Friday, March 8, 2013

ಉದ್ಯಾವರ ಮಸೀದಿಯಲ್ಲಿ ಗೊಂದಲ ಸೃಷ್ಟಿಸಿದ ಅನ್ಯಕೋಮಿನ ಕುಡುಕನ ಅವಾಂತರ






ಕುಂಜತ್ತೂರು:ಅನ್ಯಕೋಮಿನ ಯುವಕನೊಬ್ಬ ಪಾನಮತ್ತನಾಗಿ ಮಸೀದಿಯೊಳಗೆ ನುಗ್ಗಿ ಹೆಸರನ್ನು ಬದಲಾಯಿಸಿ ಬಿಕ್ಷಾಟನೆಯಲ್ಲಿ ನಿರತವಾಗಿದ್ದಾಗ ಶಂಶಯಗೊಂಡ ಊರಿನವರು ಹಿಡಿದು ಗೂಸಾ ನೀಡಿ  ಮಸೀದಿಯಿಂದ ಹೊರದಬ್ಬಿದ ಘಟನೆ ಉದ್ಯಾವರದಲ್ಲಿ ನಡೆದಿದೆ.
ಇಂದು  ಮದ್ಯಾಹ್ನ ಜುಮಾ ನಮಜ್ ಸಮಯದಲ್ಲಿ ಪಾನಮತ್ತನಾಗಿ ಬಂದ ಅನ್ಯಕೋಮಿನ ಯುವಕನೊಬ್ಬ ಉದ್ಯಾವರ ಜಮಾಹತ್ ಮಸೀದಿಯೊಳಗೆ ನುಗ್ಗಿ ಅಲ್ಲಿದ್ದ ಟೊಪ್ಪಿಯನ್ನು ತಲೆಗೆ ಹಾಕಿ ಎಲ್ಲರ ಎದುರಿನಲ್ಲಿ ಮುಸ್ಲಿಮನಂತೆ ನಟಿಸಿ ನಮಾಜ್ ನಲ್ಲೂ ಪಾಲ್ಗೊಂಡು ನಮಾಜ್ ಮುಗಿದ ಕೂಡಲೇ ಮಸೀದಿಯ ಒಳಗೆ ಬಿಕ್ಷುಕರು ಬಿಕ್ಷಾಟನೆಗೆ ನಿಂತ ಸಾಲಲ್ಲಿ ತಾನು ನಿಂತು ಬಿಕ್ಷಾಟನೆಯಲ್ಲಿ ನಿರತವಾಗಿರುವಾಗ ಇವನ ಮಾತಿನ ಶೈಲಿಯಲ್ಲಿ ಶಂಶಯ ಗೊಂಡ ಕೆಲವರು ಈತನನ್ನು ವಿಚಾರಿಸಿದಾಗ ಮದ್ಯ ಸೇವಿಸಿ ಮಸೀದಿಗೆ ಬಂದಿರುವ ವಿಚಾರ ಬಹಿರಂಗಗೊಂಡಿತು ನಂತ್ರ ಈತನನ್ನು ಸರಿಯಾಗಿ ವಿಚಾರಣೆಗೊಳಪಡಿಸಿದಾಗ ಮದ್ಯ ಸೇವಿಸಿ ಬಂದಿರುವುದನ್ನು ಒಪ್ಪಿಕೊಂಡು ಬೆಳ್ತಂಗಡಿ ತಾಲೂಕಿನ ಗರಡಾಡಿ ನಿವಾಸಿ ಸಂಜೀವ ಪೂಜಾರಿ ಮಗ ವಸಂತ ಪೂಜಾರಿ ಎಂದು ಊರವರಿಗೆ ತನ್ನನ್ನು ತಾನು ಪರಿಚಯಮಾಡಿಕೊಟ್ಟ ಈತ 9 ತಿಂಗಳ ಹಿಂದೆ ಕುಟುಂಬವನ್ನು ತ್ಯಜಿಸಿ ಇಸ್ಲಾಮ್ ಮತವನ್ನು ಸ್ವೀಕರಿಸಿ ಮುಸ್ಲಿಮನಾಗಿದ್ದೇನೆಂದು ಉರವರರೀಗೆ ಮಾಹಿತಿ ನೀಡಿದ್ದಾನೆ. ಕಂಠಪೂರ್ತಿ ಕುಡಿದು ಮಸೀದಿಯೊಳಗೆ ಗೊಂದಲ ಸೃಷ್ಟಿಸಿದ ಈತನನ್ನು ಊರಿನವರು ಸೇರಿ ಗೂಸಾ ನೀಡಿ ಕೂಡಲೇ ಮಸೀದಿಯ ಹೊರಗಡೆ ಕಳುಹಿಸಿದರು

No comments:

Post a Comment