೇಶನದಲ್ಲಿ ರಾಜ್ಯದ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಶಿವಸೇನೆಯ ಶಾಸಕ ನೀಲಂ ಗೋರೆ ವಿಷಯವನ್ನು ಪ್ರಸ್ತಾಪಿಸುತ್ತಾ ‘‘ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮರುಚಿಂತಿಸುವ ಅಗತ್ಯವಿಲ್ಲ. ದತ್ತ್ ಕ್ಷಮಾದಾನ ನೀಡಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ’’ ಎಂದು ಹೇಳಿದ್ದಾರೆ.
 
ವಿವಿದ ರಾಜಕೀಯ ಪಕ್ಷಗಳ ನಾಯಕರು ಸಂಜಯ್‌ದತ್ತ್‌ಗೆ ಕ್ಷಮಾದಾನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ದತ್ತ್‌ಗೆ ಕ್ಷಮೆಯನ್ನು ತೋರಿದಲ್ಲಿ ಅದು, ಈ ಪ್ರಕರಣದ ದೋಷಿಗಳಿಗೆ ರಾಜಕೀಯ ರಕ್ಷಣೆಯನ್ನು ಒದಗಿಸಿ ದಂತಾಗುತ್ತದೆಯೆಂದು ಆಕೆ ಹೇಳಿದ್ದಾರೆ.
ಸಂಜಯ್‌ದತ್ತ್‌ಗೆ ಕ್ಷಮಾದಾನ ನೀಡಬೇಕೆಂದು ರಾಜ್ಯಪಾಲರನ್ನು ಕೋರುವಂತೆ ಚಿತ್ರೋದ್ಯಮದ ವಿವಿಧ ಗಣ್ಯರು ಹಾಗೂ ರಾಜಕಾರಣಿಗಳು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಮಾರ್ಚ್ 19ರಂದು ನೀಡಿದ ತೀರ್ಪಿನಲ್ಲಿ ಎ.ಕೆ. 56 ರೈಫಲ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪದಲ್ಲಿ ಸಂಜಯ್‌ದತ್ತ್‌ಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತ್ತು.
ಕೃಪೆ:ವಾ.ಭಾರತಿ 

No comments:

Post a Comment