Monday, March 11, 2013

ಒಂದೇ ಒಂದು ಮತದಿಂದ ಸೋತ ಅಭ್ಯರ್ಥಿ: ಮಾವ-ಸೊಸೆಯ ಗೆಲುವು!ಶಿವಮೊಗ್ಗ: ಭದ್ರಾವತಿ ನಗರಸಭೆಯ ವಾರ್ಡ್ ಸಂಖ್ಯೆ 28 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮೀದೇವಿಯವರು ಒಂದೇ ಒಂದು ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪುಷ್ಪಾವತಿಯವರು 792 ಮತ ಪಡೆದರೇ, ಲಕ್ಷ್ಮೀದೇವಿಯವರು 793 ಮತ ಪಡೆದು ಒಂದು ಮತದ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.
ಸೊರಬ ಪಟ್ಟಣ ಪಂಚಾಯತ್‌ನ ಎರಡು ವಾರ್ಡ್‌ಗಳಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಮಾವ ಹಾಗೂ ಸೊಸೆ ಜಯಭೇರಿ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. 2ನೇ ವಾರ್ಡ್‌ನಲ್ಲಿ ಮಾವ ಶ್ರೀಧರ್ ಹಾಗೂ 8ನೇ ವಾರ್ಡ್‌ನಲ್ಲಿ ಸೊಸೆ ಶ್ರೀರಂಜಿನಿ ಗೆಲುವು ಸಾಧಿಸಿದ್ದಾರೆ. ಶ್ರೀಧರ್‌ರವರ ಈ ಗೆಲುವು 5ನೇ ಬಾರಿಯದ್ದಾಗಿದ್ದರೇ, ಶ್ರೀರಂಜನಿಯವರ ಗೆಲುವು ಇದೇ ಪ್ರಥಮದ್ದಾಗಿದೆ.
ಭದ್ರಾವತಿ ನಗರಸಭೆಯ 22ನೇ ವಾರ್ಡ್‌ನಲ್ಲಿ ಸಹೋದರರಾದ ನರಸಯ್ಯರವರು ಜೆಡಿಎಸ್‌ನಿಂದ ಹಾಗೂ ವೆಂಕಟಯ್ಯರವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಇದರಲ್ಲಿ ವೆಂಕಟಯ್ಯರವರು ಗೆಲುವು ಸಾಧಿಸಿದ್ದಾರೆ. ಶಿರಾಳಕೊಪ್ಪ ಪಟ್ಟಣ ಪಂಚಾಯತ್‌ನ ವಾರ್ಡ್‌ವೊಂದರಲ್ಲಿ ಬಿಎಸ್ಸಾರ್ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಿಎಸ್‌ಆರ್ ತನ್ನ ಖಾತೆ ತೆಗೆದಿದೆ.

No comments:

Post a Comment