Tuesday, March 26, 2013

ಹಾರುವ ಮೊದಲು ಒಂದು ಗಂಟೆ ಬೊಬ್ಬೆ ಹೊಡೆದಿದ್ದೆ; ಆಗ್ರಾ ಹೊಟೇಲ್‌ನಿಂದ ಕೆಳಗೆ ಹಾರಿದ ಬ್ರಿಟಿಶ್ ಮಹಿಳೆ ಮಾರ್ಚ್ -26-2013

ಲಂಡನ್: ಕೆಳಗೆ ಹಾರುವ ಮೊದಲು ತಾನು ಒಂದು ಗಂಟೆ ಕಾಲ ಬೊಬ್ಬೆ ಹೊಡೆದಿದ್ದೆ ಎಂಬುದಾಗಿ ಲೈಂಗಿಕ ಹಲ್ಲೆ ನಡೆಯುವ ಭೀತಿಯಿಂದ ಆಗ್ರಾದ ಹೊಟೇಲೊಂದರ ಮೊದಲ ಮಹಡಿಯಿಂದ ಕೆಳಗೆ ಹಾರಿದ್ದ ಬ್ರಿಟಿಶ್ ಮಹಿಳೆ ಹೇಳಿದ್ದಾರೆ.
ತನ್ನ ಹೊಟೇಲ್ ಕೋಣೆಗೆ ಇಬ್ಬರು ಪುರುಷರು ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಕೋಣೆಯ ಬಾಗಿಲಿಗೆ ಪೀಠೋಪಕರಣಗಳನ್ನು ಅಡ್ಡವಿಟ್ಟಿದ್ದೆ ಎಂದು ಲಂಡನ್‌ನ 31 ವರ್ಷದ ಮಹಿಳೆ ಹೇಳಿದರು.
‘‘ಬಾಗಿಲಿನ ಬೀಗದ ನನ್ನ ಬದಿಯ ಕೀಲಿಯನ್ನು ಹಿಡಿದುಕೊಂಡಿದ್ದೆ. ಇನ್ನೊಂದು ಬದಿಯಿಂದ ಅದನ್ನು ತಿರುಗಿಸುತ್ತಿರುವುದು ನನಗೆ ಗೊತ್ತಾಗುತ್ತಿತ್ತು’’ ಎಂದು ಅವರು ಬಿಬಿಸಿಗೆ ಹೇಳಿದರು.
ಮಹಡಿಯಿಂದ ಕೆಳಗೆ ಹಾರಿದುದರಿಂದ ಅವರ ಎರಡೂ ಕಾಲುಗಳಿಗೆ ಗಾಯವಾಗಿದೆ. ಆದರೆ, ತಾನು ಹಾರಿರದಿರುತ್ತಿದ್ದರೆ ತನ್ನ ಪರಿಸ್ಥಿತಿ ಇದಕ್ಕಿಂತಲೂ ಕೆಟ್ಟದಾಗಿರುತ್ತಿತ್ತು ಎಂದು ವೃತ್ತಿಯಲ್ಲಿ ದಂತ ಚಿಕಿತ್ಸಕಿಯಾಗಿರುವ ಮಹಿಳೆ ಹೇಳಿದರು.

ಬ್ರಿಟಿಶ್ ಮಹಿಳೆಗೆ ಕಿರುಕುಳ ನೀಡಿದ ಆರೋಪಕ್ಕೆ ಒಳಗಾಗಿರುವ ಹೊಟೇಲ್‌ನ ಮ್ಯಾನೇಜರ್ ಹಾಗೂ ಇನ್ನೊಬ್ಬ ಸಿಬ್ಬಂದಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ತನ್ನ ಸಹಾಯಕ್ಕೆ ಇತರ ಹೊಟೇಲ್ ನಿವಾಸಿಗಳು ಬರದಿದ್ದುದು ಅಸಹ್ಯಕರ ಎಂದು ಅವರು ಹೇಳಿದರು. ಮುಂಜಾನೆ 3.45ಕ್ಕೆ ಬಾಗಿಲಿಗೆ ಬಡಿದ ಸದ್ದು ಕೇಳಿದಾಗ ತನಗೆ ಆಶ್ಚರ್ಯವಾಯಿತು ಎಂದು ಈಗ ಬ್ರಿಟನ್‌ಗೆ ಪ್ರಯಾಣಿಸಿರುವ ಮಹಿಳೆ ಹೇಳಿದರು

No comments:

Post a Comment