Tuesday, March 5, 2013

ಪ್ರಣವ್ ವಾಸ್ತವ್ಯದ ಸಮೀಪ ನಾಡಬಾಂಬ್ ಸ್ಫೋಟಢಾಕಾ, ಮಾ.4: ನೆರೆಯ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವಾಸ್ತವ್ಯವಿರುವ ಅಲ್ಲಿನ ಹೊಟೇಲ್‌ನ ಹೊರ ಭಾಗ ದಲ್ಲಿ ನಾಡ ಬಾಂಬ್‌ವೊಂದು ಸ್ಫೋಟ ಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಕಡಿಮೆ ತೀವ್ರತೆಯ ನಾಡ ಬಾಂಬ್ ಸ್ಫೋಟಿಸಿದ್ದು, ಯಾರಿಗೂ ಅಪಾಯವಾಗಿಲ್ಲ ಎಂದು ಸ್ಥಳೀಯ ತೇಜ್‌ಗಾಂವ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಅಪೂರ್ವ ಹಸನ್ ಹೇಳಿದ್ದಾರೆ.
ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು, ಪ್ರಣವ್ ವಾಸ್ತವ್ಯವಿರುವ ಹೊಟೇಲ್‌ನ ಸಮೀಪವಿರುವ ಸಾರ್ಕ್ ಫೌಂಟೆನ್ ಬಳಿ ನಾಡ ಬಾಂಬ್ ಎಸೆದು ಪರಾರಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ಇಬ್ಬರೂ ತಪ್ಪಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಹಸನ್ ಹೇಳಿದ್ದಾರೆ.ಬಾಂಬ್ ದಾಳಿಯನಂತರ ಪ್ರಣವ್ ವಾಸ್ತವ್ಯವಿರುವ ಹೊಟೇಲ್‌ನ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮೂರು ದಿನಗಳ ಬಾಂಗ್ಲಾ ಭೇಟಿಗೆ ಇಲ್ಲಿಗೆ ಆಗಮಿಸಿರುವ ಪ್ರಣವ್, ದಾಳಿ ನಡೆದ ಸಮಯದಲ್ಲಿ ಹೊಟೇಲ್‌ನಲ್ಲಿದ್ದರೋ ಅಥವಾ ಹೊರಗಿದ್ದರೋ ಎಂಬುದು ತಿಳಿದುಬಂದಿಲ್ಲ

No comments:

Post a Comment