Monday, March 11, 2013

ಗುಲ್ಝಾರ್ ಬಾನುವಿಗೆ ಮುಖಭಂಗ



ಮಂಗಳೂರು: ಕಳೆದ ಬಾರಿ ಅನಿರೀಕ್ಷಿತವಾಗಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಅಲಂಕರಿಸಿದ್ದ ಕಾಂಗ್ರೆಸ್‌ನ ಗುಲ್ಝಾರ್ ಬಾನು ಈ ಬಾರಿ 635 ಮತಗಳ ಅಂತರದಿಂದ ಸೋಲುಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಮೂಲಕ ಮನಪಾದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಎಸ್‌ಡಿಪಿಐ ಅಭ್ಯರ್ಥಿ ಅಯಾಝ್ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಾರೆ.
ಅಯಾಝ್ 1745 ಮತಗಳನ್ನು ಗಳಿಸಿದರೆ, ಗುಲ್ಝಾರ್ ಬಾನು 1110 ಮತಗಳನ್ನು ಮಾತ್ರ ಗಳಿಸಿ 635 ಮತಗಳ ಅಂತರಗಳ ಸೋಲು ಕಂಡಿದ್ದಾರೆ.
ಅಯಾಝ್ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಜೆಡಿಎಸ್ ಟಿಕೆಟ್ ಇಕ್ಬಾಲ್‌ರ ಪಾಲಾಯಿತು. ಇದರಿಂದ ಅಸಮಾಧಾನಗೊಂಡ ಅಯಾಝ್ ಪಕ್ಷೇತರರಾಗಿ ಸ್ಪರ್ಧಿಸಿ 838 ಮತ ಪಡೆದಿದ್ದರು. ಬಳಿಕ ಎಸ್‌ಡಿಪಿಐ ಪಕ್ಷ ಸೇರಿ ಕೃಷ್ಣಾಪುರ ವಲಯ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಇದೀಗ ಗುಲ್ಝಾರ್ ಬಾನುರನ್ನು ಸೋಲಿಸುವ ಮೂಲಕ ಎಸ್‌ಡಿಪಿಐ ಖಾತೆ ತೆರೆಯುವಂತೆ ಮಾಡಿದ್ದಾರೆ.
‘‘ಕಳೆದ 3 ವರ್ಷಗಳಿಂದ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗೆ ಸ್ಪಂದಿಸಿದ್ದರು. ಗುಲ್ಝಾರ್ ಮೇಯರ್ ಆಗಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿರಲಿಲ್ಲ. ಮತದಾರರು ನಮ್ಮ ಕೆಲಸ ನೋಡಿ ನನ್ನನ್ನು ಗೆಲ್ಲಿಸಿದ್ದಾರೆ’’ ಗೆಲುವಿನ ಬಳಿಕ ಅಯಾಝ್ ಪ್ರತಿಕ್ರಿಯಿಸಿದ್ದಾ

No comments:

Post a Comment